Vijayapura : ವಿಜಯಪುರದಲ್ಲಿ ಬೈಕ್ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ದಾನ. ಝೀರೋ ಟ್ರಾಫಿಕ್ನಲ್ಲಿ ಕಿಡ್ನಿ ಕಲಬುರಗಿಗೆ ರವಾನೆ.

Vijayapura ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಬೈಕ್ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ದಾನ ಮಾಡಲಾಗಿದೆ. ಕುಟುಂಬಸ್ಥರು ತೆಗೆದುಕೊಂಡ ಮಾನವೀಯ ನಿರ್ಧಾರದಿಂದ ಎರಡು ಕಿಡ್ನಿಗಳು ರೋಗಿಗಳಿಗೆ ಅಳವಡಿಸಲಾಗಿ, ಹಲವು ಜೀವಗಳಿಗೆ ಹೊಸ ಆಶಾಭರವಸೆ ಮೂಡಿಸಿದೆ.
ಬಾಗಲಕೋಟ ಮೂಲದ ಬಲರಾಮ (30) ಫೆಬ್ರವರಿ 9ರಂದು ನಡೆದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ವಿಜಯಪುರ ನಗರದ ಬಿಎಲ್ಡಿಇ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಅಪಘಾತದಲ್ಲಿ ಹಿಂಬದಿ ಸವಾರ ಸಿದ್ದು ಸ್ಥಳದಲ್ಲೇ ಮೃತಪಟ್ಟಿದ್ದರು. ಚಿಕಿತ್ಸೆ ನಡುವೆಯೇ ವೈದ್ಯರು ಬಲರಾಮ ಅವರಿಗೆ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿದರು.
ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ..!
ಅಂಗಾಂಗ ದಾನ – ಜೀವ ಉಳಿಸಿದ ಮಹತ್ವದ ನಿರ್ಧಾರ
ಈ ಸಂದರ್ಭದಲ್ಲಿ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು. ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ತಡರಾತ್ರಿ ವೈದ್ಯರು ಅಂಗಾಂಗಗಳನ್ನು ಪಡೆದುಕೊಂಡರು. ಒಂದು ಕಿಡ್ನಿಯನ್ನು ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಕಲಬುರಗಿ ಆಸ್ಪತ್ರೆಗೆ ರವಾನಿಸಲಾಯಿತು; ಇನ್ನೊಂದು ಕಿಡ್ನಿಯನ್ನು ಬಿಎಲ್ಡಿಇ ಆಸ್ಪತ್ರೆಯಲ್ಲಿರುವ ರೋಗಿಗೆ ಯಶಸ್ವಿಯಾಗಿ ಅಳವಡಿಸಲಾಗಿದೆ.
ವೈದ್ಯರ ಮಾಹಿತಿ
ಇತರೆ ಅಂಗಾಂಗಗಳು ಹೊಂದಿಕೆಯಾಗದ ಕಾರಣ ಪಡೆಯಲಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದರೂ, ಈ ಅಂಗಾಂಗ ದಾನದಿಂದ ಇಬ್ಬರು ರೋಗಿಗಳಿಗೆ ಹೊಸ ಜೀವನ ಸಿಕ್ಕಿದ್ದು, ಸಮಾಜದಲ್ಲಿ ಮಾನವೀಯತೆಯ ಸಂದೇಶ ಮೂಡಿಸಿದೆ.
MUST WATCH : ಶಾಸಕ ಭೈರತಿ ಬಸವರಾಜ್ಗೆ ಬಂಧನ ಭೀತಿ ಜೈಲು ಪಾಲಾಗ್ತಾರಾ ಬಿಜೆಪಿ ಶಾಸಕ




