
KARNATAKA RAIN : ರಾಜ್ಯದಲ್ಲಿ ಇನ್ನೂ 2 ವಾರಗಳ ಕಾಲ ಮುಂಗಾರು ಮಳೆ ಮುಂದುವರೆಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ (Meteorological Department) ಮಾಹಿತಿ ನೀಡಿದೆ. ವಾಡಿಕೆಯಂತೆ ಪ್ರತೀ ವರ್ಷ JULY 1ರಿಂದ SEPTEMBER 30ರವರೆಗೂ ನೈರುತ್ಯ Monsoon ಮಾರುತಗಳಿಂದ ಮಳೆಯಾಗುತ್ತದೆ. ಆದರೆ ಈ ಬಾರಿ OCTOBER 15ರವರೆಗೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ. ಇನ್ನು ತುಮಕೂರಿನಲ್ಲಿ ಗಾಳಿ ಜೋರಿದ್ದು, ತುಂತುರು ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಗಾಳಿಯ ದಿಕ್ಕಿನ ಮೇರೆಗೆ ಕೆಲವು ಬಾರಿ ನೈರುತ್ಯ ಮತ್ತು ಈಶಾನ್ಯ ಮಾನ್ಸೂನ್ನಲ್ಲಿ ವ್ಯತ್ಯಾಸವಾಗುತ್ತದೆ. ಈ ವರ್ಷ ನೈರುತ್ಯ ಮಾರುತಗಳು ಅಕ್ಟೋಬರ್ 15ರವರೆಗೆ ಮುಂದುವರಿಯಲಿವೆ. ನಂತರ ಈಶಾನ್ಯ ಮಾರುತಗಳು ರಾಜ್ಯ ಪ್ರವೇಶಿಸಲಿವೆ ಎಂದು ಇಲಾಖೆಯ ತಿಳಿಸಿದೆ.
ಈ ಬಾರಿ ವಾಡಿಕೆಗಿಂತಲೂ ಮುಂಚಿತವಾಗಿಯೇ ನೈರುತ್ಯ ಮಾನ್ಸೂನ್ ಆಗಮನವಾಯಿತು. ಜೂನ್ 1ರಿಂದ ಸೆಪ್ಟೆಂಬರ್ 29ರವರೆಗೆ ಸಾಮಾನ್ಯವಾಗಿ 845 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 879 ಮಿ.ಮೀ ಮಳೆಯಾಗಿದೆ. ವಾರ್ಷಿಕ ವಾಡಿಕೆ ಮಳೆಯ ಪ್ರಮಾಣ 964 ಮಿ.ಮೀ ಇತ್ತು. ಆದರೆ ಸದ್ಯ 1166 ಮಿ.ಮೀ. ಮಳೆಯಾಗಿದೆ.
ಅಕ್ಟೋಬರ್ 2ನೇ ವಾರದ ನಂತರ ಹಿಂಗಾರು ಮಳೆ ಆರಂಭವಾಗುವ ನಿರೀಕ್ಷೆಯಿದ್ದು, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಆದರೆ, ಉತ್ತರ ಒಳನಾಡಿನ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದಲ್ಲಿ ಮಳೆಯಾಗುವುದಿಲ್ಲ ಎಂದಿದೆ ಇಲಾಖೆ. ನೈರುತ್ಯ ಮಾನ್ಸೂನ್ ವಿಸ್ತರಣೆಯಿಂದ ರಾಜ್ಯದಲ್ಲಿ ಮುಂದಿನ ಒಂದು ವಾರ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.




