BBK S12 : BBK12 ನಲ್ಲಿ ರಘು–ಗಿಲ್ಲಿ ಜಗಳ ತೀವ್ರಗೊಂಡಿದ್ದು, ನಾಮಿನೇಷನ್ ವೇಳೆ ‘ಬಾಹುಬಲಿ ಕಟ್ಟಪ್ಪ’ ಸೀನ್ ಹೋಲಿಕೆ ವೈರಲ್ ಆಯಿತು.

BBK S12 : ಬಿಗ್ ಬಾಸ್ ಮನೆಯಲ್ಲೀಗ ರಘು ಮತ್ತು ಗಿಲ್ಲಿ ನಡುವಿನ ಸ್ನೇಹಕ್ಕೆ ಬಿರುಕು ಬಿದ್ದಿದೆ. ಇಬ್ಬರು ಸ್ಪರ್ಧಿಗಳ ನಡುವೆ ನಡೆದ ವಾದ–ವಿವಾದ, ನಾಮಿನೇಷನ್ ಡ್ರಾಮಾ ಮತ್ತು ‘ಬಾಹುಬಲಿ ಕಟ್ಟಪ್ಪ’ ಸೀನ್ ಹೋಲಿಕೆಯ ಪೋಸ್ಟ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ರಘು–ಗಿಲ್ಲಿ ಸ್ನೇಹಕ್ಕೆ ಬಿರುಕು
ಒಮ್ಮೆ ಕುಚಿಕು ಗೆಳೆಯರಂತೆ ಕಂಡು ಬಂದಿದ್ದ ರಘು ಮತ್ತು ಗಿಲ್ಲಿ ಈಗ ಪರಸ್ಪರ ವಿರೋಧಿಗಳಾಗಿದ್ದಾರೆ. ರಘು ಅವರು ಗಿಲ್ಲಿಯನ್ನು ನಾಮಿನೇಟ್ ಮಾಡಿದ್ದು ಬಿರುಕು ಹುಟ್ಟುವ ಮೊದಲ ಕಾರಣ.
ಸದಾ ಒಟ್ಟಿಗೇ ಕಾಣಿಸಿಕೊಂಡಿದ್ದ ಈ ಜೋಡಿಯ ನಡುವೆ now misunderstanding ಮೂಡಿದ್ದು ವೀಕ್ಷಕರಿಗೂ ಬೇಸರ ತಂದಿದೆ.
‘ಬಾಹುಬಲಿ ಕಟ್ಟಪ್ಪ’ ಸೀನ್ ಹೋಲಿಕೆ!
ಬಿಗ್ ಬಾಸ್ ನೀಡಿದ ಟಾಸ್ಕ್ನಲ್ಲಿ ಸ್ಪರ್ಧಿಗಳು ಚೂರಿ ಇರಿಯುವ ಮೂಲಕ ನಾಮಿನೇಟ್ ಮಾಡಬೇಕಿತ್ತು.ರಘು ಅವರು ಗಿಲ್ಲಿ ಬೆನ್ನಿಗೆ ಚೂರಿ ಇರಿಸಿ ನಾಮಿನೇಟ್ ಮಾಡಿದ ಕ್ಷಣವೇ ವೈರಲ್ ಆಯಿತು.
ವೀಕ್ಷಕರು ಇದನ್ನು ‘ಬಾಹುಬಲಿ ಕಟ್ಟಪ್ಪ–ಬಾಹುಬಲಿ’ ಸೀನ್ಗೆ ಹೋಲಿಸಿ ಮಿಮ್ಸ್, ಪೋಸ್ಟ್ಗಳನ್ನು ಮಾಡುತ್ತಿದ್ದಾರೆ.
ಗಿಲ್ಲಿ ಪ್ರತಿಕ್ರಿಯೆ “ಒಳ್ಳೆಯವರ ಜೊತೆ ಫ್ರೆಂಡ್ಶಿಪ್ ಮಾಡ್ರಪ್ಪ”
ನಾಮಿನೇಷನ್ ನಂತರ ಗಿಲ್ಲಿ ರಘುವಿಗೆ ಹೀಗೆ ಹೇಳಿದರು “ಮನೆಯಿಂದ ಆಚೆ ಹೋಗಬೇಕಾದ್ರೆ ಒಳ್ಳೆಯವರ ಜೊತೆ ಫ್ರೆಂಡ್ಶಿಪ್ ಮಾಡ್ರಪ್ಪ… ಹೀಗೆ ಮಾಡಿದ್ರೆ ನಾವು ಎಲ್ಲಿಗೆ ಹೋಗೋದು?” ಈ ಡೈಲಾಗ್ ಕೂಡ ನೆಟಿಜನ್ಗಳ ನಡುವೆ ವೈರಲ್ ಆಗಿದೆ.
