Bengaluru : ಪಿಂಕ್ ಸಿಟಿಯಾಯ್ತು ಗಾರ್ಡನ್ ಸಿಟಿ!

Bengaluru : ಉದ್ಯಾನನಗರಿ ತುಂಬೆಲ್ಲಾ ಹಳದಿ ಹಾಗೂ ತಿಳಿ ಗುಲಾಬಿಬಣ್ಣದ ಹೂಗಳು ಅರಳಿ ನಿಂತಿವೆ. ಈ ಕಲರ್ ಪುಲ್ ಹೂವಿನಿಂದ ಬೆಂಗಳೂರಿನ ಬ್ಯೂಟಿ ದುಪ್ಪಟ್ಟಾಗಿದ್ದು, ಕಣ್ಣಿಗೆ ಹಬ್ಬದಂತಿದೆ.

ಉದ್ಯಾನನಗರಿಯ ಸೌಂದರ್ಯಕ್ಕೆ ಮತ್ತಷ್ಟು ಮೆರಗು
ಸದ್ಯ ಸಿಲಿಕಾನ್ ಸಿಟಿಯಲ್ಲಿ ಹೂಗಳದ್ದೇ ದರ್ಬಾರ್, ಈ ಹೂಗಳನ್ನ ನೋಡುತ್ತಿದ್ರೆ ಯಾರ ಮನಸ್ಸು ತಾನೇ ಕಳೆದು ಹೋಗಲ್ಲ ಹೇಳಿ. ಈ ರೀತಿಯ ಕಲರ್ ಪುಲ್ ಹೂಗಳಿಂದಲೇ ಉದ್ಯಾನನಗರಿಯ ಸೌಂದರ್ಯಕ್ಕೆ ಮತ್ತಷ್ಟು ಮೆರಗು ಬಂದಿದೆ. ಇನ್ನು ವಿಶೇಷತೆ ಅಂದ್ರೆ ಮರದಲ್ಲಿ ಎಲೆಗಳು ವಿರಳವಾಗಿದ್ದು, ಸಂಪೂರ್ಣವಾಗಿ ಹೂಗಳಿಂದ ತುಂಬಿರುತ್ತವೆ.
ಇದನ್ನು ಓದಿ : ಮದುವೆ ಮನೆಯಲ್ಲೇ ಫೋಟೋಗ್ರಾಫರ್ ಕುಸಿದು ಬಿದ್ದು ಸಾವು!

ಕಲರ್ ಫುಲ್ ಹೂಗಳು – Bengaluru
ಬೆಂಗಳೂರಿನ ರಸ್ತೆಗಳಲ್ಲಿ, ಕಬ್ಬನ್ ಪಾರ್ಕ್, ಲಾಲ್ಬಾಗ್ ಸೇರಿದಂತೆ ಅನೇಕ ಪಾರ್ಕ್ಗಳಲ್ಲಿ ಈ ಚಂದದ ಹೂಗಳನ್ನ ನೋಡಬಹುದಾಗಿದೆ. ಅಲಂಕಾರಿಕ ದೃಷ್ಟಿಯಿಂದ ಅನೇಕ ಕಡೆ ಗಿಡ ಮರಗಳನ್ನ ಬೆಳೆಸಲಾಗಿದ್ದು, ಜನರು ಕೂಡ ಕಲರ್ ಫುಲ್ ಹೂಗಳ ನಡುವೆ ಫೋಟೋ ಕ್ಲಿಕಿಸಿಕೊಂಡು ಖುಷಿ ಪಡ್ತಿದ್ದಾರೆ.

ಇದನ್ನು ನೋಡಿ : ಮಾತೃ ಹೃದಯಿ ಸಿದ್ದಗಂಗಾ ಶ್ರೀಗಳು – ಮುಂದೆ ನಿಂತು ಆಟ ಆಡಿಸಿ ಖುಷಿಪಟ್ಟ ಸ್ವಾಮೀಜಿ




