Arsikere Fire : ಅರಸೀಕೆರೆ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ.

ಅರಸೀಕೆರೆ ನಗರದ ಪ್ರವಾಸಿ ಮಂದಿರ ಮುಂಭಾಗದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಐದನೇ ತರಗತಿಯ ರೂಂಗೆ ರಾತ್ರಿ ಸುಮಾರು 9 ಗಂಟೆಗೆ ಶಾಲೆಯ ಹಿಂಭಾಗದ ಕಿಟಕಿಯಿಂದ ಕಿಡಿಕೇಡಿಗಳು ಬೆಂಕಿ ಹಾಕಿ̧ದ್ದು ಶಾಲೆಯ ಗೋಡೆಗಳಿಗೆ ಹಾಗೂ ಬೀರುಗೆ ಬೆಂಕಿ ಹೊತ್ತುಕೊಂಡಿದೆ. ಈ ಬೆಂಕಿ ಅವಘಡದಲ್ಲಿ ವಿದ್ಯಾರ್ಥಿಗಳ ಪ್ರಾಜೆಕ್ಟ್ ವರ್ಕ್ ನ ಕಾಗದಗಳು ಸುಟ್ಟು ಕರಕಲಾಗಿವೆ.
ಬೆಂಕಿಗೆ ದಾಖಲೆಗಳು, ಮಕ್ಕಳ ಪಠ್ಯ ಭಸ್ಮ
ಶಾಲೆಯ ರೂಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿದ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿದರು, ಅದಾದ ಬಳಿಕ ಕೂಡಲೇ ಸಂಬಂಧಪಟ್ಟ ಶಿಕ್ಷಕರಿಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಶಿಕ್ಷಕರು ಶಾಲೆಯತ್ತ ದೌಡಾಯಿಸಿದರು. ಬೆಂಕಿ ಆರಿಸಿ, ಪರಿಶೀಲನೆ ನಡೆಸಿದರು. ಈ ವೇಳೆಗಾಗಲೇ ಬೆಂಕಿಯ ಕೆನ್ನಾಲಿಗೆಗೆ ಕೆಲ ದಾಖಲೆಗಳು ಸುಟ್ಟು ಕರಲಾಗಿದ್ದವು.
ಇದನ್ನು ಓದಿ : BBK 12|ಎರಡನೇ ಬಾರಿಗೆ ಕ್ಯಾಪ್ಟನ್ ಆದ ಧನುಷ್!

ಪೊಲೀಸ್ ಠಾಣೆಗೆ ಕಂಪ್ಲೇಂಟ್ ನೀಡುತ್ತೇವೆ
ಈ ವೇಳೆ ಶಿಕ್ಷಕರಾದ ಚಂದ್ರ ನಾಯಕ್ ಮಾತನಾಡಿ, ಈ ಹಿಂದೆ ಕೂಡ ಈ ಘಟನೆ ನಡೆದಿತ್ತು. ಕಿಟಕಿಗಳಿಗೆ ಜಾಲರಿ ಹಾಕಿಸಿದರು ಕೂಡ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ವಿದ್ಯಾರ್ಥಿಗಳ ಓದುವ ಪುಸ್ತಕಗಳು, ಮುಖ್ಯವಾದ ದಾಖಲೆಗಳು ಸುಟ್ಟು ಹೋಗಿವೆ. ಪೊಲೀಸ್ ಠಾಣೆಗೆ ಕಂಪ್ಲೇಂಟ್ ನೀಡುತ್ತೇವೆ. ಇದರ ಬಗ್ಗೆ ಸೂಕ್ತವಾಗಿ ಕ್ರಮತೆಗೆದುಕೊಂಡು ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕೆಂದು ಕೇಳಿಕೊಂಡರು.
ಕಿಡಿಗೇಡಿಗಳಿಗೆ ಕಠಿಣ ಶಕ್ಷೆ ಕೊಡಬೇಕು
ಈ ಶಾಲೆಯಲ್ಲಿ ಸುಮಾರು ಮಕ್ಕಳು ಓದುತ್ತಿದ್ದು, ಇಂತಹ ಘಟನೆ ನಡೆಯಬಾರದು. ಇಂತಹ ಕೆಲಸ ಮಾಡಿರುವ ಕಿಡಿಕೇಡಿಗಳನ್ನು ಪೊಲೀಸ್ ಇಲಾಖೆ ಹುಡುಕಿ ಕಠಿಣ ಶಿಕ್ಷೆ ಕೊಡಬೇಕು. ಈ ಶಾಲೆಯ ಸುತ್ತ ಕಸದ ರಾಶಿ ಹಾಗೂ ಕಿಟಕಿಗಳ ಸರಿ ಇಲ್ಲ. ಓದುವ ಜಾಗದಲ್ಲಿ ಸ್ವಚ್ಛತೆ ಇರಬೇಕು. ಇದರ ಬಗ್ಗೆ ಶಾಲೆಯ ಆಡಳಿತ ಮಂಡಳಿ ಗಮನಹರಿಸಬೇಕೆಂದು ಸ್ಥಳೀಯರ ಮನವಿ ಮಾಡಿದ್ದಾರೆ.

ಇದನ್ನು ನೋಡಿ : ತುಮಕೂರಿನಲ್ಲಿ ಬಾಲ ಕಾರ್ಮಿಕರು ಎಷ್ಟಿದ್ದಾರೆ ಬಾಲ ಕಾರ್ಮಿಕ ತಡೆಗೆ ಇಲಾಖೆಯಿಂದ ಕ್ರಮ




