Shocking Incident : ಐದು ವರ್ಷದ ಮಗಳನ್ನು ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಡಿಯನೂರಿನಲ್ಲಿ ನಡೆದ ದಾರುಣ ಘಟನೆ ಗ್ರಾಮಾಸ್ಥರನ್ನು ಬೆಚ್ಚಿಬೀಳಿಸಿದೆ. ಕೌಟುಂಬಿಕ ಕಲಹದಿಂದ ಮನನೊಂದು ತಂದೆ ಮಗಳನ್ನು ಕೊಂದು ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಮೃತರು — ಲೋಕೇಶ್ (37) ಮತ್ತು ನಿಹಾರಿಕಾ (5)
ಮೃತರನ್ನು 37 ವರ್ಷದ ಲೋಕೇಶ್ (Lokesh)ಹಾಗೂ ಅವರ 5 ವರ್ಷದ ಮಗಳು ನಿಹಾರಿಕಾ (Niharika)ಎಂದು ಗುರುತಿಸಲಾಗಿದೆ. ಕುಟುಂಬದ ಜಗಳದ ಹಿನ್ನೆಲೆ ಲೋಕೇಶ್ ಅವರ ಪತ್ನಿ ಕೆಲವು ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದರು.
ಈ ಘಟನೆಯಿಂದ ಮನನೊಂದು ಲೋಕೇಶ್, ಮಗಳು ನಿಹಾರಿಕಳನ್ನು ಉಸಿರುಗಟ್ಟಿಸಿ ಕೊಂದು ಬಳಿಕ ಮಗಳ ಶವವನ್ನು ಕಾರಿನೊಳಗೆ ಇಟ್ಟು, ತಾನೂ ಹತ್ತಿರದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.
ಇದನ್ನು ಓದಿ : ಲಾಸ್ ಏಂಜಲೀಸ್ ಒಲಿಂಪಿಕ್ಸ್ಗೆ ಸಜ್ಜಾಗುತ್ತಿರುವ ಮೀರಾಬಾಯಿ ಚಾನು..!
ಪೋಲೀಸರು ಸ್ಥಳಕ್ಕೆ ಭೇಟಿ
ಇನ್ನು ಘಟನೆಯ ಕುರಿತು ಮಾಹಿತಿ ದೊರಕಿದ ತಕ್ಷಣ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
ಗ್ರಾಮಸ್ಥರಲ್ಲಿ ಶೋಕದ ಛಾಯೆ
ಇನ್ನುಸ್ಥಳೀಯರು ಈ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಕುಟುಂಬ ಕಲಹ ಇಂತಹ ದಾರುಣ ಅಂತ್ಯಕ್ಕೆ ದಾರಿ ಮಾಡಿಕೊಟ್ಟಿರುವುದು ದುಃಖಕರ ಎಂದು ಹೇಳಿದ್ದಾರೆ.
ಇದನ್ನು ನೋಡಿ : ತುಮಕೂರಿನಲ್ಲಿ ಅದ್ಧೂರಿ ವಿಜಯೇಂದ್ರ ಬರ್ತಡೇ ಆಚರಣೆ- ಹೇಗಿತ್ತು ಗೊತ್ತಾ ಅಭಿಮಾನಿಗಳ ಕ್ರೇಜ್?




