
Hundreds of trees on the college campus were axed in Chitradurga : ರಸ್ತೆ ಅಗಲೀಕರಣ ನೆಪವೊಡ್ಡಿ ಹತ್ತಾರು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ್ದ 100 ಕ್ಕೂ ಹೆಚ್ಚು ಮರಗಳಿಗೆ ಅಧಿಕಾರಿಗಳು ಕೊಡಲಿ ಪೆಟ್ಟು ಹಾಕ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಅರಣ್ಯ ಇಲಾಖೆ ಅಧಿಕಾರಿಗಳ ದಿವ್ಯನಿರ್ಲಕ್ಷದಿಂದ ಜೆಸಿಬಿ, ಇಟಾಚಿ ಮೂಲಕ ಮರಗಳನ್ನು ಕಡಿಯುತ್ತಿದ್ದು, ಪರಿಸರ ನಾಶಕ್ಕೆ ನಾಂದಿ ಹಾಡುತ್ತಿದ್ದಾರೆ ಎಂದು ಚಿತ್ರದುರ್ಗದಲ್ಲಿ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಾನಾ ಕಾರಣ ನೆಪವೊಡ್ಡಿ ಮರಗಳ ಮಾರಣ ಹೋಮ ನಡೆಯುತ್ತಿದೆ… ಇದ್ರಿಂದ ಅರಣ್ಯ ನಾಶ ಆಗ್ತಾ ಇದ್ದು, ಮಳೆಗಾಲಕ್ಕೆ ಮಳೆ ಬಾರದೇ, ರೈತ ಕಂಗಲಾಗುವಂತೆ ಮಾಡಿದೆ. ಇಷ್ಟಾದ್ರು ಕೂಡ ಎಚ್ಚೆತ್ತುಕೊಳ್ಳದ ಮನುಷ್ಯ ಮರಗಳನ್ನು ನಾಶ ಮಾಡುತ್ತಲೇ ಇದ್ದಾನೆ.. ಚಳ್ಳಕೆರೆ ನಗರದ ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ರಸ್ತೆಯ ಅಗಲೀಕರಣದ ನೆಪದಿಂದ ಹತ್ತಾರು ವರ್ಷದಿಂದ ಬೆಳೆಸಿದ್ದ ಬೇವು, ಆಲ, ಹೊಂಗೆ, ಅರಳಿ ಸೇರಿದಂತೆ ಕಾಡು ಜಾತಿಯ ನೂರಾರು ಮರಗಳನ್ನ ಕಡಿಯುತ್ತಿದ್ದು ಸಾರ್ವ ಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.
ಈ ವೇಳೆ ತಾಲೂಕು ಕರವೇ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಕಾಲೇಜು ಆವರಣದಲ್ಲಿದ್ದ ಸುಮಾರು 100 ಕ್ಕೂ ಹೆಚ್ಚು ಮರಗಳನ್ನ ನಾಶ ಮಾಡಿದ್ದಾರೆ. ಅಷ್ಟೊಂದು ಮರಗಳನ್ನ ಬೆಳೆಯಲು ಎಷ್ಟು ಕಷ್ಟಪಟ್ಟಿ ರುತ್ತಾರೆ. ಟ್ಯಾಂಕರ್ ಮೂಲಕ ನೀರು ಹಾಕಿ ಹಲವು ವರ್ಷಗಳಿಂದ ಮರಗಳನ್ನ ಶಿಕ್ಷಕರು, ವಿದ್ಯಾರ್ಥಿಗಳು ಬೆಳೆಸಿದ್ರು. ಆದ್ರೆ ಏಕಾಏಕಿ ಮಾಹಿತಿ ತಿಳಿಸದೆ, ಸಲಹೆ ಸೂಚನೆಗಳನ್ನ ಪಡೆಯದೇ ಭಾನುವಾರ ಬಂದು ಮರಗಳನ್ನ ನಾಶ ಪಡಿಸುವ ಕೆಲಸ ಮಾಡಿದ್ದಾರೆ. ಇದನ್ನ ಏತಕ್ಕಾಗಿ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಇದ್ರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲ ವಾದಲ್ಲಿ ತೀವ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ರು.
ಇನ್ನಾದ್ರೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ, ಮರಗಳನ್ನ ನಾಶ ಪಡಿಸಿದವ್ರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.




