Dina Bhavishya : ಇಂದು ಪ್ರೀತಿ ಯೋಗದ ಪ್ರಭಾವವು ಮೇಷದಿಂದ ಮೀನ ರಾಶಿಯವರ ಮೇಲೆ ಹೇಗಿರಲಿದೆ..?

Dina Bhavishya : 2026 ಫೆಬ್ರವರಿ 26 ರ ಗುರುವಾರವಾದ ಇಂದು, ಪ್ರೀತಿ ಯೋಗದ ಪ್ರಭಾವ ಮತ್ತು ಚಂದ್ರನ ಸ್ಥಾನ ಬದಲಾವಣೆಯಿಂದ ನಿಮ್ಮ ದಿನವು ಹೇಗಿರಲಿದೆ..? ಯಾವ ರಾಶಿಗೆ ಅದೃಷ್ಟ ಕೈಹಿಡಿಯಲಿದೆ…? ಯಾವ ರಾಶಿಯವರಿಗೆ ಅಪಾರ ಸಂಪತ್ತು ಲಭಿಸಲಿದೆ..? ಇಂದು 12 ರಾಶಿಗಳ ಫಲಾಫಲ ಹೀಗಿದೆ..
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಮಹತ್ವಾಕಾಂಕ್ಷೆಗಳು ಸಾಕಾರವಾಗುವ ಶುಭ ದಿನವಾಗಿರಬಹುದು. ಪ್ರಯತ್ನವನ್ನು ಮುಂದುವರಿಸಿದರೆ ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಅವಕಾಶಗಳು ದೊರೆಯುತ್ತವೆ.
ಬಹುಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ಪ್ರೀತಿ ಯೋಗದ ಪರಿಣಾಮದಿಂದ ಅದೃಷ್ಟ ಸಹಕಾರಿಯಾಗಿದ್ದು, ಆರ್ಥಿಕ ಒತ್ತಡದಿಂದ ನಿರಾಳತೆ ದೊರೆಯಬಹುದು. ಪ್ರಯಾಣ ಯೋಗವೂ ಕಾಣಿಸಿಕೊಳ್ಳಬಹುದು.
ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ಮನೆಯಲ್ಲಿ ಶುಭ ಕಾರ್ಯದ ಕುರಿತು ಚರ್ಚೆಗಳು ನಡೆಯುವ ಸಾಧ್ಯತೆ ಇದೆ. ಜೀವನದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ವಸ್ತುಗಳನ್ನೇ ಖರೀದಿಸುವುದು ಉತ್ತಮ. ಪ್ರೀತಿ ಯೋಗದ ಶುಭ ಪರಿಣಾಮದಿಂದ ಸಾಯಂಕಾಲದ ವೇಳೆಗೆ ವಿಶೇಷ ವ್ಯಕ್ತಿಯೊಬ್ಬರ ಆಗಮನದಿಂದ ಸಂತೋಷದ ವಾತಾವರಣ ಮೂಡಬಹುದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇಂದು ಚಂದ್ರನ ಸಂಚಾರದ ಪರಿಣಾಮದಿಂದ ಪ್ರಗತಿಗೆ ಉತ್ತಮ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ನಿಮ್ಮ ಸಾಧನೆ ಎಲ್ಲರನ್ನೂ ಆಶ್ಚರ್ಯಗೊಳಿಸಬಹುದು.
ಆದರೆ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಲು ಪ್ರಮುಖ ಕೆಲಸಗಳ ಮೇಲೆ ಹೆಚ್ಚು ಗಮನ ಹರಿಸಿ. ಅನಾವಶ್ಯಕ ಕಾರ್ಯಗಳಿಂದ ದೂರವಿದ್ದು ನಿಮ್ಮ ಗುರಿಗಳತ್ತ ಗಮನ ಕೇಂದ್ರೀಕರಿಸುವುದು ಉತ್ತಮ.
ಕಟಕ ರಾಶಿ
ಕಟಕ ರಾಶಿಯವರಿಗೆ ಇಂದು ಸಹೋದರ-ಸಹೋದರಿಯರ ವಿಚಾರದಲ್ಲಿ ಹೆಚ್ಚು ಚಿಂತೆಯಾಗಬಹುದು. ಕುಟುಂಬದ ಯೋಗಕ್ಷೇಮಕ್ಕಾಗಿ ನೀವು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವಿರಿ.
