
ಜಿಎಸ್ಟಿ ಕಡಿತದಿಂದ ದೇಶದ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಮಾರುತಿ ಸುಜುಕಿಯಿಂದ ಹಿಡಿದು ಆಡಿ, ಮರ್ಸಿಡೆಸ್ ಬೆಂಜ್, ಲ್ಯಾಂಡ್ ರೋವರ್ವರೆಗಿನ ಕಾರುಗಳ ಬೆಲೆ 30 ಲಕ್ಷ ರೂವರೆಗೆ ಇಳಿಕೆಯಾಗುತ್ತಿದೆ. ಸೆಪ್ಟೆಂಬರ್ 22ರಿಂದ ಜಿಎಸ್ಟಿ ದರ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಟೊಮೊಬೈಲ್ ಕಂಪನಿಗಳು ಈ ಲಾಭವನ್ನು ನೇರವಾಗಿ ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿವೆ. ಮಾರುತಿ ಸುಜುಕಿಯ ಕಾರುಗಳಲ್ಲಿ ಎಸ್ಪ್ರೆಸ್ಸೋಗೆ 1.29 ಲಕ್ಷ ರೂ, ಆಲ್ಟೋ ಕೆ10ಗೆ 1 ಲಕ್ಷ ರೂ ಹಾಗೂ ಸ್ವಿಫ್ಟ್ ಮಾದರಿಗೆ 84,600 ರೂ ಇಳಿಕೆ ದೊರಕಿದೆ. ಟಾಟಾ ಮೋಟಾರ್ಸ್ನ ನೆಕ್ಸಾನ್, ಹ್ಯಾರಿಯರ್, ಸಫಾರಿ ಕಾರುಗಳ ಬೆಲೆ ಒಂದು ಲಕ್ಷ ರೂಗಿಂತ ಹೆಚ್ಚು ಕಡಿಮೆಯಾಗಿದ್ದು, ಆಲ್ಟ್ರೋಜ್ ಮತ್ತು ಟಿಯಾಗೋ ಸೇರಿದಂತೆ ಸಣ್ಣ ಕಾರುಗಳು 85,000 ರೂವರೆಗೆ ಅಗ್ಗವಾಗಿವೆ. ಮಹೀಂದ್ರ ಕಂಪನಿಯ ಥಾರ್, ಸ್ಕಾರ್ಪಿಯೋ, ಬೊಲೆರೊ ಹಾಗೂ ಎಕ್ಸ್ಯುವಿ ಮಾದರಿಗಳ ಬೆಲೆ ಕೂಡ ಇಳಿಕೆಯಾಗಿದೆ.

ಹ್ಯೂಂಡಾಯ್ ತನ್ನ ಕಾರುಗಳ ಬೆಲೆಯನ್ನು ಗರಿಷ್ಠ 2.4 ಲಕ್ಷ ರೂವರೆಗೆ ಕಡಿತಗೊಳಿಸಿದ್ದು, ಐ10, ಔರಾ, ಕ್ರೆಟಾ, ಆಲ್ಕಜಾರ್ ಮಾದರಿಗಳಿಗೆ 70,000 ರೂಗಿಂತ ಹೆಚ್ಚಿನ ಇಳಿಕೆ ನೀಡಿದೆ. ಇದೇ ರೀತಿ ಕಿಯಾ, ರೇನೋ, ನಿಸ್ಸಾನ್, ಟೊಯೊಟಾ, ಹೊಂಡಾ, ಎಂಜಿ, ವೋಲ್ಸ್ವ್ಯಾಗನ್, ಸ್ಕೋಡಾ, ಜೀಪ್, ಸಿಟ್ರೋಯನ್, ಬಿಎಂಡಬ್ಲ್ಯು, ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯ ಕಾರುಗಳೂ ಅಗ್ಗವಾಗುತ್ತಿವೆ. ವಿಶೇಷವಾಗಿ ಆಡಿ, ಬೆಂಜ್ ಮತ್ತು ಲ್ಯಾಂಡ್ ರೋವರ್ ಕಾರುಗಳ ಬೆಲೆ 30 ಲಕ್ಷ ರೂವರೆಗೂ ಇಳಿಕೆಯಾಗಿದೆ.

ಈ ಬೆಲೆ ಇಳಿಕೆ ಜಾರಿಗೆ ಬರೋದು ಸೆಪ್ಟೆಂಬರ್ 22ರಿಂದ. ಅದೇ ಕಾರಣಕ್ಕೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ವಾಹನಗಳ ಮಾರಾಟದಲ್ಲಿ ಕುಸಿತ ಕಂಡುಬಂದಿದ್ದರೂ, ಅಕ್ಟೋಬರ್ ತಿಂಗಳಲ್ಲಿ ದಾಖಲೆ ಮಟ್ಟದ ಕಾರು ಮಾರಾಟವಾಗುವ ನಿರೀಕ್ಷೆ ಇದೆ.




