Davanagere ಜಿಲ್ಲೆಯಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಿಂದ ಪರಂಗಿ ಮತ್ತು ಅಡಿಕೆ ಬೆಳೆಗಳಿಗೆ ಭಾರೀ ಹಾನಿಯಾಗಿದೆ.

Davanagere ಜಿಲ್ಲೆಯಲ್ಲಿ ಮಂಗಳವಾರ (ಮೇ 19) ಸುರಿದ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಿಂದ ಹಲವು ಪ್ರದೇಶಗಳಲ್ಲಿ ಅಪಾರ ಬೆಳೆ ಹಾನಿ ಸಂಭವಿಸಿದೆ. ವಿಶೇಷವಾಗಿ ಪರಂಗಿ (ಪಪ್ಪಾಯ) ಮತ್ತು ಅಡಿಕೆ ಬೆಳೆಗಳು ನೆಲಕಚ್ಚಿದ್ದು ರೈತರು ತೀವ್ರ ನಷ್ಟ ಅನುಭವಿಸಿದ್ದಾರೆ.
ಜಗಳೂರು ತಾಲೂಕಿನ ಸಿದ್ದಮ್ಮನಹಳ್ಳಿ ಮತ್ತು ದೊಣ್ಣೆಹಳ್ಳಿ ಗ್ರಾಮಗಳಲ್ಲಿ ತಿಪ್ಪೇಸ್ವಾಮಿ ಹಾಗೂ ಬಸಪ್ಪ ಅವರಿಗೆ ಸೇರಿದ ಸುಮಾರು 2 ಎಕರೆ ಪಪ್ಪಾಯ ಬೆಳೆ ಸಂಪೂರ್ಣವಾಗಿ ಹಾನಿಗೊಂಡಿದೆ.ಈ ಘಟನೆದಿಂದ ರೈತರಿಗೆ ದೊಡ್ಡ ಆರ್ಥಿಕ ನಷ್ಟ ಉಂಟಾಗಿದೆ.
MUST READ : Mangalore : ಬೆಳ್ತಂಗಡಿ ನದಿಯಲ್ಲಿ ಮುಳುಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು..!!

ಉದ್ದಘಟ್ಟ ಗ್ರಾಮದಲ್ಲಿ ಗಾಳಿ-ಮಳೆಯ ರಭಸಕ್ಕೆ ಸರ್ಕಾರಿ ಶಾಲೆಯ ಮೇಲೆ ದೊಡ್ಡ ಮರ ಬಿದ್ದು ಕೊಠಡಿಯ ಶೀಟ್ಗಳು ಒಡೆದಿವೆ.ಇದರಿಂದ ಶಾಲೆಯ ಅಡುಗೆ ಕೊಠಡಿಯ ಗೋಡೆಗೂ ಬಿರುಕು ಉಂಟಾಗಿದೆ.
ಭರಮಸಮುದ್ರ ಗ್ರಾಮದಲ್ಲಿ ಮರ ಬಿದ್ದು ಮಹಾಂತೇಶ್ ಎಂಬುವವರ ಮನೆಗೆ ಹಾನಿಯಾಗಿದೆ.ಅದೇ ರೀತಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ನಿವಾಸಿಗಳು ನೀರನ್ನು ಹೊರಹಾಕಲು ಹರಸಾಹಸಪಟ್ಟಿದ್ದಾರೆ.
ಆಕಸ್ಮಿಕ ದುರಂತ
ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಗುಡುಗು ಸಿಡಿಲಿನ ಹೊಡೆತಕ್ಕೆ ಮಹಮದ್ ಗನಿ ಅವರ ಆಕಳು ಸಾವನ್ನಪ್ಪಿದ ಘಟನೆ ನಡೆದಿದೆ.ಈ ಘಟನೆ ಗ್ರಾಮದಲ್ಲಿ ಆತಂಕವನ್ನು ಉಂಟುಮಾಡಿದೆ.
MUST WATCH : High-Risk Pregnancy to Advanced Newborn & NICU Care | Aditi Multi-Specialty Hospital Tumakuru




