
CHIKKABALLAPURA : ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರೇ ನೀವು ಒಮ್ಮೆ ಈ ಸುದ್ದಿಯನ್ನು ನೋಡಿಬಿಡಿ. ನಿಮ್ಮದೆ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಮದ್ಯ ಮಾರಾಟ. ಬೆಳ್ಳಂ ಬೆಳಗ್ಗೆಯೇ ಟಿ.ಕಾಫಿ ಕುಡಿಯುವ ಟೈಮ್ ನಲ್ಲಿ ಸಿಗುತ್ತಿದೆ ಎಣ್ಣೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಣ್ಣೆ ಮಾರಾಟ ಅನ್ನೋದು ಎಗ್ಗಿಲ್ಲದೆ ನಡೆಯುತ್ತಿದೆ. ಈ ಮದ್ಯ ಮಾರಾಟದ ಕುರಿತಾಗಿ ನಿಮ್ಮ ಪ್ರಜಾಶಕ್ತಿ ಟಿವಿ ಹಲವು ಭಾರಿ ಸುದ್ದಿ ಮಾಡಿ, ಅಧಿಕಾರಿಗಳನ್ನು ಎಚ್ಚರಿಸುವಂತ ಕೆಲಸ ಮಾಡುತ್ತಿದೆ. ಆದ್ರೆ ಅದ್ಯಾಕೋ ಇಂದಿಗೂ ಕೂಡ ಚಿಕ್ಕಬಳ್ಳಾಪುರದಲ್ಲಿ ಮದ್ಯ ಮಾರಾಟ ಅನ್ನೋದು ಕಡಿಮೆಯಾಗುತ್ತಿಲ್ಲ. ದಿನದ 24 ಗಂಟೆಯೂ ಬಾರ್ಗಳಲ್ಲಿ ಎಣ್ಣೆ ಸಿಗುತ್ತಿದೆ ಅನ್ನೋ ಮಾತುಗಳು ಕೇಳಿಬರ್ತಿವೆ. ಇತ್ತ ಬೆಳ್ಳಂ ಬೆಳಗ್ಗೆಯೇ ಟೀ,ಕಾಫಿ ಕುಡಿಯುವ ಸಮಯದಲ್ಲಿಯೇ ಎಣ್ಣೆ ಸಿಗುತ್ತಿದೆ. ಮುಂಜಾನೆಯೇ ಬಾರ್ ಅಂಗಡಿಗಳಲ್ಲಿ ಎಣ್ಣೆ ಸಿಗುತ್ತಿದ್ದು, ಪ್ರಜಾಶಕ್ತಿ ಟಿವಿಯ ಸ್ಟಿಂಗ್ ಆಪರೇಷನ್ ನಲ್ಲಿ ಬಟಾಬಯಲಾಗಿದೆ.
ಹೌದು.. ಚಿಕ್ಕಬಳ್ಳಾಪುರ ನಗರದಲ್ಲಿರುವ ಬಹತೇಕ ಬಾರ್ ಗಳಲ್ಲಿ ಮುಂಜಾನೆಯೇ ಮದ್ಯ ದೊರೆಯುತ್ತಿದೆ. ಮದ್ಯ ಮಾರಾಟದ ಕುರಿತಾಗಿ ಸ್ಟ್ರೀಕ್ಟ್ ಆಗ ಕಾನೂನು ಇದ್ದರೂ ಕೂಡ ಹಲವು ಬಾರ್ ಗಳು ಕಾನೂನನ್ನು ಗಾಳಿಗೆ ತೂರಿವೆ. ಇದೇ ಕಾರಣಕ್ಕೆ ಹಲವು ಬಾರ್ ಗಳಲ್ಲಿ ಮದ್ಯ ದೊರೆಯುತ್ತಿದೆ. ನಗರದ ಗೌರಿಬಿದನೂರು ರಸ್ತೆ, ಪ್ರಶಾಂತ ನಗರಕ್ಕೆ ಹೋಗುವ ರಸ್ತೆಯಲ್ಲಿರುವ ಪಲ್ಲವಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಮುಂಜಾನೆಯೇ ಎಣ್ಣೆ ಸಿಗುತ್ತಿದ್ದು, ಕೂಲಿ ಕೆಲಸಕ್ಕೆ ಹೋಗುವ ಕಾರ್ಮಿಕರು, ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಅಮಾಲಿಗಳು ಬೆಳ್ಳಂಬೆಳಗ್ಗೆಯೇ ಎಣ್ಣೆಗೆ ದಾಸರಾಗುತ್ತಿದ್ದಾರೆ
ಇನ್ನು ಅಬಕಾರಿ ಅಧಿಕಾರಿಗಳಿಗೆ ಬಾರ್ ಓಪನ್ ಇರುವ ವಿಷಯ ತಿಳಿದಿದ್ದರೂ ಅದ್ಯಾಕೋ ಜಾಣಕುರುಡುತನ ತೋರಿಸುತ್ತಿದ್ದಾರೆ. ಬೆಳಂಬೆಳಗ್ಗೆ ಬಾರ್ ಓಪನ್ ಆದ್ರು ಅಬಕಾರಿ ಇಲಾಖೆ ಮಾತ್ರ ಸೈಲೆಂಟ್ ಆಗುತ್ತಿದ್ದಾರೆ. ಇತ್ತ ಗೌರಿಬಿದನೂರು ರಸ್ತೆಯಲ್ಲಿರುವ ವಿನಾಯಕ ವೈನ್ಸ್ ನಲ್ಲಿಯೂ ಕೂಡ ಮುಂಜಾನೆಯೇ ಎಣ್ಣೆ ಸಿಗುತ್ತಿದೆ. ಒಟ್ಟಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆಯೇ ಎಗ್ಗಿಲ್ಲದೆ ನಡೆಯುತ್ತಿದೆ ಮದ್ಯ ಮಾರಾಟ, ಇದರಿಂದಾಗಿ ಕೂಲಿನಾಲಿ ಮಾಡಿಕೊಂಡು ಬದುಕುವ ಜನರು ಎಣ್ಣೆಗೆ ದಾಸರಾಗಿ ಹಾಳಾಗಿ ಹೋಗುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಶಾಸಕ ಪ್ರದೀಪ್ ಈಶ್ವರ್ ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಿ, ಸೂಕ್ತ ಕ್ರಮಜರುಗಿಸುವ ಅಗತ್ಯತೆ ಇದೆ.




