ಗೃಹಲಕ್ಷ್ಮಿಯರಿಗೆ ಗುಡ್ನ್ಯೂಸ್ – 30 ಸಾವಿರದಿಂದ 3 ಲಕ್ಷದವರೆಗೆ Personal Loan ಭಾಗ್ಯ.

ಕರ್ನಾಟಕ ಸರ್ಕಾರ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಗುಡ್ನ್ಯೂಸ್ ನೀಡಿದೆ. ಮಹಿಳೆಯರಿಗೆ ವೈಯಕ್ತಿಕ ಸಾಲ (Personal Loan) ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ. ಪ್ರಾರಂಭಿಕ ಹಂತದಲ್ಲಿ ₹30,000 ರಿಂದ ₹3 ಲಕ್ಷವರೆಗೆ ಸಾಲ ಸಿಗಲಿದ್ದು, ಮುಂದಿನ ದಿನಗಳಲ್ಲಿ ಈ ಮೊತ್ತವನ್ನು ₹6 ಲಕ್ಷಕ್ಕೆ ಹೆಚ್ಚಿಸುವ ಯೋಜನೆ ಇದೆ.
ಇದನ್ನು ಓದಿ : ಲಾರಿ–ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ – ಬೈಕ್ ಸವಾರ ಸಾವು
ನೋಂದಣಿ ಮಾಡಿಕೊಂಡರೆ Personal Loan!
ಮುಂದಿನ ಆರು ತಿಂಗಳಲ್ಲಿ ಪ್ರತಿ ಪಂಚಾಯ್ತಿ ಮಟ್ಟದಲ್ಲಿ ಗೃಹಲಕ್ಷ್ಮೀ ಸಹಕಾರಿ ಸಂಘ ಸ್ಥಾಪನೆ ಮಾಡುವ ಯೋಜನೆ ಇದೆ. ಮಹಿಳೆಯರು ಈ ಸಂಘದ ಸದಸ್ಯರಾಗಲು
- ₹1,000 ನೀಡಿ ಸದಸ್ಯತ್ವ ಪಡೆಯಬೇಕು
- ನಂತರ ಪ್ರತಿ ತಿಂಗಳು ₹200 ಶುಲ್ಕ ಪಾವತಿಸಬೇಕು
ಸದಸ್ಯರಾದ ಬಳಿಕ, ಅಗತ್ಯಕ್ಕೆ ತಕ್ಕಂತೆ ₹30 ಸಾವಿರದಿಂದ ₹3 ಲಕ್ಷವರೆಗೆ ವೈಯಕ್ತಿಕ ಸಾಲ ಸಿಗಲಿದೆ.
ಅರ್ಜಿ ಸಲ್ಲಿಸುವ ಅವಧಿ
ಈ ಯೋಜನೆ ಮುಂದಿನ 6 ತಿಂಗಳಲ್ಲಿ ಜಾರಿಗೆ ಬರಲಿದೆ. ಸಾಲ ಸೌಲಭ್ಯಕ್ಕಾಗಿ 30 ರಿಂದ 60 ದಿನಗಳ ಅವಧಿ ಇರುತ್ತದೆ. ಅಷ್ಟರೊಳಗೆ ಅರ್ಜಿ ಸಲ್ಲಿಸಿದ್ರೆ ಮಾತ್ರ ಸೌಲಭ್ಯ ಸಿಗಲಿದೆ. ರಾಷ್ಟ್ರಿಕೃತ ಬ್ಯಾಂಕ್ಗಳ ಬಡ್ಡಿ ಅನ್ವಯದಲ್ಲಿ ಸಾಲ ಸೌಲಭ್ಯ ಸಿಗಲಿದೆ.
ಇದನ್ನು ನೋಡಿ : ದೆಹಲಿಯಲ್ಲಿ ಇಂದು ಮಧ್ಯರಾತ್ರಿವರೆಗೆ ಎಲ್ಲಾ ಇಂಡಿಗೋ ದೇಶೀಯ ವಿಮಾನಗಳ ಹಾರಾಟ ರದ್ದು




