ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ನಟ Rishab Shetty ಮತ್ತು ಪ್ರಗತಿ ಶೆಟ್ಟಿ ದಂಪತಿ ಭೇಟಿ ನೀಡಿ ಹನುಮನಿಗೆ ವಿಶೇಷ ಪೂಜೆ ಸಲ್ಲಿಸಿದರು

ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಅಂಜನಾದ್ರಿ ಬೆಟ್ಟದಲ್ಲಿ ಇಂದು ವಿಶೇಷ ಧಾರ್ಮಿಕ ಹಾಗೂ ಸಿನಿ ಕಾರ್ಯಕ್ರಮ ನಡೆಯಿತು. ನಟ Rishab Shetty ಹಾಗೂ ಅವರ ಪತ್ನಿ ಪ್ರಗತಿ ಶೆಟ್ಟಿ ದಂಪತಿ ಭೇಟಿ ನೀಡಿ ಹನುಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಹನುಮ ಜನ್ಮಸ್ಥಳದಲ್ಲಿ ‘ಜೈ ಹನುಮಾನ್’ ಸಿನಿಮಾಗೆ ಮುಹೂರ್ತ
ಭಕ್ತರ ಆಕರ್ಷಣೆಯ ಕೇಂದ್ರವಾಗಿರುವ ಅಂಜನಾದ್ರಿ ಬೆಟ್ಟದಲ್ಲಿ ತೆಲುಗು ಸಿನಿಮಾ ‘ಜೈ ಹನುಮಾನ್’ ಚಿತ್ರದ ಮುಹೂರ್ತ ನೆರವೇರಿತು. ಬೆಳಗ್ಗೆ 11:50ಕ್ಕೆ ನಡೆದ ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು ಭಾಗವಹಿಸಿದರು.
ಧಾರ್ಮಿಕ ಮಹತ್ವ ಹೊಂದಿರುವ ಈ ಸ್ಥಳದಲ್ಲೇ ಸಿನಿಮಾ ಆರಂಭಿಸಿರುವುದು ವಿಶೇಷ ಗಮನ ಸೆಳೆದಿದೆ.
ಇದನ್ನು ಓದಿ : ಮಾಜಿ ಶಾಸಕ Suresh Gowdaರ ಕಾರು ಅಪಘಾತ – ಮದುವೆಗೆ ತೆರಳುತ್ತಿದ್ದಾಗ ಪಲ್ಟಿಯಾದ ಕಾರು
ಆಂಜನೇಯನ ಪಾತ್ರದಲ್ಲಿ ರಿಷಬ್ ಶೆಟ್ಟಿ
ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ಆಂಜನೇಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಪತ್ನಿ ಪ್ರಗತಿ ಶೆಟ್ಟಿ ಅವರೊಂದಿಗೆ ಬೆಟ್ಟಕ್ಕೆ ಆಗಮಿಸಿದ್ದರು.

‘ಜೈ ಹನುಮಾನ್’ ಸಿನಿಮಾವನ್ನು ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಪ್ರಶಾಂತ್ ವರ್ಮ ನಿರ್ದೇಶಿಸುತ್ತಿದ್ದಾರೆ. ಪೌರಾಣಿಕ ಹಿನ್ನೆಲೆಯ ಈ ಸಿನಿಮಾ ಈಗಾಗಲೇ ಸಿನಿಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.
ಭಕ್ತಿಭಾವದಲ್ಲಿ ವಿಶೇಷ ಪೂಜೆ
ಮುಹೂರ್ತಕ್ಕೂ ಮುನ್ನ ನಟ ದಂಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿದರು. ಸ್ಥಳೀಯರು ಹಾಗೂ ಅಭಿಮಾನಿಗಳು ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಇದನ್ನು ನೋಡಿ : POLICE ಕಾಟಕ್ಕೆ ವಿಧವೆ ಸೂಸೈ ಅಪ್ಪ ಅಮ್ಮನನ್ನು ಕಳೆದು ಕೊಂಡ ಮಕ್ಕಳು




