Shivamogga : ಪೋಷಕರೇ ಎಚ್ಚರ : ಜೋಕಾಲಿಯಲ್ಲಿ ಆಡುತ್ತಿದ್ದಾಗ ಕುಣಿಕೆ ಬಿಗಿದು ಬಾಲಕಿ ದಾರುಣ ಸಾವು.!

ಶಾಲಾ ದಿನಗಳ ಜಂಜಾಟದಿಂದ ಮುಕ್ತಿ ಪಡೆದು, ಅಜ್ಜಿ-ಚಿಕ್ಕಮ್ಮನ ಮನೆಗೆ ತೆರಳಿ ರಜೆಯ ಮಜಾ ಸವಿಯಬೇಕಿದ್ದ ಬಾಲಕಿಯೊಬ್ಬಳು ಆಟವಾಡುತ್ತಿದ್ದ ಸಂದರ್ಭದಲ್ಲೇ ಮೃತ್ಯುವಿನ ಪಾಲಾಗಿರುವ ಘೋರ ಘಟನೆ Shivamogga ತಾಲೂಕಿನ ಲಕ್ಕಿನಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ.
ಪೋಷಕರೇ ಎಚ್ಚರ..!
ಮೃತ ಬಾಲಕಿಯನ್ನು ಶಿವಮೊಗ್ಗ ನಗರದ ವಿದ್ಯಾನಗರ ನಿವಾಸಿ 9 ವರ್ಷದ ಪ್ರಣಮ್ಯ ಎಂದು ಗುರುತಿಸಲಾಗಿದೆ. ಬೇಸಿಗೆ ರಜೆ ಇದ್ದ ಕಾರಣ ಪ್ರಣಮ್ಯ ಒಂದು ವಾರದ ಹಿಂದೆಯಷ್ಟೇ ತನ್ನ ಚಿಕ್ಕಮ್ಮನ ಮನೆ ಲಕ್ಕಿನಕೊಪ್ಪಕ್ಕೆ ಬಂದಿದ್ದಳು.
READ THIS : ಚಿನ್ನಸ್ವಾಮಿಯಲ್ಲಿಂದು ಲೀಗ್ ಹಂತದ ಕೊನೆಯ ಪಂದ್ಯ – ಗೆಲ್ಲೋದ್ಯಾರು?
ಕುಣಿಕೆ ಬಿಗಿದು ಬಾಲಕಿ ದುರಂತ ಸಾವು.!
ಏಪ್ರಿಲ್ 20ರಂದು ಮನೆಯಲ್ಲಿ ಉಳಿದ ಮಕ್ಕಳು ಆಟವಾಡುತ್ತಾ ತುಂಟಾಟ ಮಾಡುತ್ತಿದ್ದಾಗ, ಪ್ರಣಮ್ಯ ಒಬ್ಬಳೇ ಕೋಣೆಯೊಳಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾಳೆ. ರೂಮಿನೊಳಗೆ ಯಾರೂ ಇಲ್ಲದ ವೇಳೆ ಹಳೆಯ ಪಂಚೆಯನ್ನು ಬಳಸಿ ತಾನೇ ಜೋಕಾಲಿಯನ್ನು ಸಿದ್ಧಪಡಿಸಿಕೊಂಡಿದ್ದಾಳೆ. ಕಿಟಕಿಯ ಸರಳಿಗೆ ಅಥವಾ ಮೇಲ್ಛಾವಣಿಯ ಭಾಗಕ್ಕೆ ಪಂಚೆಯನ್ನು ಕಟ್ಟಿ ಜೋಕಾಲಿ ಆಡುತ್ತಿದ್ದಾಗ, ಆಕಸ್ಮಿಕವಾಗಿ ಪಂಚೆಯ ಕುಣಿಕೆ ಬಾಲಕಿಯ ಕುತ್ತಿಗೆಗೆ ಬಿಗಿದುಕೊಂಡಿದೆ. ಬಾಗಿಲು ಒಳಗಿನಿಂದ ಲಾಕ್ ಆಗಿದ್ದರಿಂದ ಬಾಲಕಿಯ ಕಿರುಚಾಟ ಯಾರಿಗೂ ಕೇಳಿಸಲಿಲ್ಲ. ಉಸಿರಾಟಕ್ಕೆ ತೀವ್ರ ಅಡಚಣೆ ಉಂಟಾಗಿ ಆಕೆ ಅಲ್ಲೇ ಪ್ರಾಣ ಬಿಟ್ಟಿದ್ದಾಳೆ.

ಬಹಳ ಹೊತ್ತಾದರೂ ಮಗು ಹೊರಗೆ ಬಾರದಿದ್ದಾಗ ಅನುಮಾನಗೊಂಡ ಮನೆಯವರು ಬಾಗಿಲು ಒಡೆದು ನೋಡಿದಾಗ ಬಾಲಕಿ ಅಚೇತನ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ ಅಷ್ಟರಲ್ಲಿ ಪ್ರಣಮ್ಯ ಮೃತಪಟ್ಟಿದ್ದಾಳೆ.
Shivamogga – ಪ್ರಕರಣ ದಾಖಲು
ಇನ್ನು ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
MUST WATCH : ಪ್ಲ್ಯಾಸ್ಟಿಕ್ ಗೋಡೌನ್ಗೆ ಆಕಸ್ಮಿಕ ಬೆಂಕಿ- ಧಗಧಗನೆ ಹೊತ್ತಿ ಉರಿದ ಗೋದಾಮು