ಧನುಷ್ ರ್ಯಾಂಕಿಂಗ್ ಟಾಸ್ಕ್ – ಮತ್ತೊಂದು ಗಲಾಟೆ
ಬಿಗ್ ಬಾಸ್ ಧನುಷ್ಗೆ ರ್ಯಾಂಕಿಂಗ್ ಟಾಸ್ಕ್ ನೀಡಿದ್ದರು. ಧನುಷ್ ಗಿಲ್ಲಿಗೆ 2ನೇ ರ್ಯಾಂಕ್ ನೀಡಿದ್ದು ರಘುಗೆ ತಲೆನೋವು ತಂದಿತು. ಇದರಿಂದ ಇಬ್ಬರ ನಡುವೆ ತೀವ್ರವಾದ ವಾಗ್ವಾದ ನಡೆಯಿತು.ರಘು ಮೊದಲಿಗೆ ಧ್ರುವಂತ್, ನಂತರ ಗಿಲ್ಲಿಯನ್ನು ಎರಡನೇ ಬಾರಿ ನಾಮಿನೇಟ್ ಮಾಡಿದರು. ಗಿಲ್ಲಿ ಅಭಿಮಾನಿಗಳು ಈ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಿಲ್ಲಿ Vs ರಘು: ಆರೋಪ–ಪ್ರತಿಯಾಗಿ
ಗಿಲ್ಲಿ ರಘುವಿಗೆ ಸ್ಪಷ್ಟವಾಗಿ ಎದುರಿಸಿದ್ದಾರೆ ,ನನ್ನ ಡ್ರಾಯರ್ಗೆ ಕೈ ಹಾಕಿ ಬಟ್ಟೆ ಮುಟ್ಟೋಕೆ ನೀನ್ಯಾರು? ನೀನೇ ತಪ್ಪು ಮಾಡಿದ್ದೆ… ಟಾಸ್ಕ್ಗಳಲ್ಲಿ ನಾನೂ equally ಆಡಿದ್ದೆ.”
ಇದಕ್ಕೆ ಪ್ರತಿಯಾಗಿ ರಘು, “ನನ್ನ ಪಕ್ಕ ಇನ್ನು ಕೂರುಬೇಡ”ಎಂದು ಗಿಲ್ಲಿಗೆ ಹೇಳಿದ್ದಾರೆ.
ಆದರೂ ಗಿಲ್ಲಿ ಹೇಳಿದ್ದು: ನೀನಂದ್ರೆ ನಂಗೆ ಇಷ್ಟ… ನಿನ್ನ ಫ್ರೆಂಡ್. ಕುಚ್ಚಿಕ್ಕುನಾ ನಾನೇ ಬಿಟ್ಟುಕೊಡೋದಿಲ್ಲ.”
ರಾಶಿಕಾ–ಗಿಲ್ಲಿ ಮಾತಿನ ಚಕಮಕಿ
ಇಂದಿನ ಎಪಿಸೋಡ್ನಲ್ಲಿ: ರಾಶಿಕಾ ಮತ್ತು ಗಿಲ್ಲಿ ನಡುವೆ ತೀವ್ರ ವಾಗ್ವಾದ ನಡೆದಿದೆ. ರಾಶಿಕಾ, ಕಾವ್ಯ ಗಿಲ್ಲಿಗೆ ಮಾತ್ರ ಸ್ಟ್ಯಾಂಡ್ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಕಾವ್ಯ ಗಟ್ಟಿಯಾಗಿ ಪ್ರತಿಕ್ರಿಯಿಸಿ, ತಾಕತ್ತು ಇದ್ದರೆ ಬೇರೆ ಜನರು ಫ್ರೆಂಡ್ಶಿಪ್ ಮಾಡಿ ತೋರಿಸಲಿ ಎಂದಿದ್ದಾರೆ.