ಮನೆಯ ಕೆಲವು ವಿಚಾರಗಳು ಮನಸ್ಸಿಗೆ ಒತ್ತಡ ತರಬಹುದು. ಎಲ್ಲರ ಒಪ್ಪಿಗೆಯನ್ನು ಪಡೆದು ಸ್ಥಾನ ಬದಲಾವಣೆ ಅಥವಾ ಹೊಸ ನಿರ್ಧಾರಗಳ ಬಗ್ಗೆ ಯೋಚಿಸುವ ಸಾಧ್ಯತೆ ಇದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ವ್ಯಾಪಾರ-ವ್ಯವಹಾರಕ್ಕೆ ಸಂಬಂಧಿಸಿದ ಚಿಂತೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೆ ಅಸ್ಥಿರತೆ ಕಾಡಬಹುದು.
ಕೆಲಸ ಮತ್ತು ವ್ಯಾಪಾರದಲ್ಲಿ ಸುಧಾರಣೆ ಬೇಕಾದರೆ ಅಲಸ್ಯವನ್ನು ದೂರವಿಟ್ಟು ಪರಿಶ್ರಮದಿಂದ ಕಾರ್ಯನಿರ್ವಹಿಸುವುದು ಉತ್ತಮ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಇಂದು ಬುಧನು ಐದನೇ ಮನೆಯಲ್ಲಿ ಮಂಗಳನೊಂದಿಗೆ ಸಂಯೋಗಗೊಳ್ಳುವ ಪರಿಣಾಮ ಹೆಚ್ಚು ಚಟುವಟಿಕೆ ಮತ್ತು ಓಡಾಟ ಹೆಚ್ಚಾಗಬಹುದು. ಆದರೆ ಇದರ ಫಲ ಸಕಾರಾತ್ಮಕವಾಗಿದ್ದು ಲಾಭದ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಕೆಲಸಗಳನ್ನು ಉತ್ಸಾಹದಿಂದ ಪೂರ್ಣಗೊಳಿಸಿದರೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ವಿಶೇಷ ಕಾರಣವಿಲ್ಲದೇ ಚಿಂತೆ ಹೆಚ್ಚಾಗುವ ಸಾಧ್ಯತೆ ಇದೆ. ಶುಕ್ರನ ಚಲನೆಯ ಪರಿಣಾಮ ಕೆಲ ಅಡಚಣೆಗಳು ಎದುರಾಗಬಹುದು ಹಾಗೂ ಸಾಮಾಜಿಕ ಮತ್ತು ವ್ಯಾಪಾರ ಕ್ಷೇತ್ರದಲ್ಲೂ ವಿರೋಧಿಗಳಿಂದ ಸಮಸ್ಯೆಗಳು ಉಂಟಾಗಬಹುದು.
ಆದರೆ ನಿಮ್ಮ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಅವನ್ನು ಜಯಿಸಬಹುದು. ನಕಾರಾತ್ಮಕ ಆಲೋಚನೆಗಳನ್ನು ದೂರವಿಟ್ಟು ಆತ್ಮವಿಶ್ವಾಸದಿಂದ ಮುಂದುವರಿಯುವುದು ಉತ್ತಮ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಇಂದು ಹಠಾತ್ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಕೆಲಸ ಮತ್ತು ವ್ಯಾಪಾರದಲ್ಲಿ ಹೆಚ್ಚಿನ ಒತ್ತಡವಿಲ್ಲದೆ ಯೋಜನೆಗಳಲ್ಲಿ ಯಶಸ್ಸು ದೊರೆಯಬಹುದು.
ಹಳೆಯ ವಾದ-ವಿವಾದಗಳಿಂದ ಮುಕ್ತಿಯಾಗುವ ಸೂಚನೆಗಳಿದ್ದು, ಅಧಿಕಾರಿಗಳ ಬೆಂಬಲವೂ ಹೆಚ್ಚಾಗಬಹುದು. ನಕಾರಾತ್ಮಕ ಆಲೋಚನೆಗಳನ್ನು ದೂರವಿಟ್ಟರೆ ಅನುಕೂಲಕರ ಪರಿಸ್ಥಿತಿ ನಿಮ್ಮ ಪರವಾಗಿರುತ್ತದೆ.
