
ASIA CUP 2025 : ಕ್ರಿಕೆಟ್ ಅಭಿಮಾನಿಗಳಿಗೆ ಇಂದು ಕ್ರಿಕೆಟ್ ಹಬ್ಬವೇ ಸರಿ! ಏಷ್ಯಾ ಕಪ್ (Asia Cup ) ಕ್ರಿಕೆಟ್ ಟೂರ್ನಿಯ 41 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಭಾರತದ ತಂಡ (Team India) ಮತ್ತು ಪಾಕಿಸ್ತಾನದ ತಂಡ (Pakistan Team) ಫೈನಲ್ನಲ್ಲಿ ಮುಖಾಮುಖಿಯಾಗುತ್ತಿದೆ.
ಇಂದು ರಾತ್ರಿ 8 ಗಂಟೆಗೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಈ ಸೂಪರ್ ಸಂಡೇ ಫೈನಲ್ ಪಂದ್ಯ, ದಕ್ಷಿಣ ಏಷ್ಯಾದ ಕ್ರಿಕೆಟ್ ಪ್ರೇಮಿಗಳಿಗೆ ಬಹುದಿನಗಳ ನಿರೀಕ್ಷೆಯ ಪೂರ್ಣತೆಯಂತೆ ಪರಿಣಮಿಸಿದೆ. ಪೂರ್ವದ ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿದ್ದ ಪಾಕಿಸ್ತಾನ, ಈ ಸಲ ಭಾರತದ ವಿರುದ್ಧ ಗೆದ್ದು ಸೇಡು ತೀರಿಸಿಕೊಳ್ಳಲು ನಿರೀಕ್ಷೆಯಲ್ಲಿದೆ. ಇತ್ತ ಭಾರತ ಕೂಡ ಶಕ್ತಿಶಾಲಿ ತಂಡವನ್ನು ಒಳಗೊಂಡು ಮೂರನೇ ಪಂದ್ಯದಲ್ಲೂ ಪಾಕ್ ತಂಡವನ್ನು ಮಣಿಸಲು ತವಕಿಸುತ್ತಿದೆ.
ಈ ಮಹತ್ವದ ಪಂದ್ಯವನ್ನು ಕೋಟಿಗಟ್ಟಲೆ ಅಭಿಮಾನಿಗಳು ನೇರ ಪ್ರಸಾರದಲ್ಲಿ ಅನುಭವಿಸಲು ಸಜ್ಜಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ (Social Media) ಈಗಾಗಲೇ INDvsPAK ಟ್ರೆಂಡ್ ಆಗುತ್ತಿದೆ.




