Kalaburagi : ರಾಜ್ಯದಲ್ಲೊಂದು ಧಾರುಣ ಘಟನೆ: ದೇವಸ್ಥಾನಕ್ಕೆ ಹರಕೆ ತೀರಿಸಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಭೀಮಾ ನದಿಯಲ್ಲಿ ಮುಳುಗಿ ಸಾವು!

Kalaburagi ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರ್ ಗ್ರಾಮದಲ್ಲಿ ದಾರುಣ ಘಟನೆಯೊಂದು ನಡೆದಿದೆ. ದೇವಸ್ಥಾನಕ್ಕೆ ಹರಕೆ ತೀರಿಸಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ಭೀಮಾ ನದಿಯಲ್ಲಿ ಈಜಲು ಹೋಗಿ ಜಲಸಮಾಧಿಯಾದ ದುರ್ಘಟನೆ ನಡೆದಿದೆ.
ನೀರಿನಲ್ಲಿ ಮುಳುಗಿ ಸಾವು
ಮೃತ ವಿದ್ಯಾರ್ಥಿಗಳನ್ನು ಗೌರ್ (ಕೆ) ಗ್ರಾಮದ ನಿವಾಸಿಗಳಾದ ಪುಂಡಲಿಕ್ ಮೂಲಿಮನಿ (17) ಮತ್ತು ಮಹೇಶ್ (16) ಎಂದು ಗುರುತಿಸಲಾಗಿದೆ. ಈ ಇಬ್ಬರು ವಿದ್ಯಾರ್ಥಿಗಳು ತಮ್ಮ ಕುಟುಂಬಸ್ಥರೊಂದಿಗೆ ಮಣ್ಣೂರ್ ಯಲ್ಲಮ್ಮನ ದೇವಸ್ಥಾನಕ್ಕೆ ಹರಕೆ ತೀರಿಸಲು ಹೋಗಿದ್ದರು. ಪೂಜೆ ಮುಗಿಸಿ ದರ್ಶನ ಪಡೆದ ಬಳಿಕ ದೇವಸ್ಥಾನದ ಸಮೀಪ ಹರಿಯುವ ಭೀಮಾ ನದಿಗೆ ಸ್ನಾನ ಮತ್ತು ಈಜಲು ತೆರಳಿದ್ದರು.
READ THIS : ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ – ಸಂಗೀತ ಆಸಕ್ತ ಯುವಜನರಿಗೆ ಸೇನೆ ಸೇರಲು ಸುವರ್ಣಾವಕಾಶ
ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆ ದುರಂತ – Kalaburagi
ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಮೇಲ್ಭಾಗದಿಂದ ನೀರಿನ ಒಳಹರಿವು ಹೆಚ್ಚಾಗಿತ್ತು. ಇದರಿಂದ ನೀರಿನ ಹರಿವು ವೇಗವಾಗಿ ಸಾಗುತ್ತಿತ್ತು. ಪರಿಸ್ಥಿತಿಯನ್ನು ಅರಿಯದೆ ನದಿಗೆ ಇಳಿದ ಇಬ್ಬರೂ ವಿದ್ಯಾರ್ಥಿಗಳು ನೀರಿನ ಸೆಳೆತಕ್ಕೆ ಸಿಲುಕಿ ದಡ ಸೇರಲಾಗದೆ ಮುಳುಗಿ ಸಾವನ್ನಪ್ಪಿದ್ದಾರೆ.

ಅಫಜಲಪುರ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ – Kalaburagi
ಘಟನೆ ಗಮನಿಸಿದ ಸ್ಥಳೀಯರು ರಕ್ಷಣೆಗೆ ಮುಂದಾದರೂ ಅಷ್ಟರಲ್ಲೇ ವಿದ್ಯಾರ್ಥಿಗಳು ನೀರಿನಲ್ಲಿ ಕಾಣೆಯಾಗಿದ್ದರು. ಮಾಹಿತಿ ತಿಳಿದು ಅಫಜಲಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಮೀನುಗಾರರು ಮತ್ತು ಈಜುಗಾರರ ಸಹಾಯದಿಂದ ಶವಗಳನ್ನು ಹೊರತೆಗೆದ ಬಳಿಕ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಕರಣ ದಾಖಲು
ಇನ್ನು ಘಟನೆ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
MUST WATCH : ದಾವಣಗೆರೆಯಲ್ಲಿ ಕೈ ಅಭ್ಯರ್ಥಿನೇ ಗೆಲ್ಲೋದು ಭವಿಷ್ಯ ನುಡಿದ್ರಾ ಕೇಂದ್ರ ಸಚಿವ ಹೆಚ್ಡಿಕೆ




