Bollywood : ಬಾಲಿವುಡ್ ಸ್ಟಾರ್ ದಂಪತಿಗಳಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಪೋಷಕರಾಗಿದ್ದಾರೆ. ಕತ್ರಿನಾ ಕೈಫ್ ನವೆಂಬರ್ 07ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

Bollywood : ಬಾಲಿವುಡ್ ಸ್ಟಾರ್ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಈಗ ತಂದೆ-ತಾಯಿ ಆಗಿದ್ದಾರೆ. ಕತ್ರಿನಾ ಕೈಫ್ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಅವರ ಮೊದಲ ಮಗು.
ಗಂಡು ಮಗುವಿಗೆ ಜನ್ಮ ನೀಡಿದ ಕತ್ರಿನಾ ಕೈಫ್
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಅವರು 2021 ರಲ್ಲಿ ಮದುವೆಯಾಗಿದ್ದರು. ಮದುವೆಯಾದ ನಂತರ ಕೆಲ ವರ್ಷ ಅವರಿಗೆ ಸಂತಾನ ಪ್ರಾಪ್ತಿಯಾಗಲಿಲ್ಲ. ಬಳಿಕ ಕತ್ರಿನಾ ಕೈಫ್ ರಾಜ್ಯದ ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಗಳನ್ನು ನೆರವೇರಿಸಿ ಸಂತಾನಾರ್ಥಿ ಕೋರಿಕೆ ಸಲ್ಲಿಸಿದ್ದರು. ಅದರಿಂದ ಕೆಲವು ತಿಂಗಳ ಒಳಗೆ ಕತ್ರಿನಾ ತಮ್ಮ ಗರ್ಭಧಾರಣೆಯ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಈ ದಂಪತಿಗೆ ಗಂಡು ಮಗು ಜನಿಸಿದೆ.
ಇದನ್ನು ಓದಿ : BBK 12 : ಕಾವ್ಯಗೋಸ್ಕರ ನಾಮಿನೇಟ್ ಆದ ಗಿಲ್ಲಿ

ಮದುವೆಯಾದ ನಂತರ ಕತ್ರಿನಾ ಕೈಫ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಕೇವಲ ಮೂರು ಸಿನಿಮಾಗಳಲ್ಲೇ ನಟಿಸಿದ್ದಾರೆ. ಆದರೆ ವಿಕ್ಕಿ ಕಶಾಲ್ ‘ಛಾವಾ’ ಸಿನಿಮಾ ಮೂಲಕ ಬಾಕ್ಸ್ ಆಫೀಸ್ನಲ್ಲಿ ದಾಖಲೆ ನಿರ್ಮಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ವಿಶೇಷ
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿರುವ ಈ ದೇವಾಲಯ ಐದು ಸಾವಿರ ವರ್ಷಗಳ ಐತಿಹ್ಯಾಸ ಹೊಂದಿದ್ದು, ಇಲ್ಲಿ ಸರ್ಪ ಸಂಸ್ಕಾರ, ದೋಷ ಪರಿಹಾರ ಮತ್ತು ವಿಶೇಷ ಪೂಜೆಗಳು ನಡೆಯುತ್ತವೆ. ದೇವಾಲಯದಲ್ಲಿ ಈಶ್ವರನ ಪುತ್ರ ಷಣ್ಮುಖನನ್ನು ನಾಗಸ್ವರೂಪದಲ್ಲಿ ಸುಬ್ರಹ್ಮಣ್ಯನಾಗಿ ಆರಾಧಿಸಲಾಗುತ್ತದೆ.

ಇದನ್ನು ನೋಡಿ : ಕುಕ್ಕೆ ಸುಬ್ರಹ್ಮಣ್ಯ ಪೂಜೆಯ ಫಲ: ಪೋಷಕರಾದ ವಿಕ್ಕಿ ಕೌಶಲ್-ಕತ್ರಿನಾ ಕೈಫ್




