Bengaluru Love Sex Dhokha : ಆಂಧ್ರ ಪ್ರದೇಶ ಮೂಲದ ಹಿಂದೂ ಯುವತಿ, ಬೆಂಗಳೂರಿನ ಮುಸ್ಲಿಂ ಯುವಕನ ವಿರುದ್ಧ ಪ್ರೇಮದ ಹೆಸರಲ್ಲಿ ಮೋಸ, ದೈಹಿಕ ಶೋಷಣೆ ಮತ್ತು ಮತಾಂತರದ ಒತ್ತಡದ ಆರೋಪ ಮಾಡಿದ್ದಾರೆ.

ಮುಸ್ಲಿಂ ಯುವಕನ ವಿರುದ್ಧ ಪ್ರೇಮದ ಹೆಸರಲ್ಲಿ ಮೋಸದ ಆರೋಪ
ಬೆಂಗಳೂರು (Bengaluru Love Sex Dhokha Case): ಆಂಧ್ರ ಪ್ರದೇಶ ಮೂಲದ ಹಿಂದೂ ಯುವತಿ, ಬೆಂಗಳೂರಿನ ಮುಸ್ಲಿಂ ಯುವಕನ ವಿರುದ್ಧ ಪ್ರೇಮದ ಹೆಸರಲ್ಲಿ ಮೋಸ, ದೈಹಿಕ ಶೋಷಣೆ ಮತ್ತು ಮತಾಂತರದ ಒತ್ತಡದ ಆರೋಪ ಮಾಡಿದ್ದಾರೆ.
ಈ ಪ್ರಕರಣ ಇದೀಗ ಲವ್ ಜಿಹಾದ್ ವಿವಾದದ ರೂಪ ಪಡೆದುಕೊಂಡಿದೆ.
ಯುವತಿಯ ದೂರಿನ ಮೇರೆಗೆ HSR ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಹಮ್ಮದ್ ಇಶಾಕ್ ಬಿನ್ ಅಬ್ದುಲ್ ರಸೂಲ್ ವಿರುದ್ಧ FIR ದಾಖಲಿಸಲಾಗಿದೆ.

ಇನ್ಸ್ಟಾಗ್ರಾಂ ಮೂಲಕ ಪರಿಚಯ, ಪ್ರೇಮವಾಗಿ ಬದಲಾದ ಸಂಬಂಧ
ಯುವತಿ ನೀಡಿದ ದೂರಿನ ಪ್ರಕಾರ, ಇನ್ಸ್ಟಾಗ್ರಾಂ ಮೂಲಕ ಇಶಾಕ್ ಯುವತಿಗೆ ಪರಿಚಯವಾಗಿದ್ದು, ಅವರ ಸ್ನೇಹ ಕ್ರಮೇಣ ಪ್ರೇಮ ಸಂಬಂಧವಾಗಿ ಬದಲಾಗಿದೆ.
2024ರ ಅಕ್ಟೋಬರ್ 30ರಂದು ಇಬ್ಬರೂ ಧಣಿಸಂದ್ರ ಎಲಿಮೆಂಟ್ಸ್ ಮಾಲ್ ಹತ್ತಿರ ಭೇಟಿಯಾಗಿ ಮದುವೆ ಕುರಿತು ಚರ್ಚೆ ನಡೆಸಿದ್ದರು.
ನಂತರ ಆತ ಯುವತಿಯನ್ನು ಖಾಸಗಿ ಲಾಡ್ಜ್ಗೆ ಕರೆದುಕೊಂಡು ಹೋಗಿ “ಮದುವೆಯಾಗುತ್ತೇನೆ” ಎಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ಯುವತಿಯ ಪ್ರಕಾರ, ಇದೇ ರೀತಿಯಲ್ಲಿ ಇಬ್ಬರೂ ಹಲವು ಬಾರಿ ದೈಹಿಕ ಸಂಪರ್ಕದಲ್ಲಿದ್ದರು. ಆದರೆ ನಂತರ ಇಶಾಕ್ ಹಲವು ಹುಡುಗಿಯರ ಜೊತೆ ಸಂಪರ್ಕದಲ್ಲಿದ್ದಾನೆಂಬುದು ಯುವತಿಗೆ ಗೊತ್ತಾಗಿದೆ.
ಇದನ್ನು ಓದಿ : ಶಾಸಕ ಅಶೋಕ್ ಮನಗೂಳಿ ಕಾರು ಅಪಘಾತ

