Agniveer 2026 : ಭಾರತೀಯ ಸೇನಾ ಅಗ್ನಿವೀರ್ ನೇಮಕಾತಿ; ಪ್ರವೇಶ ಪತ್ರ ಮತ್ತು ಪರೀಕ್ಷಾ ವೇಳಾಪಟ್ಟಿ ಪ್ರಕಟ!

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಅಗ್ನಿವೀರ್ ನೇಮಕಾತಿ 2026 ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಅಗ್ನಿವೀರ್ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆಯ ದಿನಾಂಕವನ್ನು ಭಾರತೀಯ ಸೇನೆ ಅಧಿಕೃತವಾಗಿ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ಮೇ 15ರಿಂದ ಅಧಿಕೃತ ವೆಬ್ಸೈಟ್ ಮೂಲಕ ತಮ್ಮ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಪ್ರವೇಶ ಪತ್ರಗಳನ್ನು ಕೇವಲ ಆನ್ಲೈನ್ ಮೂಲಕ ಮಾತ್ರವೇ ನೀಡಲಾಗುವುದು ಎಂದು ಸೇನೆ ಸ್ಪಷ್ಟಪಡಿಸಿದೆ.
ಹುದ್ದೆಗಳ ವಿವರ
ಈ ಬಾರಿ ಅಗ್ನಿವೀರ್ ಜನರಲ್ ಡ್ಯೂಟಿ, ಟೆಕ್ನಿಕಲ್, ಸ್ಟೋರ್ಕೀಪರ್ ಕ್ಲರ್ಕ್ ಹಾಗೂ ಟ್ರೇಡ್ಸ್ಮನ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಜೊತೆಗೆ ಧಾರ್ಮಿಕ ಶಿಕ್ಷಕ (ಜೂನಿಯರ್ ಕಮಿಷನ್ಡ್ ಆಫೀಸರ್), ಹವಿಲ್ದಾರ್ ಶಿಕ್ಷಣ, ಸಿಪಾಯಿ ಫಾರ್ಮಾ ಮತ್ತು ಸೋಲ್ಜರ್ ಟೆಕ್ನಿಕಲ್ ಹುದ್ದೆಗಳಿಗೂ ಪ್ರವೇಶ ಪತ್ರ ಲಭ್ಯವಿರುತ್ತದೆ.
ಅಗ್ನಿವೀರ್ ನೇಮಕಾತಿಯ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಜೂನ್ 1ರಿಂದ ಜೂನ್ 15, 2026ರವರೆಗೆ ವಿವಿಧ ಹಂತಗಳಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿರುವ ಟ್ರೇಡ್ಗಳಿಗೆ ಅನುಗುಣವಾಗಿ ಪರೀಕ್ಷೆಯನ್ನು ಪ್ರತ್ಯೇಕವಾಗಿ ನಡೆಸಲಾಗುತ್ತದೆ.
READ THIS : ಬೌರಿಂಗ್ ಆಸ್ಪತ್ರೆ ದುರಂತ – ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ
ದೈಹಿಕ ಪರೀಕ್ಷೆ ವಿವರ
ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಂದಿನ ಹಂತವಾದ ದೈಹಿಕ ಪರೀಕ್ಷೆಗೆ ಅರ್ಹರಾಗುತ್ತಾರೆ. ಈ ಪರೀಕ್ಷೆಯನ್ನು ನಾಲ್ಕು ವಿಭಾಗಗಳಲ್ಲಿ ನಡೆಸಲಾಗುತ್ತದೆ. ಎಲ್ಲಾ ಅಭ್ಯರ್ಥಿಗಳು 9 ಅಡಿ ಉದ್ದದ ಜಿಗಿತ ಮತ್ತು ಜಿಗ್-ಜಾಗ್ ಬ್ಯಾಲೆನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ.
ಮೆರಿಟ್ ಪಟ್ಟಿಯಲ್ಲಿ ಓಟ ಮತ್ತು ಪುಲ್-ಅಪ್ಗಳಿಗೆ ವಿಶೇಷ ಅಂಕಗಳನ್ನು ನೀಡಲಾಗುತ್ತದೆ:
- ವರ್ಗ 1 (Category 1): 1.6 ಕಿ.ಮೀ ಓಟವನ್ನು 5:30 ನಿಮಿಷಗಳಲ್ಲಿ ಪೂರ್ಣಗೊಳಿಸಿದರೆ 60 ಅಂಕಗಳು, 10 ಪುಲ್-ಅಪ್ಗಳಿಗೆ 40 ಅಂಕಗಳು – ಒಟ್ಟು 100 ಅಂಕಗಳು
- ವರ್ಗ 2 (Category 2): 5:45 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿದರೆ 48 ಅಂಕಗಳು, 9 ಪುಲ್-ಅಪ್ಗಳಿಗೆ 33 ಅಂಕಗಳು
ಉಳಿದ ವಿಭಾಗಗಳಲ್ಲಿಯೂ ಓಟದ ಸಮಯ ಮತ್ತು ಪುಲ್-ಅಪ್ಗಳ ಸಂಖ್ಯೆಗೆ ಅನುಗುಣವಾಗಿ ಅಂಕಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಭಾರತೀಯ ಸೇನೆ ತಿಳಿಸಿದೆ.
MUST WATCH : MAMATHA BANERJEE ವಿರುದ್ಧ ರೊಚ್ಚಿಗೆದ್ದಿದ್ದ ಆ ಮಹಿಳೆ ಯಾರು ಗೊತ್ತಾ..? ಆಕೆಯ ಹೋರಾಟ ಹೇಗಿತ್ತು..?




