Friday the 13th ಇತಿಹಾಸ, ಧಾರ್ಮಿಕ ನಂಬಿಕೆಗಳು, ಅಂಧಶ್ರದ್ಧೆಗಳು ಮತ್ತು ವೈಜ್ಞಾನಿಕ ಸತ್ಯಗಳ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Friday the 13th : ಫೆಬ್ರವರಿ 13 ಶುಕ್ರವಾರಕ್ಕೆ ಬಂದಾಗ ಅನೇಕ ಪಾಶ್ಚಾತ್ಯ ದೇಶಗಳಲ್ಲಿ ಇದನ್ನು ಅಶುಭ ದಿನವೆಂದು ಪರಿಗಣಿಸಲಾಗುತ್ತದೆ. ಕೆಲವು ಜನರು ಈ ದಿನ ಪ್ರಯಾಣವನ್ನೇ ಮುಂದೂಡುತ್ತಾರೆ ಅಥವಾ ಹೊಸ ಕೆಲಸಗಳನ್ನು ಆರಂಭಿಸಲು ಹಿಂಜರಿಯುತ್ತಾರೆ. ಆದರೆ ಈ ನಂಬಿಕೆ ಹೇಗೆ ಹುಟ್ಟಿತು ಎಂಬುದು ತಿಳಿದುಕೊಳ್ಳುವುದು ಆಸಕ್ತಿದಾಯಕ.

ಧಾರ್ಮಿಕ ನಂಬಿಕೆಗಳ ಪ್ರಭಾವ
ಕ್ರೈಸ್ತ ಪರಂಪರೆಯ ಪ್ರಕಾರ ಯೇಸು ಕ್ರಿಸ್ತ ಅವರ ಜೀವನಕ್ಕೆ ಸಂಬಂಧಿಸಿದ ಘಟನೆಗಳು ಈ ನಂಬಿಕೆಗೆ ಕಾರಣವೆಂದು ಹೇಳಲಾಗುತ್ತದೆ. ಬೈಬಲ್ ಕಥೆಗಳ ಪ್ರಕಾರ, ಯೇಸು ಕ್ರಿಸ್ತನ ಅಂತಿಮ ಭೋಜನದಲ್ಲಿ ಒಟ್ಟು 13 ಮಂದಿ ಇದ್ದರು ಮತ್ತು ಬಳಿಕ ನಡೆದ ದುರಂತ ಶುಕ್ರವಾರದಂದು ಸಂಭವಿಸಿದೆ ಎಂಬ ನಂಬಿಕೆ ಇದೆ. ಈ ಕಾರಣದಿಂದ 13 ಮತ್ತು ಶುಕ್ರವಾರದ ಸಂಯೋಗವನ್ನು ಅಶುಭವಾಗಿ ನೋಡಲು ಆರಂಭಿಸಿದರು.
ದನ್ನೂ ಓದಿ : ಬೆಳ್ಳಂಬೆಳಗ್ಗೆ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ..!

1307ರ ಅಕ್ಟೋಬರ್ 13ರಂದು ಶುಕ್ರವಾರದಂದು Knights Templar ಸಂಘದ ಸದಸ್ಯರನ್ನು ಫ್ರಾನ್ಸ್ ರಾಜನ ಆದೇಶದಂತೆ ಬಂಧಿಸಿ ಶಿಕ್ಷಿಸಲಾಯಿತು. ಈ ಘಟನೆಯು “Friday the 13th” ಕುರಿತು ಜನರಲ್ಲಿ ಭಯವನ್ನು ಮತ್ತಷ್ಟು ಹೆಚ್ಚಿಸಿತು.
ಇಂದಿಗೂ ಕೆಲವು ಕಟ್ಟಡಗಳಲ್ಲಿ 13ನೇ ಮಹಡಿ ಕಾಣಿಸದು. ಕೆಲವು ಹೋಟೆಲ್ಗಳು, ವಿಮಾನಗಳು ಮತ್ತು ಆಸ್ಪತ್ರೆಗಳು 13 ಸಂಖ್ಯೆಯನ್ನು ತಪ್ಪಿಸುವುದು ಸಾಮಾನ್ಯ. ಈ ಭಯವನ್ನು “Triskaidekaphobia” ಎಂದು ಕರೆಯಲಾಗುತ್ತದೆ. ಹಲವರು ಆ ದಿನ ಹೊಸ ಕಾರ್ಯಗಳನ್ನು ಆರಂಭಿಸಲು ಹಿಂದೇಟು ಹಾಕುತ್ತಾರೆ.
ವೈಜ್ಞಾನಿಕ ದೃಷ್ಟಿಕೋನ
ವಿಜ್ಞಾನ ಮತ್ತು ಗಣಿತದ ದೃಷ್ಟಿಯಿಂದ ನೋಡಿದರೆ 13 ಕೇವಲ ಒಂದು ಸಂಖ್ಯೆ ಮಾತ್ರ. 12 ಅನ್ನು ಪೂರ್ಣತೆಯ ಸಂಕೇತವೆಂದು ನೋಡಲಾಗುವುದರಿಂದ ಅದರ ನಂತರ ಬರುವ 13 ಅಸಮತೋಲನ ತರುತ್ತದೆ ಎಂಬ ಕಲ್ಪನೆ ಹುಟ್ಟಿದೆ. ಆದರೆ “Friday the 13th” ಅಶುಭ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ.




