Kodagu: ರಾಜ್ಯದಲ್ಲಿ ಕಾಡಾನೆ ದಾಳಿಗೆ ಹಲವರು ಬಲಿಯಾಗುತ್ತಿದ್ದು, ಕೊಡಗಿನಲ್ಲಿ ಕಾಫಿ ತೋಟದ ಕಾರ್ಮಿಕ ಮೃತಪಟ್ಟಿದ್ದಾನೆ. ಏಕಾಏಕಿ ಕಾಡಾನೆ ದಾಳಿ ಮಾಡಿದ ಪರಿಣಾಮ ಗಂಭೀರ ಗಾಯಗೊಂಡ ಕಾರ್ಮಿಕ ಕೊನೆಯುಸಿರೆಳೆದಿದ್ದಾನೆ.

Kodagu: ರಾಜ್ಯದಲ್ಲಿ ಕಾಡು ಪ್ರಾಣಿಗಳ ದಾಳಿ ಪ್ರಕರಣಗಳು ಹೆಚ್ಚುತ್ತಲಿದ್ದು, ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಬಳಿಯ ಎಮ್ಮೆಗುಂಡಿ ಕಾಫಿ ತೋಟದಲ್ಲಿ ಕಾಡಾನೆ ದಾಳಿ ನಡೆಸಿ ಕಾರ್ಮಿಕನೊಬ್ಬನ ಪ್ರಾಣ ಕಸಿದುಕೊಂಡಿದೆ.
ಕೊಡಗಿನಲ್ಲಿ ಕಾಡಾನೆ ದಾಳಿ — ಕಾರ್ಮಿಕ ದುರ್ಮರಣ
ಹಾಸನ ಜಿಲ್ಲೆಯ ರಾಮನಾಥಪುರದ ಹನುಮಂತ (57) ಎಂಬುವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಹನುಮಂತ ಕಳೆದ 30 ವರ್ಷಗಳಿಂದ ಖಾಸಗಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ಲೈನ್ ಹೌಸ್ನಲ್ಲಿ ವಾಸಿಸುತ್ತಿದ್ದರು.
ಆನೆ ಟ್ರ್ಯಾಕರ್ ಹನುಮಂತನ ಸಾವು
ಹನುಮಂತ ಅವರು ಆನೆ ಟ್ರ್ಯಾಕರ್ ಆಗಿ ಕೆಲಸ ಮಾಡ್ತಿದ್ದು, ಆನೆಗಳ ಉಪಸ್ಥಿತಿ ಕಂಡುಬಂದಾಗ ಇತರ ಕಾರ್ಮಿಕರಿಗೆ ಎಚ್ಚರಿಕೆ ನೀಡುವುದು ಅವರ ಕೆಲಸವಾಗಿತ್ತು.
ಇದನ್ನೂ ಓದಿ: Tiger Attack: ಮೈಸೂರಿನಲ್ಲಿ ಮತ್ತೆ ಹುಲಿ ದಾಳಿ – ಮತ್ತೊಬ್ಬ ರೈತ ಬಲಿ..!
ಕಾಡು ಪ್ರಾಣಿಗಳ ಅಟ್ಟಹಾಸ ಮುಂದುವರಿಕೆ — ಕೊಡಗಿನಲ್ಲಿ ಮತ್ತೊಂದು ಜೀವ ಬಲಿ
ಸೋಮವಾರ ಬೆಳಗ್ಗೆ ತೋಟದಲ್ಲಿ ಕೆಲಸ ಮಾಡುವ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ, ಹನುಮಂತ ಅವರ ಎದೆ ಮತ್ತು ಹೊಟ್ಟೆಗೆ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಬ್ಬ ಕಾರ್ಮಿಕ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ.
ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಟುಂಬಕ್ಕೆ ₹5 ಲಕ್ಷ ಪರಿಹಾರ ಧನ ನೀಡಲಾಗಿದೆ.
ಹುಲಿ, ಆನೆ ದಾಳಿಗಳ ಸರಣಿ — ಗ್ರಾಮಸ್ಥರ ನಿದ್ದೆಗೆಡಿಸಿದ ಕಾಡು ಪ್ರಾಣಿಗಳು
ಇದೀಗ ರಾಜ್ಯಾದ್ಯಂತ ಕಾಡು ಪ್ರಾಣಿಗಳ ದಾಳಿಯಾಗ್ತಿದ್ದು, ಕಳೆದ ತಿಂಗಳು ಮೈಸೂರು ಜಿಲ್ಲೆಯ ಹುಲಿ ದಾಳಿಗೆ ಮೂವರು, ಹಾಡಿ ನಿವಾಸಿಯೊಬ್ಬರು ಕಾಡಾನೆ ತುಳಿತಕ್ಕೆ ಬಲಿಯಾಗಿದ್ದರು. ಚಿಕ್ಕಮಗಳೂರು ಜಿಲ್ಲೆಯಲ್ಲೂ ಇಬ್ಬರು ಮೃತಪಟ್ಟಿದ್ದರು.
MUST WATCH: BEAR ATTACK | ಅಪ್ಪ ಮಗನ ಮೇಲೆ ಕರಡಿಗಳ ದಾಳಿ – ತಂದೆಯನ್ನು ರಕ್ಷಿಸಲು ಕರಡಿ ಜೊತೆ ಮಗನ ಫೈಟ್




