IPL 2026 : ಪಂಜಾಬ್ ಪಡೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಹಾಗಿದ್ರೆ ನೂತನ ಪಾಯಿಂಟ್ಸ್ ಟೇಬಲ್ನಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ಎಂದು ನೋಡೋಣ.

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರಲ್ಲಿ ಇದೀಗ 29 ಪಂದ್ಯಗಳು ಮುಗಿದಿದ್ದು, ಕೊನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 54 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಪಾಯಿಂಟ್ಸ್ ಟೇಬಲ್ ಸ್ಥಿತಿ

1️⃣ಪಂಜಾಬ್ ಕಿಂಗ್ಸ್ (PBKS)
ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು 6 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿದ್ದು, 11 ಅಂಕಗಳೊಂದಿಗೆ +1.420 ನೆಟ್ ರನ್ ರೇಟ್ ನೊಂದಿಗೆ ಅಗ್ರಸ್ಥಾನದಲ್ಲಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದೆ.

2️⃣ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
ಆರ್ಸಿಬಿ 6 ಪಂದ್ಯಗಳಲ್ಲಿ 4 ಗೆಲುವು ಹಾಗೂ 2 ಸೋಲು ಕಂಡಿದ್ದು, 8 ಅಂಕಗಳೊಂದಿಗೆ +1.171 ನೆಟ್ ರನ್ ರೇಟ್ನೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.

3️⃣ರಾಜಸ್ಥಾನ್ ರಾಯಲ್ಸ್ (RR)
ರಿಯಾನ್ ಪರಾಗ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಕೂಡ 6 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿ 8 ಅಂಕಗಳೊಂದಿಗೆ +0.599 ನೆಟ್ರನ್ರೇಟ್ನೊಂದಿಗೆ ಮೂರನೇ ಸ್ಥಾನದಲ್ಲಿದೆ.

4️⃣ಸನ್ರೈಸರ್ಸ್ ಹೈದರಾಬಾದ್ (SRH)
ಇಶಾನ್ ಕಿಶನ್ ನಾಯಕತ್ವದ SRH ತಂಡವು 3 ಗೆಲುವುಗಳೊಂದಿಗೆ 6 ಅಂಕ ಪಡೆದು+0.566 ನೆಟ್ ರನ್ ರೇಟ್ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
READ THIS : ಬಿಸಿಲಾಘಾತಕ್ಕೆ ಕುಸಿದು ಸಾವನ್ನಪ್ಪಿದ 20 ವರ್ಷದ ಯುವಕ

5️⃣ಡೆಲ್ಲಿ ಕ್ಯಾಪಿಟಲ್ಸ್ (DC)
ಅಕ್ಷರ್ ಪಟೇಲ್ ನಾಯಕತ್ವದ ಡಿಸಿ 5 ಪಂದ್ಯಗಳಲ್ಲಿ 3 ಗೆಲುವುಗಳೊಂದಿಗೆ 6 ಅಂಕ ಹಾಗೂ +0.310 ನೆಟ್ ರನ್ ರೇಟ್ ಪಡೆದು ಐದನೇ ಸ್ಥಾನದಲ್ಲಿದೆ.
ಉಳಿದ ತಂಡಗಳ ಸ್ಥಿತಿ
ಗುಜರಾತ್ ಟೈಟಾನ್ಸ್ 6ನೇ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 7ನೇ ಸ್ಥಾನದಲ್ಲಿದೆ. ಲಕ್ನೋ ಸೂಪರ್ ಜೈಂಟ್ಸ್ 8ನೇ ಸ್ಥಾನ, ಕೊಲ್ಕತ್ತಾ ನೈಟ್ ರೈಡರ್ಸ್ 9ನೇ ಸ್ಥಾನದಲ್ಲಿದೆ. ಒಂದೇ ಗೆಲುವು ಪಡೆದಿರುವ ಮುಂಬೈ ಇಂಡಿಯನ್ಸ್ ತಂಡ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದೆ.

MUST WATCH : ಸಚಿವ ಜಮೀರ್ ಮತ್ತೆ JDS ಸೇರ್ತಾರಾ..? HDK ಏನಂದ್ರು ನೋಡಿ?




