Bengaluru : ಹಲವು ಮಹಿಳೆಯರಿಗೆ ಬ್ಲ್ಯಾಕ್ಮೇಲ್ ಮಾಡಿ ಲೈಂಗಿಕ ದೌರ್ಜನ್ಯ – ಬೆಂಗಳೂರಲ್ಲಿ ಮಕ್ಕಳ ಆಯೋಗ ಸಮಿತಿ ಸದಸ್ಯ ಅರೆಸ್ಟ್!

ಸಿಲಿಕಾನ್ ಸಿಟಿ Bengaluru ರಲ್ಲಿ ಮಹಿಳೆಯ ಜೊತೆ ರಾಸಲೀಲೆ ವಿಡಿಯೋ ಇಟ್ಟುಕೊಂಡು ಕಾಮುಕನೊಬ್ಬ ಬ್ಲ್ಯಾಕ್ ಮೇಲ್ ಮಾಡುತ್ತಿದ್ದು, ಆರ್ ಆರ್ ನಗರ ಪೊಲೀಸ್ರಿಂದ ಆರೋಪಿ ಚಂದ್ರೇಗೌಡನನ್ನು ಬಂಧನವಾಗಿದೆ. ಆರೋಪಿ ಚಂದ್ರೇಗೌಡ ರಾಮನಗರ ಮಕ್ಕಳ ಆಯೋಗ ಸಮಿತಿ ಸದಸ್ಯನಾಗಿದ್ದು, ಪೊಲೀಸ್ ಅಧಿಕಾರಿ, ವಕೀಲ, ಮಾಧ್ಯಮ ಪ್ರತಿನಿಧಿ ಎಂದು ಬಿಂಬಿಸಿ ವಂಚನೆ ಎಸಗುತ್ತಿದ್ದ.

ಹಲವು ಮಹಿಳೆಯರಿಗೆ ಬ್ಲ್ಯಾಕ್ಮೇಲ್ ಮಾಡಿ ಲೈಂಗಿಕ ದೌರ್ಜನ್ಯ
ಹಲವು ಮಹಿಳೆಯರ ಮೇಲೆ ಈತ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಇನ್ನು ಗಂಡನಿಂದ ದೂರವಾಗಿದ್ದ ಮಹಿಳೆಯೋರ್ವಳನ್ನು ಪರಿಚಯ ಮಾಡಿಕೊಂಡು ಮದುವೆಯಾಗುತ್ತೇನೆ ಎಂದು ನಂಬಿಸಿದ್ದ ಚಂದ್ರೇಗೌಡ, ಬಳಿಕ ಆಕೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ. ಈ ವೇಳೆ ಖಾಸಗಿ ವಿಡಿಯೋ ಮಾಡಿ, ಅದನ್ನೇ ಆಯುಧವನ್ನಾಗಿಸಿಕೊಂಡು ಬೆದರಿಕೆ ಹಾಕಿ ಸುಮಾರು 5 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದಾನೆ.
READ THIS : UGC NET ಜೂನ್ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭ

Bengaluru – ಮಕ್ಕಳ ಆಯೋಗ ಸಮಿತಿ ಸದಸ್ಯ ಅರೆಸ್ಟ್!
ಇನ್ನು ಸಂತ್ರಸ್ತ ಮಹಿಳೆ ಒಮ್ಮೆ ಚಂದ್ರೇಗೌಡನ ಮೊಬೈಲ್ ಚೆಕ್ ಮಾಡಿದ್ದ ವೇಳೆ ಆಕೆಗೆ ಶಾಕ್ ಆಗಿದ್ದು, ಮೊಬೈಲ್ನಲ್ಲಿ ಹಲವು ಮಹಿಳೆಯರ ವಿಡಿಯೋ, ಚಾಟಿಂಗ್ ಪತ್ತೆಯಾಗಿತ್ತು. ಹೀಗಾಗಿ ಸಂತ್ರಸ್ತೆ ಆರೋಪಿ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಸದ್ಯ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

MUST WATCH : ತುಮಕೂರಿನಲ್ಲಿ ಪುಂಡರ ಅಟ್ಟಹಾಸ – BIKEನಲ್ಲಿ ಬಂದು ROBBERY ಮಾಡಿದ್ರು..!




