Darshan : ಆದಾಯ ತೆರಿಗೆ ಇಲಾಖೆಗೆ 82 ಲಕ್ಷ – ದರ್ಶನ್ಗೆ ಬಿಗ್ ಶಾಕ್

ನಟ ದರ್ಶನ್ (Actor Darshan) ನಿವಾಸದಲ್ಲಿ ಪತ್ತೆಯಾಗಿರುವ 82 ಲಕ್ಷ ರೂ. ಹಣವನ್ನು ಆದಾಯ ತೆರಿಗೆ (ಐಟಿ) ಇಲಾಖೆಯಲ್ಲೇ ಇರಲಿ ಎಂದು 57ನೇ ಸಿಸಿಎಚ್ ಕೋರ್ಟ್ (CCH Court) ಆದೇಶಿಸಿದೆ.
ದರ್ಶನ್ಗೆ ಬಿಗ್ ಶಾಕ್
ತನಿಖೆ ವೇಳೆ ಕಾಮಾಕ್ಷಿಪಾಳ್ಯ ಪೊಲೀಸರ ತಂಡ ದರ್ಶನ್ ಮನೆ ಮತ್ತು ಪ್ರದೋಷ್ ಮನೆಯಲ್ಲಿ ಹಣ ವಶಕ್ಕೆ ಪಡೆದು ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆ ಮಾಡಿದ್ರು. ತನಿಖೆ ನಡೆಸಿದ ಐಟಿ ಇನ್ನೂ ಸ್ಪಷ್ಟವಾದ ಮಾಹಿತಿ ನೀಡಿರಲಿಲ್ಲ. ಈ ಸಂದರ್ಭದಲ್ಲಿ ದರ್ಶನ್ 82 ಲಕ್ಷ ರೂ. ಹಣ ವಾಪಸ್ ನೀಡಲು ಕೋರ್ಟ್ಗೆ ಮನವಿ ಮಾಡಿದ್ದರು. ಆದಾಯ ತೆರಿಗೆ ಇಲಾಖೆ ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿ, ತನಿಖೆ ಮುಂದುವರಿಯಬೇಕಾಗಿದೆ ಎಂದು ವಾದಿಸಿತು.
ಇದನ್ನು ಓದಿ : ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಬಿಸಿಯೂಟ ಜತೆಗೆ ಸಿಗಲಿದೆ ಹಾಲು, ಮೊಟ್ಟೆ, ಬಾಳೆಹಣ್ಣು

ಇನ್ನು ನ್ಯಾಯಾಲಯ ವಾದ–ಪ್ರತಿವಾದಗಳನ್ನು ಆಲಿಸಿದ ನಂತರ, ಹಣವು ಐಟಿ ಇಲಾಖೆ ಬಳಿಯಲ್ಲೇ ಇರಲಿ ಮತ್ತು ತನಿಖೆ ಮುಂದುವರಿಯಲಿ ಎಂದು ಕೋರ್ಟ್ ಆದೇಶ ನೀಡಿತು.
ವಂಚನೆಯ ಹಣವೆಂದು ವಾದ
ದರ್ಶನ್ ಪರ ವಕೀಲರು ವಾದಿಸಿದಂತೆ, ಈ ಹಣದ ಮೂಲ ಮೋಹನ್ ರಾಜ್ ಅವರಿಗೆ ನೀಡಿದ್ದ ಸಾಲವಿತ್ತು. ಮೋಹನ್ ರಾಜ್ ಈ ಹಣವನ್ನು ದರ್ಶನ್ಗೆ ಮರಳಿ ನೀಡಿದ್ದರು. ದರ್ಶನ್ ಮನೆಗೆ ಬಂದ ಈ ಹಣವನ್ನು ಅವರು ಉಳಿಸಿಕೊಂಡಿದ್ದರು. ಆದರೆ ಆದಾಯ ತೆರಿಗೆ ಇಲಾಖೆ, ದರ್ಶನ್ ಈ ಹಣಕ್ಕೆ ಸೂಕ್ತ ದಾಖಲೆ ಸಲ್ಲಿಸಿಲ್ಲವೆಂದು ವಂಚನೆಯ ಹಣ ಎಂದು ವಾದಿಸಿತು.

ಇದನ್ನು ನೋಡಿ : ಡಿವೈಡರ್ ಗೆ ಡಿಕ್ಕಿಯಾಗಿ ಬಸ್ ಪಲ್ಟಿ – ಓರ್ವ ಸಾವು ಹಲವರಿಗೆ ಗಂಭೀರ ಗಾಯ




