UGC NET 2026 : ಜೂನ್ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭ; ಅರ್ಹತೆ, ಶುಲ್ಕ ಮತ್ತು ಪ್ರಮುಖ ದಿನಾಂಕಗಳ ಮಾಹಿತಿ ಇಲ್ಲಿದೆ.

UGC NET 2026 : ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆ ಹಾಗೂ ಜೂನಿಯರ್ ರಿಸರ್ಚ್ ಫೆಲೋಶಿಪ್ (JRF) ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಮಹತ್ವದ ಮಾಹಿತಿ ನೀಡಿದೆ. ಜೂನ್ 2026ರ ಸಾಲಿನ ಯುಜಿಸಿ ನೆಟ್ ಪರೀಕ್ಷೆಗೆ ಆನ್ಲೈನ್ ನೋಂದಣಿ ಪ್ರಕ್ರಿಯೆಯು ಏಪ್ರಿಲ್ 29 ರಿಂದ ಅಧಿಕೃತವಾಗಿ ಪ್ರಾರಂಭವಾಗಿದೆ.
85 ವಿಷಯಗಳಿಗೆ ಪರೀಕ್ಷೆ
ಪರೀಕ್ಷೆಯನ್ನು ಜೂನ್ 22ರಿಂದ ಜೂನ್ 30ರವರೆಗೆ ದೇಶಾದ್ಯಂತ ಕಂಪ್ಯೂಟರ್ ಆಧಾರಿತ (CBT) ರೂಪದಲ್ಲಿ ನಡೆಸಲಾಗುತ್ತದೆ. ಈ ಬಾರಿ ಒಟ್ಟು85 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ.
ಅಭ್ಯರ್ಥಿಗಳು ಕೇವಲ ಅಧಿಕೃತ ವೆಬ್ಸೈಟ್ ಮೂಲಕವೇ ಅರ್ಜಿ ಸಲ್ಲಿಸಬೇಕಿದ್ದು, ಇತರ ಯಾವುದೇ ಮಾಧ್ಯಮಗಳನ್ನು ಪರಿಗಣಿಸಲಾಗುವುದಿಲ್ಲ ಎಂದು NTA ಸ್ಪಷ್ಟಪಡಿಸಿದೆ.

READ THIS : ಬುಜ್ಜಿ ಬುಡಕ್ಕೆ ಬೆಂಕಿ ಇಟ್ಟ ಇನ್ಸ್ಟಾ ರೀಲ್..!
ಪರೀಕ್ಷಾ ವಿಧಾನ
ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಜೂನಿಯರ್ ರಿಸರ್ಚ್ ಫೆಲೋಶಿಪ್ (JRF) ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಹತೆಯನ್ನು ನಿರ್ಧರಿಸಲು ಈ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ. ಅಲ್ಲದೆ, ಪಿಎಚ್ಡಿ ಕಾರ್ಯಕ್ರಮಗಳಿಗೆ ಪ್ರವೇಶ ಪಡೆಯಲು ಸಹ ಈ ಪರೀಕ್ಷೆಯ ಅಂಕಗಳು ಅತ್ಯಗತ್ಯವಾಗಿವೆ. ಕಳೆದ ಡಿಸೆಂಬರ್ 2025ರ ಪರೀಕ್ಷೆಯಲ್ಲಿ ಸುಮಾರು 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ 1.76 ಲಕ್ಷ ಅಭ್ಯರ್ಥಿಗಳು ಜೆಆರ್ಎಫ್ ಮತ್ತು ಪಿಎಚ್ಡಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದರು.

ಅರ್ಹತೆ
- ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ 55% ಅಂಕಗಳು (ಮೀಸಲಾತಿ ವರ್ಗಕ್ಕೆ 50%)
- ಅಂತಿಮ ವರ್ಷದ ವಿದ್ಯಾರ್ಥಿಗಳು ಅಥವಾ ಫಲಿತಾಂಶಕ್ಕಾಗಿ ಕಾಯುತ್ತಿರುವವರೂ ಅರ್ಹರು
ಇತ್ತೀಚಿನ ಬದಲಾವಣೆ
ಇನ್ನು ಇತ್ತೀಚಿನ ಬದಲಾವಣೆಯಂತೆ, ನಾಲ್ಕು ವರ್ಷಗಳ (ಅಥವಾ 8 ಸೆಮಿಸ್ಟರ್) ಪದವಿ ಕೋರ್ಸ್ ಅನ್ನು ಕನಿಷ್ಠ 75% ಅಂಕಗಳೊಂದಿಗೆ ಪೂರ್ಣಗೊಳಿಸಿದವರು ಅಥವಾ ಅಂತಿಮ ಸೆಮಿಸ್ಟರ್ನಲ್ಲಿರುವ ವಿದ್ಯಾರ್ಥಿಗಳಿಗೂ ನೇರವಾಗಿ ಯುಜಿಸಿ ನೆಟ್ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗಿದೆ.
MUST WATCH : BSY ಹೆಸರಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗ್ತಾ ಇದ್ದಾರಾ VIJAYENDRA..?




