Helmet Mandatory : ಜವಾಬ್ದಾರಿಯುತವಾಗಿ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯುವ ಪೋಷಕರಿಗೆ ಬಿಸಿ ಮುಟ್ಟಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ.

ಬೆಂಗಳೂರು ಟ್ರಾಫಿಕ್ ಪೊಲೀಸರು ದ್ವಿಚಕ್ರ ವಾಹನಗಳಲ್ಲಿ ಮಕ್ಕಳನ್ನು ನಿರ್ಲಕ್ಷ್ಯದಿಂದ ಕರೆದೊಯ್ಯುವ ಪೋಷಕರಿಗೆ ಕಟ್ಟುನಿಟ್ಟಿನ ಸಂದೇಶ ನೀಡಿದ್ದಾರೆ. ಮುಂದಿನ ಆರು ತಿಂಗಳಲ್ಲೇ 9 ತಿಂಗಳು–4 ವರ್ಷದ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ ಮಾಡುವ ನಿಯಮ ಜಾರಿಯಾಗಲಿದೆ. ಸರ್ಕಾರ ಪರಿಷ್ಕೃತ ನಿಯಮಕ್ಕೆ ಅಗತ್ಯ ಸಿದ್ಧತೆಗಳನ್ನು ಈಗಾಗಲೇ ಆರಂಭಿಸಿದೆ.
ಹೈಕೋರ್ಟ್ ಆದೇಶದ ಬೆನ್ನಲ್ಲೇ ಕ್ರಮ
ಮಕ್ಕಳು ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಕುಳಿತು ಪ್ರಯಾಣಿಸುವಾಗ ಗರಿಷ್ಠ ವೇಗ ಮಿತಿ ನಿಗದಿ ಮಾಡಬೇಕು ಮತ್ತು ಮಕ್ಕಳು ಹೆಲ್ಮೇಟ್ ಧರಿಸುವುದು ಕಡ್ಡಾಯ ಎಂದು ಕೇಂದ್ರ ಮೋಟಾರು ವಾಹನ ನಿಯಮಗಳ ಅನುಷ್ಠಾನಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಸೂಚನೆ ನೀಡಿತ್ತು. ಇದರಿಂದ ಬೆಂಗಳೂರು ಟ್ರಾಫಿಕ್ ಪೊಲೀಸರು ಹೊಸ ನಿಯಮ ಜಾರಿಗಾಗಿ ಸಜ್ಜಾಗಿದ್ದಾರೆ.
ಬೆಂಗಳೂರು ಟ್ರಾಫಿಕ್ ಪೊಲೀಸರು ಹೇಳಿದ್ದೇನು?
ಈ ಕುರಿತಾಗಿ ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿದ್ದು, 9 ತಿಂಗಳಿನಿಂದ 4 ವರ್ಷದ ವಯೋಮಾನದ ಮಕ್ಕಳೂ ಕೂಡ ಹೆಲ್ಮೆಟ್ ಧರಿಸುವುದು ಅನಿವಾರ್ಯ. ಎಲ್ಲರ ಜೀವವೂ ಅತ್ಯಮೂಲ್ಯ. ಅಪಘಾತ ಯಾವಾಗ ಬೇಕಿದ್ದರೂ ಸಂಭವಿಸಬಹುದು, ಹೀಗಾಗಿ ನಿರ್ಲಕ್ಷ್ಯ ಬೇಡ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಹೆಲ್ಮೆಟ್ಗಳು ಲಭ್ಯವಿದ್ದು, ಸಾವಿರ ರೂಪಾಯಿಯ ಆಸುಪಾಸಿನಲ್ಲಿ ಗ್ರಾಹಕರ ಕೈಗೆಟುಕುತ್ತಿವೆ. ಮಕ್ಕಳಿಗೆ ಹೆಲ್ಮಟ್ ಕೊಡಿಸುವುದರಲ್ಲಿ ಬೆಂಗಳೂರಿನ ಪೋಷಕರು ಹಿಂದೆ ಉಳಿದಿದ್ದು, ಅನಾಹುತಗಳಿಗೆ ಮುನ್ನ ಮುಂಜಾಗ್ರತೆ ವಹಿಸುವುದು ಉತ್ತಮ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.ಮುನ್ನೇ ಮುನ್ನೆಚ್ಚರಿಕೆ ಅನಿವಾರ್ಯ,” ಎಂದು ಸಲಹೆ ನೀಡಿದ್ದಾರೆ.
ಇದನ್ನು ಓದಿ : Gold Price Today : ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಹೆಚ್ಚಳ

ಸಂಚಾರ ನಿಯಮ ಪಾಲನೆಗೆ ಹೊಸ ಉಪಕ್ರಮಗಳು
ಸಂಚಾರ ನಿಯಮಗಳ ಉಲ್ಲಂಘನೆ ಕಡಿಮೆ ಮಾಡಲು ಬೆಂಗಳೂರು ಟ್ರಾಫಿಕ್ ಪೊಲೀಸರು ಹಲವು ಪ್ರಯತ್ನಗಳನ್ನು ಕೈಗೊಂಡಿದ್ದಾರೆ. ಇತ್ತೀಚಿನ ಉಪಕ್ರಮ ‘ಒಂದು ದಿನ ಪೊಲೀಸ್ ಆಗಿ’.
- ಜನರಿಗೆ ಟ್ರಾಫಿಕ್ ಪೊಲೀಸರ ಕಷ್ಟ ಅರಿವಾಗಿಸುವುದು
- ನಿಯಮ ಪಾಲನೆಯ ಮಹತ್ವ ಬೋಧಿಸುವುದು
ಮುಖ್ಯ ಉದ್ದೇಶವಾಗಿದೆ.
BTP ಕೆಲವು ದಿನಗಳ ಹಿಂದೆ ಎಕ್ಸ್ನಲ್ಲಿ ಪ್ರಕಟಣೆ ನೀಡಿ “ಒಂದು ದಿನ ಪೊಲೀಸ್ ಆಗಿ ಅನುಭವಿಸಿ, ಸರ್ಟಿಫಿಕೇಟ್ ಪಡೆಯಿರಿ! ಈಗಲೇ BTP ASTraM ಅಪ್ಲಿಕೇಶನ್ನಲ್ಲಿ ನೋಂದಣಿ ಮಾಡಿಕೊಳ್ಳಿ.” ಎಂದು ಸಾರ್ವಜನಿಕರಿಗೆ ಆಹ್ವಾನ ನೀಡಿತ್ತು.

ಇದನ್ನು ನೋಡಿ : ಮದುವೆ ಸಂಭ್ರಮದ ಎಲ್ಲ ವಿಡಿಯೊ ಡಿಲೀಟ್ ಮಾಡಿದ ಸ್ಮೃತಿ ಮಂಧಾನ!




