KSRTC ಪ್ರಯಾಣಿಕರಿಗೆ ಮತ್ತೆ ಶಾಕ್ – ಹೊಸ ಲಗೇಜ್ ರೂಲ್ಸ್ ಜಾರಿ ಮಾಡಿದ ನಿಗಮ.

ಕೆಎಸ್ಆರ್ಟಿಸಿ ನಿಗಮವೂ ಹೊಸ ಲಗೇಜು ನಿಯಮವನ್ನು ಜಾರಿ ಮಾಡಿದ್ದು, ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಬಿಗ್ ಶಾಕ್ ನೀಡಿದೆ. ಕೆಎಸ್ಆರ್ಟಿಸಿ ಬಸ್ನಲ್ಲಿ ಟಯರ್, ಟ್ಯೂಬ್, ಖಾಲಿ ಕಂಟೈನರ್, ಸಾಕು ಪ್ರಾಣಿ-ಪಕ್ಷಿಗಳು, ಫ್ರಿಡ್ಜ್, ವಾಷಿಂಗ್ ಮಿಷನ್ ಸೇರಿ ಅನೇಕ ವಸ್ತುಗಳನ್ನು ಬಸ್ನಲ್ಲಿ ಸಾಗಾಟ ಮಾಡಲು ಅನುಮತಿ ನೀಡಿದ ಬೆನ್ನಲ್ಲೇ ಲಗೇಜ್ ದರವನ್ನು ಏರಿಕೆ ಮಾಡಿದ್ದು, ಪ್ರಯಾಣಿಕರಿಗೆ ಶಾಕ್ ಆಗಿದೆ.
ಪರಿಷ್ಕೃತ ದರ ಜಾರಿ
KSRTC ಬಸ್ಗಳಲ್ಲಿ ಪ್ರಯಾಣಿಕ ರಹಿತವಾಗಿ ಸಾಗಿಸುವ ಲಗೇಜ್ ದರವನ್ನು ದಿಡೀರ್ ಏರಿಕೆ ಮಾಡಿದ್ದು, ಪರಿಷ್ಕೃತ ದರ ಇಂದಿನಿಂದ ಜಾರಿಗೆ ಬರಲಿದೆ.
ಪ್ರಯಾಣಿಕ ರಹಿತ ಸಾಗಿಸುವ ಲಗೇಜ್ಗೆ ನೂತನ ಪರಿಷ್ಕೃತ ದರ ಜಾರಿ ಆಗಲಿದೆ ಎಂದು ಕೆಎಸ್ಆರ್ಟಿಸಿ ಎಂಡಿ ಅಕ್ರಂ ಪಾಷಾ ಆದೇಶ ಹೊರಡಿಸಿದ್ದಾರೆ.

ಇದನ್ನು ಓದಿ : ಡ್ಯೂಟಿ ಟೈಂನಲ್ಲೇ ಬೆಸ್ಕಾಂ ಅಧಿಕಾರಿಗಳ ಮಸ್ತ್ ಎಣ್ಣೆ ಪಾರ್ಟಿ..!
ಎಷ್ಟೆಷ್ಟು ಲಗೇಜು ದರ ಏರಿಕೆ..?
1 ರಿಂದ 5 ಸ್ಟೇಜ್ ವರೆಗೆ 6 ರೂಪಾಯಿ
6 ರಿಂದ 12 ಸ್ಟೇಜ್ ವರೆಗೆ 12 ರೂಪಾಯಿ
156 ರಿಂದ 160 ಸ್ಟೇಜ್ ವರೆಗೆ 145 ರೂಪಾಯಿ
ಪ್ರಯಾಣಿಕ ರಹಿತ ಲಗೇಜ್ ಸಾಗಾಟ ಮಾಡಲು ಒಂದರಿಂದ 5 ಸ್ಟೇಜ್ವರೆಗೆ 5 ರೂಪಾಯಿಯಿಂದ ಆರು ರೂಪಾಯಿಗೆ ಏರಿಕೆ ಮಾಡಿದ್ರೆ, 6 ರಿಂದ 12 ಸ್ಟೇಜ್ ವರೆಗೆ10 ರುಪಾಯಿ ಯಿಂದ 12 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಅಲ್ದೇ 156 ರಿಂದ 160 ಸ್ಟೇಜ್ ವರೆಗೆ ಈ ಹಿಂದೆ 123 ರೂಪಾಯಿ ಇದ್ದ ದರವನ್ನು 145 ರೂಪಾಯಿಗೆ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

ಅಕ್ರಂ ಪಾಷಾ ಆದೇಶ
ಡಿಸೇಲ್, ಸಿಬ್ಬಂದಿ ಹಾಗೂ ಇತರೆ ಖರ್ಚುಗಳು ಹೆಚ್ಚಾದ ಹಿನ್ನೆಲೆ ಲಗೇಜ್ ದರವನ್ನು ಏರಿಕೆ ಮಾಡಲಾಗಿದೆ. ಈ ಮೊದಲು 2021ರಲ್ಲಿ ಲಗೇಜ್ ದರ ಏರಿಕೆಯಾಗಿತ್ತು. ಅದಾದ ಬಳಿಕ ಟಿಕೆಟ್ ದರ ಪರಿಷ್ಕ್ರರಣೆ ಆದಾಗ ಲಗೇಜ್ ದರ ಏರಿಕೆಯಾಗಿರಲಿಲ್ಲ.
ಹೀಗಾಗಿ ಲಗೇಜ್ ಸಾಗಿರುವ ದರ ಹೆಚ್ಚಳ ಮಾಡಲಾಗಿದೆ ಎಂದು ಕೆಎಸ್ಆರ್ಟಿಸಿ ಎಂಡಿ ಅಕ್ರಂ ಪಾಷಾ ಆದೇಶದಲ್ಲಿ ತಿಳಿಸಿದ್ದಾರೆ. ಇನ್ನು ಈ ಕೆಎಸ್ಆರ್ಟಿಸಿ ಹೊಸ ಆದೇಶದಿಂದ ಪ್ರಯಾಣಿಕರಲ್ಲಿ ಆಕ್ರೋಶ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನು ನೋಡಿ : NITTUR ಬಸ್ ನಿಲ್ದಾಣದಲ್ಲಿ ವ್ಯಕ್ತಿಯ ಶ* ಪತ್ತೆ ಬೆಳ್ಳಂ ಬೆಳ್ಳಗೆ ಬೆಚ್ಚಿಬಿದ್ದ ಪ್ರಯಾಣಿಕರು




