Smriti Mandhana Marriage : ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರೆ ಮತ್ತು ಅನುಭವಿ ಬ್ಯಾಟರ್ ಸ್ಮೃತಿ ಮಂಧಾನ ವಿವಾಹವಾಗಲಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ (Smriti Mandhana) ಅವರ ಮದುವೆ ಸಂಭ್ರಮ ವಿಜೃಂಭಣೆಯಿಂದ ಆರಂಭವಾಗಿದೆ. ಶುಕ್ರವಾರ ಅವರು ತಮ್ಮ ತಂಡದ ಸದಸ್ಯರೊಂದಿಗೆ ಹಲ್ದಿ ಸಮಾರಂಭವನ್ನು ಇಂದೋರ್ನಲ್ಲಿ ಆಚರಿಸಿದರು.
ನಾಳೆ ಸ್ಮೃತಿ ಮಂಧಾನ ಮದುವೆ
ಸ್ಮೃತಿ ಮಂಧಾನ ನವೆಂಬರ್ 23 ರಂದು (ನಾಳೆ) ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ (Palash Mukhal ) ಅವರೊಂದಿಗೆ ವಿವಾಹವಾಗಲಿದ್ದಾರೆ. 2019ರಲ್ಲಿ ಆರಂಭವಾದ ಈ ಜೋಡಿಯ ಪ್ರೇಮಕಥೆ, 2024ರಲ್ಲಿ ಸಾರ್ವಜನಿಕವಾಗಿ ತಿಳಿದುಬಂದಿತ್ತು.
ಇದನ್ನು ಓದಿ : Political News : ರಾಜಣ್ಣಗೆ ಮತ್ತೆ ಸಚಿವ ಸ್ಥಾನ ಕೊಡಿ – ತಂದೆಗಾಗಿ ಡೆಲ್ಲಿಗೆ ಹಾರಿದ ರಾಜೇಂದ್ರ
ಹಲ್ದಿ ಸಮಾರಂಭ ಕ್ರಿಕಿಟಿಗರು ಭಾಗಿ
ಹಲ್ದಿ ಕಾರ್ಯಕ್ರಮದಲ್ಲಿ ರಿಚಾ ಘೋಷ್, ಶ್ರೇಯಾಂಕ ಪಾಟೀಲ್, ರೇಣುಕಾ ಸಿಂಗ್, ಶಿವಾಲಿ ಶಿಂಧೆ, ರಾಧಾ ಯಾದವ್, ಜೆಮಿಮಾ ರೊಡ್ರಿಗಸ್ ಸೇರಿದಂತೆ ಅನೇಕ ಕ್ರಿಕೆಟಿಗರು ಭಾಗವಹಿಸಿ ನೃತ್ಯ ಮಾಡಿ ಸಂಭ್ರಮಿಸಿದರು. ಕಾರ್ಯಕ್ರಮದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) Viral ಆಗುತ್ತಿವೆ. ಪಲಾಶ್ ಮುಚ್ಚಲ್ ಪ್ರಸಿದ್ಧ ಬಾಲಿವುಡ್ ಗಾಯಕಿ ಪಲಾಕ್ ಮುಚ್ಚಲ್ ಅವರ ಸಹೋದರರಾಗಿದ್ದು, ಸಂಗೀತ ಸಂಯೋಜಕ ಹಾಗೂ ಗಾಯಕನಾಗಿ ಹೆಸರು ಮಾಡಿದ್ದಾರೆ.
ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ
ಇತ್ತೀಚೆಗೆ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಮೃತಿ, 117 ಏಕದಿನ ಪಂದ್ಯಗಳಲ್ಲಿ 5,322 ರನ್ ಗಳಿಸಿ ಮಿಥಾಲಿ ರಾಜ್ ನಂತರ ಭಾರತದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ವಿಶ್ವಕಪ್ ಗೆಲುವಿನ ವೇಳೆ ಪಲಾಶ್ ಮಂಧನಾ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದು, ಅವುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಇದನ್ನು ನೋಡಿ : ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ- ಬೆಂಬಲಿಗರ ನಡುವೆ ಗಲಾಟೆಗೆ ಕಾರವಾಗಿದ್ದೇನು..?