ಮದುವೆ ನೆಪದಲ್ಲಿ ಮೋಸ, ಕೊಲೆ ಬೆದರಿಕೆ ಆರೋಪ
2025ರ ಸೆಪ್ಟೆಂಬರ್ ವೇಳೆಗೆ ಇಶಾಕ್ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆಂಬುದು ಬೆಳಕಿಗೆ ಬಂದ ಬಳಿಕ, ಯುವತಿ ಮದುವೆಯ ವಿಚಾರ ವಿಚಾರಿಸಿದಾಗ ಆತ “ನಿನ್ನ ದಾರಿ ನೀನು ನೋಡಿಕೋ” ಎಂದು ಹೇಳಿ ಕೊಲೆ ಬೆದರಿಕೆ ಹಾಕಿದ್ದಾನೆ.
ಇದೇ ವೇಳೆ ಅವಾಚ್ಯ ಶಬ್ದಗಳಿಂದ ನಿಂದನೆ ಕೂಡ ಮಾಡಿದನೆಂಬ ಆರೋಪ ದೂರಿನಲ್ಲಿ ದಾಖಲಾಗಿದೆ.
ಮತಾಂತರಕ್ಕೆ ಒತ್ತಡ: ‘ಮೊದಲು ಕನ್ವರ್ಟ್ ಆಗು, ಬಳಿಕ ಮದುವೆ’
ಸಂತ್ರಸ್ತೆಯ ಪ್ರಕಾರ, ತಾನು ಆತ್ಮಹತ್ಯೆ ಯತ್ನಿಸಿದ ಸಂದರ್ಭದಲ್ಲಿ ಇಶಾಕ್ ಕುಟುಂಬದವರು ಕರೆ ಮಾಡಿ “ಸೂಸೈಡ್ ಬೇಡ, ಮಾತನಾಡಿ ಬಗೆಹರಿಸಿಕೊಳ್ಳೋಣ” ಎಂದಿದ್ದರು. ಆದರೆ ಬಳಿಕ ಅವರ ಅಣ್ಣ ಹಾಗೂ ಭಾವ ಹೇಳಿದ್ದು —
“ಮದುವೆ ಆಗಬೇಕಾದರೆ ಮೊದಲು ಮತಾಂತರ ಆಗಬೇಕು. 40 ದಿನಗಳ ಸಮಯ ಕೊಡುತ್ತೇವೆ. ನಮಾಜ್ ಕಲಿಯಬೇಕು, ಬಳಿಕ ಮದುವೆ ವಿಚಾರ ಮುಂದುವರಿಸುತ್ತೇವೆ,” ಎಂದು.
ಯುವತಿ ಇದರಿಂದ ಮನೋವೈಕಲ್ಯಕ್ಕೆ ಒಳಗಾಗಿದ್ದು, ಪೊಲೀಸರಿಗೆ ಸಂಪೂರ್ಣ ಘಟನೆಯ ವಿವರ ಹಂಚಿಕೊಂಡಿದ್ದಾಳೆ.

ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭ
HSR ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ವಿರುದ್ಧ IPC ಸೆಕ್ಷನ್ಗಳ ಅಡಿಯಲ್ಲಿ ತನಿಖೆ ಆರಂಭಿಸಿದ್ದಾರೆ.
ಈ ಪ್ರಕರಣ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಲವ್ ಸೆಕ್ಸ್ ದೋಖಾ ಮತ್ತು ಲವ್ ಜಿಹಾದ್ ಎಂದು ಟ್ರೆಂಡ್ ಆಗುತ್ತಿದೆ.
ಜಾಲತಾಣ ಪರಿಚಯದಲ್ಲಿ ಎಚ್ಚರಿಕೆ ಅಗತ್ಯ
ಪೊಲೀಸರು ಯುವತಿಯರಿಗೆ ಎಚ್ಚರಿಕೆ ನೀಡುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ ಬೆಳೆಸುವಾಗ ಮುನ್ನೆಚ್ಚರಿಕೆ ವಹಿಸಲು ಮನವಿ ಮಾಡಿದ್ದಾರೆ. ಪ್ರೇಮದ ಹೆಸರಿನಲ್ಲಿ ಮೋಸ ನಡೆಯುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನು ನೋಡಿ : ಕೆರೆಗೆ ಬಿದ್ದು ತಂದೆ–ಮಗಳು ಸೇರಿ ಮೂವರು ಸಾವು




