Indigo : ಇಂಡಿಗೋ ವಿಮಾನ ಹಾರಾಟ ರದ್ದಾಗಿದೆ. ಇದರಿಂದಾಗಿ ಏರ್ ಇಂಡಿಯಾ, ಸ್ಪೈಸ್ ಜೆಟ್ , ಆಕಾಶ ಏರ್, ಅಲೈಯನ್ಸ್ ಏರ್ ಕಂಪನಿಗಳು ತಮ್ಮ ಏರ್ ಟಿಕೆಟ್ ದರವನ್ನು ಸಿಕ್ಕಾಪಟ್ಟೆ ಏರಿಕೆ ಮಾಡಿವೆ.

Indigo : ಇಂಡಿಗೋ ವಿಮಾನಗಳ ಹಾರಾಟ ರದ್ದಾದ ಹಿನ್ನಲೆಯಲ್ಲಿ, ಇತರೆ ಏರ್ಲೈನ್ಸ್ಗಳು ಅವಕಾಶ ಬಳಸಿಕೊಂಡು ತಮ್ಮ ವಿಮಾನ ಟಿಕೆಟ್ ದರಗಳನ್ನು ಅತಿ ಹೆಚ್ಚು ಮಟ್ಟಕ್ಕೆ ಏರಿಸಿದ್ದು, ಪ್ರಯಾಣಿಕರಿಗೆ ಶಾಕ್ ನೀಡಿದೆ.
ಬೆಂಗಳೂರಿನಿಂದ ದೆಹಲಿಗೆ ನಾಳೆ ಟಿಕೆಟ್ ದರ 24,500 ರೂ.ದಿಂದ ಆರಂಭ!
ಸಾಮಾನ್ಯವಾಗಿ ₹5,000–₹7,000 ಇದ್ದ ಬೆಂಗಳೂರು–ದೆಹಲಿ ಮಾರ್ಗದ ವಿಮಾನ ಟಿಕೆಟ್ ದರ ಕನಿಷ್ಠ ₹24,500ರಿಂದ ಆರಂಭವಾಗಿ ಗರಿಷ್ಠ ₹39,719ರ ಮಟ್ಟಕ್ಕೆ ಏರಿಕೆಯಾಗಿದೆ.

ಚೆನ್ನೈ–ದೆಹಲಿ ಹಾಗೂ ಬೆಂಗಳೂರು ಮಾರ್ಗದ ದರವೂ ಗಗನಕ್ಕೇರಿದೆ
ಚೆನ್ನೈ–ದೆಹಲಿ ಮಾರ್ಗದ ಟಿಕೆಟ್ ದರವು ಕನಿಷ್ಠ ₹20,000ರಿಂದ ಆರಂಭವಾಗಿ ಗರಿಷ್ಠ ₹35,403ರವರೆಗೆ ಏರಿಕೆಯಾಗಿದೆ. ನಾಳೆ ದೆಹಲಿ–ಬೆಂಗಳೂರು ವಿಮಾನ ಟಿಕೆಟ್ ದರಗಳು ₹22,736ರಿಂದ ಆರಂಭವಾಗಿ ಗರಿಷ್ಠ ₹39,101ರವರೆಗೆ ಏರಿಕೆಯಾಗಿದೆ.
ಡಿಜಿಸಿಎ ಆದೇಶವಿದ್ದರೂ ಏರ್ಲೈನ್ಸ್ ಏರಿಕೆ!
ಡಿಜಿಸಿಎ (DGCA) ಈ ಪರಿಸ್ಥಿತಿಯಲ್ಲಿ ವಿಮಾನ ಟಿಕೆಟ್ ದರಗಳನ್ನು ಹೆಚ್ಚಿಸಬಾರದೆಂದು ಸ್ಪಷ್ಟ ಸೂಚನೆ ನೀಡಿದ್ದರೂ, ಏರ್ ಇಂಡಿಯಾ, ಸ್ಪೈಸ್ ಜೆಟ್, ಆಕಾಶ್ ಏರ್ ಮತ್ತು ಅಲೈಯನ್ಸ್ ಏರ್ ಕಂಪನಿಗಳು ತಮ್ಮ ದರವನ್ನು ಇಳಿಸದೆ–ಮಾತ್ರವಲ್ಲದೇ–ಗಣನೀಯವಾಗಿ ಹೆಚ್ಚಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ : Bomb Threat : ಹುಸಿ ಬಾಂಬ್ ಕರೆ – ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್!

ಪ್ರಯಾಣಿಕರಿಗೆ ಸಂಕಷ್ಟ
ಟಿಕೆಟ್ ದರಗಳ ಹಠಾತ್ ಏರಿಕೆಯಿಂದ ಪ್ರಯಾಣಿಕರು ಗೊಂದಲಕ್ಕೆ ಸಿಲುಕಿದ್ದು, ವಿಮಾನ ನಿಲ್ದಾಣಗಳಲ್ಲೇ ಪರದಾಡುತ್ತಿದ್ದಾರೆ. ಇನ್ನು ಇಂಡಿಗೋ ಸಿಇಒ ಪೀಟರ್ ಅಲ್ಬರ್ಸ್ ಅವರು ಸಂಪೂರ್ಣ ಸ್ಥಿತಿ ಚೇತರಿಸಿಕೊಳ್ಳಲು ಡಿಸೆಂಬರ್ 15ರವರೆಗೆ ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇಂಡಿಗೋ ಸಂಚಾರ ಸಹಜ ಸ್ಥಿತಿಗೆ ಇನ್ನೂ ಸಮಯ ಬೇಕು
ವಿಮಾನ ಸಂಚಾರ ವ್ಯತ್ಯಯದ ಪರಿಣಾಮವಾಗಿ ಸಾವಿರಾರು ಪ್ರಯಾಣಿಕರು ದೇಶದ ಅನೇಕ ವಿಮಾನ ನಿಲ್ದಾಣಗಳಲ್ಲಿ ಪರದಾಡುತ್ತಿರುವುದು ಗಂಭೀರ ಚರ್ಚೆಗೆ ಗ್ರಾಸವಾಗಿದೆ.
MUST WATCH : ಇಂಡಿಗೋ ವಿಮಾನಗಳ ಹಾರಾಟ ರದ್ದು – ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಪ್ರಯಾಣಿಕರ ಆಕ್ರೋಶ




