
CHIKKABALLAPURA : ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ಧ ಪೌರಾಣಿಕ ಹಾಗೂ ಧಾರ್ಮಿಕ ತಾಣವಾದ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮೊದಲ ಬಾರಿಗೆ ಬೋಟಿಂಗ್ ಸೇವೆ ಆರಂಭಗೊಂಡಿದ್ದು, ಆದಿಚುಂ ಚನಗಿರಿ ಶಾಖಾಮಠದ ಶ್ರೀ ಮಂಗಳನಾಥ ಸ್ವಾಮೀಜಿ ಭವ್ಯ ಚಾಲನೆ ನೀಡಿ ಶುಭ ಕೋರಿದ್ರು.
ಇನ್ನು ಚಿಕ್ಕಬಳ್ಳಾಪುರ ಇತಿಹಾಸದಲ್ಲೇ ಮೊದಲ ಬೋಟಿಂಗ್ ಸೇವೆ ಇದಾಗಿದ್ದು ಶ್ರೀಗಳು ಸ್ವತಃ ಬೋಟಿಂ ಗ್ನಲ್ಲಿ ಕುಳಿತು ಸಂಚರಿಸುವ ಮೂಲಕ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಅಲ್ದೇ ಈ ವೇಳೆ ಶ್ರೀಗಳನ್ನ ಮಂಗಳ ವಾದ್ಯಗಳೊಂದಿಗೆ ಕಾರ್ಯಕ್ರಮಕ್ಕೆ ಸ್ವಾಗತಿಸಲಾಯ್ತು. ಈ ವೇಳೆ ಬೋಟಿಂಗ್ ವ್ಯವಸ್ಥಾಪಕ ಭೂಷಣ್ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್,ಸಂಸದ ಡಾ.ಕೆ.ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಮತ್ತು ಅಧಿಕಾರಿಗಳ ಆಶೀರ್ವಾದದೊಂದಿಗೆ ಗ್ರಾಮಾಂತರ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಬೋಟಿಂಗ್ ಸೇವೆ ಪ್ರಾರಂಭ ಮಾಡಿದ್ದೇವೆ. ಅಲ್ದೇ ನಮ್ಮಲ್ಲಿ ತರಬೇತಿ ಪಡೆದ ನುರಿತ ಸಿಬ್ಬಂದಿಯಿದ್ದು, ಗ್ರಾಹಕರಿಗೆ ಲೈಫ್ ಜಾಕೆಟ್,ಲೈಫ್ ಇನ್ಶುರೆನ್ಸ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಯಾರಿಗೂ ಅಪಾಯವಾಗದಂತೆ ಎಲ್ಲೆಡೆ ಸಿಸಿ ಕ್ಯಾಮರಾ ಕಣ್ಗಾವಲು ಏರ್ಪಡಿಸಲಾಗಿದ್ದು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವಾಟರ್ ಸ್ಪೋರ್ಟ್ಸ್ ಅಡ್ವೆಂಚರ್ ನಿಂದ ತರಬೇತಿ ಪಡೆದ ಚಾಲಕರಿಂದ ಬೋಟ್ ನಡೆಸಲಾಗುವುದು ಎಂದ್ರು.
ಇನ್ನು ಸಾರ್ವಜನಿಕರು ಮಾತನಾಡಿ ಶ್ರೀನಿವಾಸ್ ಸಾಗರ ಜಲಾಶಯ ವೆಂಕಟರಮಣ ಸ್ವಾಮಿಯ ಶ್ರೀ ಕ್ಷೇತ್ರವಾಗಿದೆ. ಇಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿದ್ದು ಸುತ್ತಮುತ್ತಲ ಗ್ರಾಮಸ್ಥರಿಗೆ ಸಂತೋಷ ತಂದಿದೆ. ಬೋಟಿಂಗ್ ಅನುಭವ ಪಡೆಯಲು ಗೋವಾ ಮಂಗಳೂರು ಮೊದಲಾದ ಕಡೆ ಹೋಗಿ ದೋಣಿ ವಿಹಾರಗಳಿಗೆ ಜನರು ಹೋಗ ಬೇಕಾಗಿತ್ತು. ಆದ್ರೆ ಇಂದು ನಮ್ಮ ಗ್ರಾಮದ ಪಕ್ಕದಲ್ಲಿಯೇ ಈ ವ್ಯವಸ್ಥೆ ಇರುವುದರಿಂದ ಕುಟುಂಬ ಸಮೇತ ಬೋಟಿಂಗ್ ನಲ್ಲಿ ಕುಳಿತು ಶ್ರೀನಿವಾಸ ಸಾಗರ ವೀಕ್ಷಣೆ ಮಾಡಿ ಸಂತೋಷಪಟ್ಟಿದ್ದೇವೆ. ಇಲ್ಲಿ ದೋಣಿ ವಿಹಾರಕ್ಕೆ ಅವಕಾಶ ಮಾಡಿಕೊಟ್ಟಿರುವುದು ಬಡವರ ಪಾಲಿಗೆ ಸಂತೋಷ ತರುವ ವಿಚಾರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ರು.
ಒಟ್ನಲ್ಲಿ ಬೋಟಿಂಗ್ ಗಾಗಿ ಸಾರ್ವಜನಿಕರು ಬೇರೆಕಡೆ ತೆರಳಬೇಕಾಗಿತ್ತು, ಇದೀಗ ಚಿಕ್ಕಬಳ್ಳಾಪುರದಲ್ಲಿಯೇ ಬೋಟಿಂಗ್ ವ್ಯವಸ್ಥೆ ಕಲ್ಪಿಸಿದ್ದು, ಸ್ಥಳೀಯರ ಖುಷಿಗೆ ಪಾರವಿಲ್ಲದಂತಾಗಿದೆ.





