ರಾಜ್ಯಕ್ಕೆ ಬರಬೇಕಾದ ಕನಿಷ್ಠ ಅನಿಲವನ್ನೂ ಕೇಂದ್ರ ಸರ್ಕಾರ ಪೂರೈಕೆ ಮಾಡಿಲ್ಲ ಎಂದು ಗೃಹಸಚಿವ G Parameshwar ಆರೋಪಿಸಿದ್ದಾರೆ.

ಬೆಂಗಳೂರುದಲ್ಲಿ ಮಾತನಾಡಿದ ಗೃಹಸಚಿವ G Parameshwar , ರಾಜ್ಯಕ್ಕೆ ಬರಬೇಕಾದ ಕನಿಷ್ಠ ಅನಿಲವನ್ನೂ ಕೇಂದ್ರ ಸರ್ಕಾರ ಪೂರೈಕೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದರಿಂದಲೇ ರಾಜ್ಯದಲ್ಲಿ ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಜನರಿಗೆ ತೊಂದರೆ ಆಗುತ್ತಿದೆ ಎಂದು ಹೇಳಿದರು.
ಅದರ ಜೊತೆಗೆ, ನಾವು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಒಂದು ರಾಜ್ಯಕ್ಕೆ ನೀಡಬೇಕಾದ ಅಲಾಟ್ಮೆಂಟ್ ಸರಿಯಾಗಿ ನೀಡಬೇಕು. ಕನಿಷ್ಠ ಪೂರೈಕೆಯನ್ನಾದರೂ ಮಾಡಬೇಕು ಎಂದು ಅವರು ಒತ್ತಾಯಿಸಿದರು.
MUST READ : Haveri : ಟ್ರ್ಯಾಕ್ಟರ್ ಹರಿದು 2 ವರ್ಷದ ಪುಟ್ಟ ಕಂದಮ್ಮ ಸಾವು..!!

ಯುದ್ಧ ಪರಿಸ್ಥಿತಿಯಿಂದ ಎಲ್ಲರಿಗೂ ತೊಂದರೆ – ಸಚಿವರ ಹೇಳಿಕೆ
ಮುಂದುವರಿದು ಮಾತನಾಡಿದ ಸಚಿವರು, ಪ್ರಸ್ತುತ ಜಾಗತಿಕ ಯುದ್ಧ ಪರಿಸ್ಥಿತಿಯಿಂದ ಎಲ್ಲ ರಾಜ್ಯಗಳಿಗೂ ತೊಂದರೆ ಉಂಟಾಗಿದೆ.
ಆದರೆ ಎಲ್ಲಾ ರಾಜ್ಯಗಳಿಗೆ ನೀಡುವಂತೆ ಕರ್ನಾಟಕಕ್ಕೂ ಸಮರ್ಪಕವಾಗಿ ಅನಿಲ ಪೂರೈಕೆ ಮಾಡಬೇಕು ಎಂದು ಹೇಳಿದರು.
ಇದಲ್ಲದೆ, ರಾಜ್ಯಕ್ಕೆ ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಅಗತ್ಯವಿದ್ದು, ಅವುಗಳ ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗಬಾರದು ಎಂದು ಅವರು ಸ್ಪಷ್ಟಪಡಿಸಿದರು.

ಕಾಳಸಂತೆಯಲ್ಲಿ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ
ಇದೇ ವೇಳೆ, ಎಲ್ಪಿಜಿ ಕಾಳಸಂತೆಯಲ್ಲಿ ಮಾರಾಟ ಮಾಡುವವರ ಮೇಲೆ ಸರ್ಕಾರ ಕಟ್ಟುನಿಟ್ಟಿನ ನಿಗಾವಹಿಸಿದೆ ಎಂದು ಪರಮೇಶ್ವರ್ ತಿಳಿಸಿದರು.
ಈಗಾಗಲೇ ಕೆಲವು ಸ್ಥಳಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಮುಂದುವರೆದು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಹಿಂದಿ ಭಾಷೆ ಮತ್ತು ಕ್ಷೇತ್ರ ಪುನರ್ವಿಂಗಡಣೆ ಕುರಿತು ಪ್ರತಿಕ್ರಿಯೆ
ಹಿಂದಿ ಭಾಷೆ ಕಡ್ಡಾಯವಲ್ಲ ಎಂಬ ನಿಯಮ ಜಾರಿಗೆ ಸಂಬಂಧಿಸಿದ ಲೋಕಭವನ ಪತ್ರ ವಿಚಾರ ಕುರಿತು ಮಾತನಾಡಿದ ಸಚಿವರು, ಇದು ಹೊಸ ವಿಷಯವಲ್ಲ ಎಂದು ಹೇಳಿದರು.

ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಕುರಿತು ಪ್ರತಿಕ್ರಿಯಿಸಿದ ಅವರು, ಜನಸಂಖ್ಯೆ ಆಧಾರದ ಮೇಲೆ ಮಾತ್ರ ನಿರ್ಧಾರ ಕೈಗೊಳ್ಳಬಾರದು ಎಂಬ ಮುಖ್ಯಮಂತ್ರಿ ಹೇಳಿಕೆ ಸರಿಯಾಗಿದೆ. ಉತ್ತರ ಭಾರತದಲ್ಲಿ ಜನಸಂಖ್ಯೆ ಹೆಚ್ಚು ಇರುವ ಕಾರಣ ಈ ವಿಷಯ ಪ್ರಸ್ತಾಪವಾಗಿದೆ ಎಂದು ತಿಳಿಸಿದ್ದಾರೆ.
ಸಮಸ್ಯೆ ಶೀಘ್ರ ಬಗೆಹರಿಯಲಿ – ಸಚಿವರ ಆಶಯ
ಕೊನೆಗೆ, ಹಿಂದಿ ಬಳಸದ ರಾಜ್ಯಗಳಲ್ಲಿ ಈ ರೀತಿಯ ವಿಚಾರಗಳು ಮೊದಲಿನಿಂದಲೇ ಇದ್ದು, ಸಮಸ್ಯೆ ಆದಷ್ಟು ಬೇಗ ಬಗೆಹರಿದರೆ ಜನರಿಗೆ ಅನುಕೂಲವಾಗುತ್ತದೆ ಎಂದು ಸಚಿವ ಜಿ. ಪರಮೇಶ್ವರ್ ಅಭಿಪ್ರಾಯಪಟ್ಟರು.
MUST WATCH : DAVANAGERE BY ELECTION | ಜಮೀರ್ಗಾಗಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಮನೆಯಲ್ಲಿ ಭರ್ಜರಿ ಔತಣ ಕೂಟ |




