BMTC ಪ್ರಯಾಣಿಕರಿಗೆ ಪ್ರಿಪೇಯ್ಡ್ ಕಾರ್ಡ್ ಸೌಲಭ್ಯ ಶೀಘ್ರದಲ್ಲೇ ಲಭ್ಯ. ಚಿಲ್ಲರೆ ಸಮಸ್ಯೆ, QR ವಂಚನೆ ತಪ್ಪಿಸಲು ಹೊಸ ವ್ಯವಸ್ಥೆ ಜೂನ್ನಲ್ಲಿ ಜಾರಿಗೆ ಸಾಧ್ಯತೆ.

BMTC ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮೆಟ್ರೋ ಕಾರ್ಡ್ನಂತೆಯೇ, ಈಗ ಬಸ್ ಪ್ರಯಾಣಕ್ಕೂ ರಿಚಾರ್ಜ್ ಮಾಡಬಹುದಾದ ಪ್ರಿಪೇಯ್ಡ್ ಕಾರ್ಡ್ ಪರಿಚಯಿಸಲು ಬಿಎಂಟಿಸಿ ಮುಂದಾಗಿದೆ.
ಈ ಹೊಸ ವ್ಯವಸ್ಥೆಯಿಂದ ಚಿಲ್ಲರೆ ಸಮಸ್ಯೆ ತಪ್ಪುತ್ತದೆ. ಜೊತೆಗೆ, ನೂಕುನುಗ್ಗಲಿನಲ್ಲಿ ಟಿಕೆಟ್ ತೆಗೆದುಕೊಳ್ಳುವ ಕಿರಿಕಿರಿ ಕಡಿಮೆಯಾಗುತ್ತದೆ. ಇನ್ನೂ ಮುಖ್ಯವಾಗಿ, QR ಕೋಡ್ ವಂಚನೆಗಳನ್ನು ತಪ್ಪಿಸಲು ಸಹ ಇದು ಸಹಾಯಕವಾಗಲಿದೆ.
MUST READ : Chitradurga : ಮೇ 9ರಂದು ಬಸ್ ಸಂಚಾರ ವ್ಯತ್ಯಯ ಸಾಧ್ಯತೆ..!!

ಹೇಗೆ ಕೆಲಸ ಮಾಡುತ್ತದೆ?
ಪ್ರಯಾಣಿಕರು ಪ್ರಿಪೇಯ್ಡ್ ಕಾರ್ಡ್ ಪಡೆದು, ಬಸ್ ಹತ್ತಿದಾಗ ETM ಯಂತ್ರಕ್ಕೆ ಟ್ಯಾಪ್ ಮಾಡಿದರೆ, ಪ್ರಯಾಣದ ದರ ಸ್ವಯಂ ಕಟ್ ಆಗುತ್ತದೆ. ಕೆಲವು ಸೆಕೆಂಡುಗಳಲ್ಲಿ ಟಿಕೆಟ್ ಸಿಗುತ್ತದೆ. ಹೀಗಾಗಿ, ಸಂಪೂರ್ಣ ಕ್ಯಾಶ್ಲೆಸ್ ಪ್ರಯಾಣ ಸಾಧ್ಯವಾಗುತ್ತದೆ.
ಯಾವಾಗ ಜಾರಿಗೆ?
ಎಲ್ಲವೂ ಯೋಜನೆಯಂತೆ ನಡೆದರೆ, ಈ ಪ್ರಿಪೇಯ್ಡ್ ಕಾರ್ಡ್ ವ್ಯವಸ್ಥೆ ಜೂನ್ ತಿಂಗಳಲ್ಲೇ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಬಿಎಂಟಿಸಿ ಸಿಟಿಎಂ ರಾಜೇಶ್ ತಿಳಿಸಿದ್ದಾರೆ.

ಪ್ರಿಪೇಯ್ಡ್ ಕಾರ್ಡ್ ಬೆಲೆ ಸುಮಾರು ₹50 ಆಗಿರುತ್ತದೆ. ಕನಿಷ್ಠ ₹50 ರೀಚಾರ್ಜ್ ಮಾಡಬೇಕು ಮತ್ತು ಗರಿಷ್ಠ ₹10,000 ವರೆಗೆ ಬ್ಯಾಲೆನ್ಸ್ ಇಟ್ಟುಕೊಳ್ಳಬಹುದು. ಕಾರ್ಡ್ ವ್ಯಾಲಿಡಿಟಿ 3 ವರ್ಷಗಳಾಗಿದ್ದು, ಬಳಕೆ ಮುಂದುವರಿದರೆ ಸ್ವಯಂ ನವೀಕರಣ (auto-renewal) ಆಗುತ್ತದೆ.
ಈ ಕಾರ್ಡ್ಗಳನ್ನು ಮೆಜೆಸ್ಟಿಕ್, ಶಾಂತಿನಗರ, ಶಿವಾಜಿನಗರ, ಯಶವಂತಪುರ ಸೇರಿದಂತೆ TTMC ಕೇಂದ್ರಗಳಲ್ಲಿ ಹಾಗೂ ಕಂಡಕ್ಟರ್ಗಳ ಮೂಲಕವೂ ವಿತರಣೆ ಮಾಡಲು ನಿರ್ಧರಿಸಲಾಗಿದೆ.
MUST WATCH : BENGALURU ಪೊಲೀಸರ ಭರ್ಜರಿ ಕಾರ್ಯಾಚರಣೆ – 9 ಕೋಟಿ ಮೌಲ್ಯದ DRUG SEIZE, ನಾಲ್ವರು ಅಂದರ್ | BENGALURU NEWS |