ಧನು ರಾಶಿ
ಧನು ರಾಶಿಯವರಿಗೆ ಇಂದು ಪ್ರೀತಿ ಯೋಗದ ಪರಿಣಾಮ ಹೊಸ ಸಂಪರ್ಕಗಳಿಂದ ಲಾಭ ದೊರೆಯುವ ಸಾಧ್ಯತೆ ಇದೆ. ಹಳೆಯ ವಿಚಾರಗಳಿಂದ ಪ್ರಯೋಜನ ಸಿಗಬಹುದು ಹಾಗೂ ಕಳೆದುಹೋದ ಹಣ ವಾಪಸ್ಸಾಗುವ ಸೂಚನೆಗಳಿವೆ.
ದಿನನಿತ್ಯದ ಕೆಲಸಗಳನ್ನು ಸಮರ್ಪಕವಾಗಿ ನಿಭಾಯಿಸಿದರೆ ವ್ಯಾಪಾರದಲ್ಲಿ ಪ್ರಗತಿ ಕಂಡು ಆತ್ಮವಿಶ್ವಾಸ ಹೆಚ್ಚಾಗಬಹುದು. ರಾತ್ರಿ ವೇಳೆ ಶುಭ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವೂ ದೊರೆಯಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಇಂದು ಚಂದ್ರನ ಸಂಚಾರದ ಪರಿಣಾಮ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಸಿಗಬಹುದು. ಇದರಿಂದ ಗೌರವ ಮತ್ತು ಖ್ಯಾತಿ ಹೆಚ್ಚಾಗುವ ಸಾಧ್ಯತೆ ಇದೆ.
ವ್ಯಾಪಾರದಲ್ಲಿ ಲಾಭ, ದಿನಪೂರ್ತಿ ಶುಭ ಸುದ್ದಿಗಳು ಹಾಗೂ ಸ್ನೇಹಿತರೊಂದಿಗೆ ಸಂತೋಷದ ಕ್ಷಣಗಳನ್ನು ಅನುಭವಿಸುವ ಯೋಗವಿದೆ. ಅನಾವಶ್ಯಕ ವಿವಾದಗಳಿಂದ ದೂರವಿದ್ದು ಧಾರ್ಮಿಕ ಸ್ಥಳಕ್ಕೆ ಪ್ರಯಾಣಿಸುವ ಅವಕಾಶವೂ ದೊರೆಯಬಹುದು. ಕುಟುಂಬದವರ ಬೆಂಬಲ ಸಹ ನಿಮಗೆ ಸಿಗಲಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಇಂದು ಪ್ರೀತಿ ಯೋಗದ ಶುಭ ಪರಿಣಾಮದಿಂದ ಉನ್ನತಾಧಿಕಾರಿಗಳಿಂದ ಲಾಭದ ಅವಕಾಶಗಳು ದೊರೆಯಬಹುದು. ಹೊಸ ವ್ಯಾಪಾರ ಆರಂಭಿಸುವ ನಿರ್ಧಾರಕ್ಕೂ ಇದು ಅನುಕೂಲಕರ ಸಮಯವಾಗಿರಬಹುದು.
ಆಧ್ಯಾತ್ಮ ಮತ್ತು ಧಾರ್ಮಿಕ ವಿಚಾರಗಳತ್ತ ಆಸಕ್ತಿ ಹೆಚ್ಚಾಗಿ, ಪ್ರಯಾಣ ಅಥವಾ ಮಂಗಳ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಸಿಗಬಹುದು. ಈ ಸಮಯವನ್ನು ಸದುಪಯೋಗಪಡಿಸಿಕೊಂಡರೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಇಂದು ಗುರುಗ್ರಹದ ಅನುಗ್ರಹದಿಂದ ಪ್ರಗತಿಗೆ ಉತ್ತಮ ಅವಕಾಶಗಳು ದೊರೆಯಬಹುದು. ಓದು ಹಾಗೂ ಆಧ್ಯಾತ್ಮದತ್ತ ಆಸಕ್ತಿ ಹೆಚ್ಚಾಗಿ, ಹಳೆಯ ವಿವಾದಗಳಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ.
ಶತ್ರುಗಳಿಂದ ದೂರವಿದ್ದು ಹಣವನ್ನು ಯಾರಿಗೂ ಸಾಲವಾಗಿ ನೀಡದಿರುವುದು ಉತ್ತಮ. ತಂದೆ-ತಾಯಿ ಹಾಗೂ ಗುರುಗಳ ಸೇವೆಗೆ ಮಹತ್ವ ನೀಡಿದರೆ ಶುಭ ಫಲಗಳು ದೊರೆಯಬಹುದು.

