Bagalkot ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಹೊಸ ಕಾರು ಖರೀದಿಸಿದ್ದ ಯುವಕನನ್ನು ಚಾಕುವಿನಿಂದ ಇರಿದು ಬಳಿಕ ಕಾರಿನಲ್ಲೇ ಸುಟ್ಟು ಕೊಂದ ಭೀಕರ ಘಟನೆ ನಡೆದಿದೆ…

Bagalkot ಮನುಕುಲವೇ ತಲೆತಗ್ಗಿಸುವಂತಹ ಭೀಕರ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ. ಹೊಸ ಕಾರು ಖರೀದಿಸಿ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬಳಿಕ ಕಾರಿನ ಸಮೇತ ಸುಟ್ಟು ಕೊಂದಿದ್ದಾರೆ.
ದೇವಸ್ಥಾನದಿಂದ ಮನೆಗೆ ಬರುತ್ತಿದ್ದಾಗ ದಾಳಿ
ಮೃತ ವ್ಯಕ್ತಿಯನ್ನು ಸೋಮು ಅಲಿಯಾಸ್ ಸೋಮಲಿಂಗಪ್ಪ ಪಡಸಲಗಿ (36) ಎಂದು ಗುರುತಿಸಲಾಗಿದೆ. ಅವರು ಹೊಸ ಕಾರು ಖರೀದಿಸಿ ಮನೆ ದೇವರ ಪೂಜೆ ಮಾಡಿಕೊಂಡು ಬಸವ ಜಯಂತಿ ದಿನ ಸಂಜೆ ಸುಮಾರು 7:30 ಗಂಟೆ ವೇಳೆಗೆ ಗ್ರಾಮಕ್ಕೆ ಮರಳುತ್ತಿದ್ದರು.
ಈ ವೇಳೆ, ಅವರ ಬರುವುದನ್ನು ಕಾದು ಕುಳಿತಿದ್ದ ಆರೋಪಿಗಳು ಕಾರಿಗೆ ಅಡ್ಡಲಾಗಿ ನಿಂತು ಗಲಾಟೆ ಆರಂಭಿಸಿದ್ದಾರೆ.
MUST READ : MI vs GT ಪಂದ್ಯದಲ್ಲಿ ಮುಂಬೈಗೆ 99 ರನ್ ಭರ್ಜರಿ ಜಯ..!!

ಚಾಕುವಿನಿಂದ ಇರಿದು ಬಳಿಕ ಕಾರಿನಲ್ಲೇ ಸುಟ್ಟು ಕೊಲೆ
ಸೋಮಲಿಂಗಪ್ಪ ಕಾರಿನಿಂದ ಇಳಿದು ಬರುತ್ತಿದ್ದಂತೆಯೇ ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಹೊಟ್ಟೆ, ಎದೆ ಮತ್ತು ಕುತ್ತಿಗೆ ಭಾಗಗಳಿಗೆ ಚಾಕುವಿನಿಂದ ಇರಿದ ಪರಿಣಾಮ ಅವರು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಅದರ ಬಳಿಕ, ಆರೋಪಿಗಳು ತಮ್ಮೊಂದಿಗೆ ತಂದಿದ್ದ ಪೆಟ್ರೋಲ್ ಅನ್ನು ಕಾರಿನ ಮೇಲೆ ಹಾಗೂ ಮೃತದೇಹದ ಮೇಲೆ ಸುರಿದು ಬೆಂಕಿ ಹಚ್ಚಿದ್ದಾರೆ.
ಇದರಿಂದ ಕಾರು ಸಹಿತ ಮೃತದೇಹ ಸಂಪೂರ್ಣವಾಗಿ ಸುಟ್ಟು ಹೋಗಿದೆ.

ಐವರು ಆರೋಪಿಗಳು ಬಂಧನ, ಇನ್ನೂ ತನಿಖೆ ಮುಂದುವರಿಕೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಂಬಂಧಿಗಳಾದ:
- ಸದಾಶಿವ ಪಡಸಲಗಿ
- ರವಿ ಪಾಟೀಲ್
- ನವೀನ್
ಸಹಿತ ಒಟ್ಟು ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನೂ ಒಟ್ಟು 10 ಆರೋಪಿಗಳ ಹೆಸರನ್ನು ಉಲ್ಲೇಖಿಸಿ ಮೃತನ ತಾಯಿ ಸಾವಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೊಲೆಗೆ ಕಾರಣ ಏನು?
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಕೊಲೆಗೆ ಅನೈತಿಕ ಸಂಬಂಧದ ಶಂಕೆ ಹಿನ್ನೆಲೆ ಇರಬಹುದೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಆದರೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.
MUST WATCH : ಗಾಂಜಾ ಗಿರಾಕಿಗಳ ಅಡ್ಡೆಯಾದ ಅಂಬೇಡ್ಕರ್ ಭವನ – ನಿರ್ಮಾಣವಾಗಿ ವರ್ಷವಾದ್ರೂ ಉದ್ಘಾಟನೆ ಭಾಗ್ಯವಿಲ್ಲ..!

