ದ್ವಿತೀಯ PUC ಪರೀಕ್ಷೆ-2ಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸಿಹಿ ಸುದ್ದಿ ನೀಡಿದೆ.

2026ನೇ ಸಾಲಿನ ದ್ವಿತೀಯ PUC ಪರೀಕ್ಷೆ–2ಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಮಹತ್ವದ ಸಡಿಲಿಕೆ ದೊರೆತಿದೆ. ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿರುವ ಮಂಡಳಿ, ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.
ಏಪ್ರಿಲ್ 18 ರವರೆಗೆ ವಿಸ್ತರಣೆ
ಈ ಮೊದಲು ಪುನರಾವರ್ತಿತ ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಏಪ್ರಿಲ್ 17 ಕೊನೆಯ ದಿನವಾಗಿತ್ತು. ಇದೀಗ ಈ ಗಡುವನ್ನು ಏಪ್ರಿಲ್ 18, 2026ರವರೆಗೆ ವಿಸ್ತರಿಸಲಾಗಿದೆ.
READ THIS : ವಿಮಾನ ನಿಲ್ದಾಣದಲ್ಲಿ 2,442 ಹುದ್ದೆಗಳಿಗೆ ಭರ್ಜರಿ ನೇಮಕಾತಿ

ಅರ್ಜಿ ಸಲ್ಲಿಸುವ ವಿಧಾನ
ವಿದ್ಯಾರ್ಥಿಗಳು ಆನ್ಲೈನ್ ಮೂಲಕ ನೀಡಿರುವ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು. ಜೊತೆಗೆ, ತಮ್ಮ ಸಂಬಂಧಿತ ಕಾಲೇಜುಗಳಲ್ಲಿಯೇ ಆಫ್ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ದ್ವಿತೀಯ PUC ಪರೀಕ್ಷೆ 2 – ವಿಸ್ತರಣೆಗೆ ಕಾರಣ
ಹೆಚ್ಚಿನ ಸಮಯ ನೀಡುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರು ಇ-ಮೇಲ್ ಹಾಗೂ ಸಹಾಯವಾಣಿ ಮೂಲಕ ಮನವಿ ಮಾಡಿದ್ದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಂಡಳಿ ತಿಳಿಸಿದೆ.
ಇದೇ ವೇಳೆ, ಏಪ್ರಿಲ್ 11ರಂದು ಪ್ರಕಟಿಸಲಾದ ಪರಿಷ್ಕೃತ ಸುತ್ತೋಲೆಯ ಇತರೆ ನಿಯಮಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಲಾಗಿದೆ.

MUST WATCH : ಕೆಆರ್ಎಸ್ ಪಕ್ಷದ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ ಪರಮೇಶ್ವರ್




