IPL ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡು ಸಾಲದ ಒತ್ತಡದಿಂದ ಖಿನ್ನತೆಗೆ ಒಳಗಾದ ವ್ಯಕ್ತಿ ಬೆಣ್ಣೆತೊರಾ ಜಲಾಶಯಕ್ಕೆ ಜಿಗಿದು Suicide ಮಾಡಿಕೊಂಡ ಘಟನೆ ಮಹಾಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ…

IPL ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡು ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬರು ಬೆಣ್ಣೆತೊರಾ ಜಲಾಶಯದ ಹಿನ್ನೀರಿಗೆ ಜಿಗಿದು Suicide ಗೆ ಶರಣಾಗಿರುವ ಘಟನೆ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮತ್ತು ದುಃಖದ ವಾತಾವರಣವನ್ನು ಮೂಡಿಸಿದೆ.

ನಾಗೂರ ಸೇತುವೆ ಬಳಿ ಬೈಕ್ ಮತ್ತು ಮೊಬೈಲ್ ಪತ್ತೆ
ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಕಾಳಗಿ ತಾಲೂಕಿನ ರುಮ್ಮನಗೂಡ್ ನಿವಾಸಿ ಚಂದ್ರಕಾಂತ ದೇಸಾಯಿ (40) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಅವರು ದಿನಾಲೂ IPL Betting ಆಡುತ್ತಿದ್ದು, ಇದರಿಂದ ದೊಡ್ಡ ಪ್ರಮಾಣದಲ್ಲಿ ಹಣ ಕಳೆದುಕೊಂಡಿದ್ದರು.
ಇದಲ್ಲದೆ, ಹಲವರ ಬಳಿ ಸಾಲ ಮಾಡಿದ್ದ ಕಾರಣ ಸಾಲಗಾರರ ಕಿರುಕುಳವೂ ಹೆಚ್ಚಾಗಿತ್ತು. ಈ ಒತ್ತಡವನ್ನು ತಾಳಲಾರದೆ ಅವರು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ.
ನಾಗೂರ ಸೇತುವೆ ಬಳಿ ಅವರ ಬೈಕ್ ನಿಲ್ಲಿಸಿದ್ದ ಸ್ಥಿತಿಯಲ್ಲಿ ಮತ್ತು ಮೊಬೈಲ್ ಫೋನ್ ಇಟ್ಟಿರುವುದು ಪತ್ತೆಯಾಗಿದೆ.
MUST READ : RCB vs RR : ಗುವಾಹಟಿಯಲ್ಲಿ ಸರಿಸಾಟಿಯಿಲ್ಲದ ವೈಭವ್ ಪ್ರದರ್ಶನ – ಆರ್ಸಿಬಿಗೆ 6 ವಿಕೆಟ್ ಸೋಲು…!!

ಮಹಾಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಈ ದುರ್ಘಟನೆ ಮಹಾಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
MUST WATCH : ಅಬಕಾರಿ, ಪೊಲೀಸರ ಭರ್ಜರಿ ಕಾರ್ಯಾಚರಣೆ ಲಕ್ಷಾಂತರ ರೂ. ಮೌಲ್ಯದ ಮದ್ಯ ನಾಶ | PAVAGADA NEWS |




