Tumakuru ಜಿಲ್ಲಾಸ್ಪತ್ರೆಯ ವೈದ್ಯರ ಲಂಚಾವತಾರ – ಲೋಕಾ ಬಲೆಗೆ ಬಿದ್ದ ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯೆ.

ಸರ್ಕಾರಿ ಆಸ್ಪತ್ರೆಗಳು ಇರವುದು ಬಡವರ ಸೇವೆಗಾಗಿ, ಆದ್ರೆ ಬಡವರಾಗಿ ಇರುವ ಆಸ್ಪತ್ರೆಯಲ್ಲೇ ಭ್ರಷ್ಟಚಾರ ತಾಂಡವ ಆಡ್ತಾ ಇದ್ದು, ಬಡ ರೋಗಿಗಳಿಂದ ವೈದ್ಯರು ಸುಲಿಗೆಗೆ ಇಳಿದಿದ್ದಾರಾ ಎಂಬ ಅನುಮಾನ ಶುರುವಾಗಿದೆ. ಬಡವರ ಬಳಿ ಹಣ ಇದ್ದಿದ್ದರೇ, ಅವರು ಸರ್ಕಾರಿ ಆಸ್ಪತ್ರೆಯನ್ನು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದರು.

ಹಗಲು ದರೋಡೆ
ಆದರೆ ಹಣ ಇಲ್ಲದೇ ಸರ್ಕಾರದಿಂದ ಸಿಗುವ ಸೇವೆಯನ್ನು ಪಡೆಯುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದ್ರೆ, ಇಲ್ಲಿನ ವೈದ್ಯರು ಹಗಲು ದರೋಡೆಗೆ ಇಳಿದಿದ್ದು, ಬಡರೋಗಿಗಳು ಎಲ್ಲಿಗೆ ಹೋಗಬೇಕು ಅನ್ನುವುದೇ ಪ್ರಶ್ನೆಯಾಗಿದೆ.

ಲೋಕಾ ಬಲೆಗೆ ಬಿದ್ದ ಡಾ. ಸವಿತಾ
ಹೌದು, Tumakuru ಜಿಲ್ಲಾಸ್ಪತ್ರೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿದ್ದು, ಭ್ರಷ್ಟ ವೈದ್ಯರಿಗೆ ನಡುಕ ಹುಟ್ಟಿಸುವ ಕೆಲಸ ಮಾಡಿದ್ದಾರೆ. ಲೋಕಾಯುಕ್ತರ ದಾಳಿ ವೇಳೆ ತುಮಕೂರು ಜಿಲ್ಲಾಸ್ಪತ್ರೆಯ ನೇತ್ರಾ ಚಿಕಿತ್ಸಕಿ ಹಾಗೂ ಮತ್ತೋರ್ವ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ತುಮಕೂರು ಜಿಲ್ಲಾಸ್ಪತ್ರೆಯ ನೇತ್ರಾ ಚಿಕಿತ್ಸಾಕಿ ಡಾ. ಸವಿತಾ ಅವರು ಕಣ್ಣಿಗೆ ಲೆನ್ಸಾ ಹಾಕಲು 6 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ರೋಗಿಯ ಸಂಬಂಧಿಕರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ದೂರು ನೀಡಿದ ಬೆನ್ನಲ್ಲೇ ರೇಡ್ ಮಾಡಿ ಲಂಚ ಪಡೆಯುತ್ತಿದ್ದ ಕಣ್ಣಿನ ಚಿಕಿತ್ಸಕಿ ಹಾಗೂ ಸಿಬ್ಬಂದಿ ಲೋಕಾ ಬಲೆಗೆ ಬಿದ್ದಿದ್ದಾರೆ.
READ THIS : Nelamangala|ಜಾಲಿ ರೈಡ್ಗೆ ಹೋಯ್ತು ಇಬ್ಬರು ಯುವಕರ ಜೀವ!

6 ಸಾವಿರಕ್ಕೆ ಡಿಮ್ಯಾಂಡ್
ತುಮಕೂರು ನಗರದ ಉಪ್ಪಾರಹಳ್ಳಿಯ ನಿವಾಸಿಯಾಗಿರುವ ಅವಿನಾಶ್ ಎಂಬುವವರು ತಮ್ಮ ತಾಯಿಗೆ ಕಣ್ಣಿನ ಲೆನ್ಸ್ ಹಾಕಿಸಲು ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಆದ್ರೆ ಅವಿನಾಶ್ ಅವರ ತಾಯಿಯ ಕಣ್ಣಿಗೆ ಲೆನ್ಸ್ ಹಾಕಿಸಲು ಕೆಲ ದಿನಗಳ ಹಿಂದೆ ಸುಮಾರು 6 ಸಾವಿರ ರೂಪಾಯಿಗೆ ನೇತ್ರ ಚಿಕಿತ್ಸಕಿಯಾಗಿರುವ ಡಾ.ಸವಿತಾ 6 ಸಾವಿರ ರೂಪಾಯಿಗೆ ಡಿಮ್ಯಾಂಡ್ ಇಟ್ಟಿದ್ದರು.
ಹೀಗಾಗಿ ಈ ಬಗ್ಗೆ ಅವಿನಾಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ರು. ಇನ್ನು ಇಂದು ಮಧ್ಯಾಹ್ನ ಜಿಲ್ಲಾಸ್ಪತ್ರೆಯ ಸಿಬ್ಬಂದಿಯಾಗಿರುವ ಮನೋಜ್ ಎಂಬುವವರಿಂದ 6 ಸಾವಿರ ರೂಪಾಯಿ ಲಂಚದ ಹಣವನ್ನು ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಡಿವೈಎಸ್ ಪಿ ಮಂಜುನಾಥ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ರೆಡ್ ಹ್ಯಾಂಡ್ ಆಗಿ ಡಾ. ಸವಿತಾ ಹಾಗೂ ಸಿಬ್ಬಂದಿ ಮನೋಜ್ ಸಿಕ್ಕಿಬಿದ್ದಿದ್ದಾರೆ.

ತನಿಖೆ ಪ್ರಾರಂಭ
ಇನ್ನು ಜಿಲ್ಲಾಸ್ಪತ್ರೆಯ ಡಾಕ್ಟರ್ ಸವಿತಾ ಹಾಗೂ ಸಿಬ್ಬಂದಿ ಮನೋಜ್ನನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು, ತನಿಖೆ ಮುಂದುವರೆಸಿದ್ದಾರೆ.

MUST WATCH : ಮಹಿಳಾ ದಿನದಂದೇ ಘೋರ ದುರಂತ..! – ಪ್ರೀತಿಸಿ ಮದುವೆ ಆದವನೇ ಹ* ಮಾಡಿದ್ನಾ?

