Chitradurga : 4 ವರ್ಷದ ಬಾಲಕ ದಾರುಣ ಸಾವು

ಎದೆಯಲ್ಲಿ ಉರಿ ಎಂದಿದ್ದ 4 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ನಡೆದಿದೆ. ಮೃತ ಬಾಲಕನನ್ನು ಹಿರಿಯೂರು ಬಿಜೆಪಿ ಅಧ್ಯಕ್ಷ ಅಭಿನಂದನ್ ಅವರ ಪುತ್ರ ವೈಷ್ಣವ್ ಎಂದು ಗುರುತಿಸಲಾಗಿದೆ.
ಇದನ್ನು ಓದಿ : ಜಿಮ್ ಮುಗಿಸಿ ಮನೆಗೆ ಬಂದ ಬಾಡಿ ಬಿಲ್ಡರ್ ಕುಸಿದು ಬಿದ್ದು ಸಾವು..!!

ಆಸ್ಪತ್ರೆಗೆ ತೋರಿಸಲು ಕರೆದೊಯ್ಯುವ ವೇಳೆ ಸಾವು
ಬೆಳಗ್ಗೆ ಎದ್ದ ಬಳಿಕ ವೈಷ್ಣವ್ ಎದೆಯಲ್ಲಿ ಉರಿ ಎಂದು ಪೋಷಕರಿಗೆ ಹೇಳಿದ್ದಾನೆ. ತಕ್ಷಣವೇ ಆತಂಕಗೊಂಡ ಕುಟುಂಬಸ್ಥರು ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ತೋರಿಸಲು ಕರೆದೊಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯೆಯೇ ವೈಷ್ಣವ್ ಮೃತಪಟ್ಟಿದ್ದಾನೆ.

Chitradurga – ಬಾಲಕನ ಸಾವಿಗೆ ನಿಖರ ಕಾರಣವೇನು?
ಬಾಲಕನ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವೈದ್ಯಕೀಯ ಪರೀಕ್ಷೆಯ ಬಳಿಕವೇ ಸಾವಿನ ಕಾರಣ ತಿಳಿಯುವ ಸಾಧ್ಯತೆಯಿದೆ.
ಇದನ್ನು ನೋಡಿ : ನಿರ್ಮಾಣ ಹಂತದ ಕ್ರೀಡಾಂಗಣದಲ್ಲಿ ದುರಂತ ಲಿಫ್ಟ್ ನ ಗುಂಡಿಗೆ ಬಿದ್ದು ಪುಟ್ಟ ಕಂದಮ್ಮ ಸಾ**




