Vijayapura : ಮನೆಯಲ್ಲಿ ಯಾರು ಇಲ್ಲದ ವೇಳೆ ಸಿಲಿಂಡರ್ ಸ್ಫೋಟಗೊಂಡು 7 ವರ್ಷದ ಹಿಂದೆ ನಿರ್ಮಿಸಿದ್ದ ಮನೆಯ ಗೋಡೆ ಕುಸಿದಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ (Talikote) ನಡೆದಿದೆ.

Vijayapura: ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅವಘಡ ಸಂಭವಿಸಿದೆ.
ವಿಜಯಪುರದಲ್ಲಿ ಸಿಲಿಂಡರ್ ಸ್ಫೋಟ – 7 ವರ್ಷದ ಮನೆಯೇ ಜಖಂ!
ರವಿ ಕೋಳುರ್ ಎಂಬುವವರ ಮನೆಯಲ್ಲಿ ಮಂಗಳವಾರ ಸಂಭವಿಸಿದ ಈ ಸ್ಫೋಟಕ್ಕೆ ಗ್ಯಾಸ್ ಲೀಕ್ ಕಾರಣವಾಗಿದೆ ಎಂದು ತಿಳಿದುಬಂದಿದೆ. ಮನೆಯ ಅಡುಗೆ ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿ, ದೇವರ ಮುಂದೆ ಇಟ್ಟಿದ್ದ ದೀಪಕ್ಕೆ ತಗುಲಿ ಸ್ಫೋಟ ಸಂಭವಿಸಿದೆ.
ಇದನ್ನೂ ಓದಿ: Cylinder Blast : ಸಿಲಿಂಡರ್ ಸ್ಫೋಟ – ಓರ್ವ ಸಾವು
ಮನೆಯ ಗೋಡೆ ಕುಸಿದು ಸ್ಥಳೀಯರಲ್ಲಿ ಆತಂಕ
7 ವರ್ಷಗಳ ಹಿಂದೆ ನಿರ್ಮಿಸಿದ್ದ ಮನೆ ಸ್ಫೋಟದ ತೀವ್ರತೆಗೆ ತೀವ್ರ ಹಾನಿಗೊಳಗಾಗಿದೆ. ಮನೆಯ ಕಿಟಕಿಗಳ ಗಾಜುಗಳು, ಬಾಗಿಲುಗಳು ಪೂರ್ತಿಯಾಗಿ ಒಡೆದುಹೋಗಿದ್ದು, ಗೋಡೆಯೊಂದು ಕುಸಿದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಪೀಠೋಪಕರಣ–ದಾಖಲೆಗಳೆಲ್ಲ ಭಸ್ಮ
ಸ್ಫೋಟದ ಪರಿಣಾಮವಾಗಿ ಮನೆಯಲ್ಲಿ ಇದ್ದ ಪೀಠೋಪಕರಣಗಳು, ಬಟ್ಟೆಗಳು ಹಾಗೂ ಮಹತ್ವದ ದಾಖಲೆಗಳು ಬೆಂಕಿಗೆ ಆಹುತಿಯಾಗಿ ನಾಶವಾಗಿವೆ. ಘಟನೆಯ ನಂತರ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಈ ಸಂಬಂಧ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
MUST WATCH: CYLINDER BLAST | ಸಿಲಿಂಡರ್ ಸ್ಫೋಟಕ್ಕೆ ಟೀ ಶಾಪ್ ಭಸ್ಮ ನೆರವಾಗದ ನಗರಸಭೆ ವಿರುದ್ಧ ಆಕ್ರೋಶ




