
CABLE Thieves Arrested : ಇತ್ತೀಚೆಗೆ ಕೇಬಲ್ ಕಳವು ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಮೊಳಕಾಲ್ಮೂರು ಪಟ್ಟಣದಲ್ಲಿ ನಡೆದ ಕಾಫರ್ ಕಂಟ್ರೋಲ್ ಅಲ್ಯೂಮಿನಿಯಂ ಕೇಬಲ್ ಕಳವು ಪ್ರಕರಣದಲ್ಲಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಮೂವರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಜಗದೀಶ್, ಸಣ್ಣ ಈರೇಶ್, ಮತ್ತು ಮಂಜುನಾಥ್ ಎಂದು ಗುರುತಿಸಲಾಗಿದ್ದು, ಇವರು ಮೊಳಕಾಲ್ಮೂರಿನ ಎರಡು ಸ್ಥಳಗಳಿಂದ ಕೇಬಲ್ ಕಳವು ಮಾಡಿದ್ದರು. ಇನ್ನು ಆರೋಪಿಗಳಿಂದ ಸುಮಾರು 2.10 ಲಕ್ಷ ಮೌಲ್ಯದ 300 ಮೀಟರ್ ಉದ್ದದ ಅಲ್ಯೂಮಿನಿಯಂ ಕೇಬಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯನ್ನು ಪೊಲೀಸ್ ಇನ್ಸ್ಪೆಕ್ಟರ್ ವಸಂತ್ ಅಸೋಡೆ ಮತ್ತು ಪಿಎಸ್ಐ ಮಹೇಶ್ ಅವರ ನೇತೃತ್ವದಲ್ಲಿ ನಡೆಸಲಾಗಿದ್ದು, ನಂತರ ಪ್ರಕರಣವನ್ನು ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.




