BBK S12 : Bigg Boss Kannada 12 ಮನೆಯಲ್ಲಿ ಅಶ್ವಿನಿ ಗೌಡ ತಮ್ಮ ಸ್ವಾಭಿಮಾನಕ್ಕೆ ದಕ್ಕೆ ಆಗಿದೆ ಎಂದು ಆರೋಪಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಜಾಹ್ನವಿ, ಧ್ರುವಂತ್, ರಘು, ರಕ್ಷಿತಾ ನಡುವಿನ ಸಂಭಾಷಣೆ ಮನೆಗೆ ಹೊಸ ಡ್ರಾಮಾ ತಂದಿದೆ.

BBK S12 : ಅಶ್ವಿನಿ ಗೌಡ ಸ್ವಾಭಿಮಾನಕ್ಕೆ ದಕ್ಕೆ! ಬಿಗ್ ಬಾಸ್ ಮನೆಯಲ್ಲಿ ಉಪವಾಸ ಸತ್ಯಾಗ್ರಹ ಆರಂಭ
Bigg Boss Kannada 12 ಮನೆಯಲ್ಲಿ ಮತ್ತೊಮ್ಮೆ ಡ್ರಾಮಾ ತೀವ್ರ ರೂಪ ಪಡೆದಿದೆ. ಸ್ಪರ್ಧಿ ಅಶ್ವಿನಿ ಗೌಡ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂಬ ಕಾರಣಕ್ಕೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಮನೆ ಸದಸ್ಯರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಅಶ್ವಿನಿಗೆ ಆಗಿರುವ ಅವಮಾನ…
ಬಿಗ್ ಬಾಸ್ ಮನೆಯಲ್ಲಿ ನಡೆದ ವಾಗ್ವಾದದ ವೇಳೆ ಅಶ್ವಿನಿ ಗೌಡ ಮತ್ತು ಮ್ಯುಟಂಟ್ ರಘು ನಡುವೆ ಉದ್ವಿಗ್ನತೆ ಹೆಚ್ಚಿತು. ಕೋಪದಲ್ಲಿ ಕದ ಬಡಿಯುವ ಮಟ್ಟಿಗೆ ಬೈಗಳು ನಡೆದರೂ, ಬಿಗ್ ಬಾಸ್ ಅವರು ಡೋರ್ ಓಪನ್ ಮಾಡದೆ ಬಿಟ್ಟರು. ಇದರಿಂದ ಅಶ್ವಿನಿ ತುಂಬಾ ನೋವಿಗೆ ಒಳಗಾಗಿದ್ದು, ಇನ್ನು ಮುಂದೆ ನಾನು ನನ್ನ ಸ್ವಾಭಿಮಾನಕ್ಕಾಗಿ ಸ್ಟ್ಯಾಂಡ್ ತೆಗೆದುಕೊಳ್ಳುತ್ತೇನೆ ಎಂದು ಘೋಷಿಸಿ ಉಪವಾಸ ಶುರುಮಾಡಿದರು.
ಜಾಹ್ನವಿ ಒತ್ತಾಯಿಸಿದರೂ ಆಹಾರ ತಿನ್ನದ ಅಶ್ವಿನಿ
ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಇತ್ತೀಚಿನ ಪ್ರೊಮೋದಲ್ಲಿ ಜಾಹ್ನವಿ ತಟ್ಟೆ ತುಂಬಾ ಊಟ ಹಾಕಿಕೊಂಡು ಅಶ್ವಿನಿ ಹತ್ತಿರ ಬರುತ್ತಾರೆ. ಆದರೆ ಅಶ್ವಿನಿ ನಿರಾಕರಿಸುತ್ತಾರೆ.
ಇದನ್ನು ಓದಿ : ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು
ಪ್ರೊಮೋ ಸಂಭಾಷಣೆ:
- ಜಾಹ್ನವಿ: ಊಟ ಮಾಡಿ ನೀವು…
- ಅಶ್ವಿನಿ ಗೌಡ: ಬೇಡ ಜಾನು…
- ಜಾಹ್ನವಿ: ನಿನ್ನೆನೂ ತಿನ್ನಿಲ್ಲ, ಇಂದೂ ತಿನ್ನಲ್ಲ ಅಂದ್ರೆ ಹೇಗೆ?
- ಅಶ್ವಿನಿ ಗೌಡ: ನನಗೆ ತುಂಬಾ ಹರ್ಟ್ ಆಗಿದೆ… ನನ್ನ ವಯಸ್ಸಿಗೆ, ಮೆಚುರಿಟಿಗೆ ಇಷ್ಟು ದೊಡ್ಡ ಅವಮಾನ ಬೇಡ…
ಅಶ್ವಿನಿಯ ಮಾತು ಕೇಳಿ ಜಾಹ್ನವಿ ಮತ್ತು ಧ್ರುವಂತ್ ನಡುವೆ ಕೂಡ ಚರ್ಚೆ ನಡೆಯುತ್ತದೆ. “ಹಾಗಾದ್ರೆ ಇನ್ಮುಂದೆ ಜಾಹ್ನವಿ ಏನೂ ತಿನ್ನೋದೇ ಇಲ್ವೇ?” ಎಂದು ಧ್ರುವಂತ್ ಕೇಳಿದಾಗ, ಜಾಹ್ನವಿ “ಟ್ರಿಗರ್ ಆಗ್ಬಿಟ್ಟರೆ ಆಗಿಬಿಡುತ್ತೆ…” ಎಂದು ಹೇಳುತ್ತಾರೆ.
ರಘು–ರಕ್ಷಿತಾ ಚರ್ಚೆ: ‘ಅವ್ರಿಗೆ ಬೇಜಾರು ಆಗ್ತಿದೆ’
ಮತ್ತೊಂದೆಡೆ ರಘು ಮತ್ತು ರಕ್ಷಿತಾ ಕೂಡ ಈ ವಿಚಾರದ ಬಗ್ಗೆ ಮಾತನಾಡಿಕೊಂಡಿದ್ದು, ಅಶ್ವಿನಿಗೆ ಆಗಿರುವ ನೋವಿನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ರಕ್ಷಿತಾ: “ಅವ್ರಿಗೆ ಬೇಜಾರು ಆಗ್ತೇ ಸರ್…”
ರಘು: “ನಮ್ಗೆ ಹೇಳೋಕೆ ಆಗಲ್ಲ ಅಲ್ವಾ…”
ಇನ್ಮುಂದೆ ಬಿಗ್ ಬಾಸ್ ಮನೆಯಲ್ಲಿ ಏನಾಗಲಿದೆ?
ಅಶ್ವಿನಿ ಗೌಡದ ಉಪವಾಸ ಸತ್ಯಾಗ್ರಹದಿಂದ ಮನೆಗೆ ಹೊಸ ತಾರತಮ್ಯ ಸೇರ್ಪಡೆಯಾಗಿದೆ. ಬಿಗ್ ಬಾಸ್ ಅವರು ಈ ವಿಚಾರಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ? ಮನೆ ಸದಸ್ಯರು ಅಶ್ವಿನಿಯ ಮನಸ್ಸು ಮರುಗಿಸಲು ಯಶಸ್ವಿಯಾಗಬಹುದಾ? ನೋಡಬೇಕಿದೆ.




