Chikkaballapura: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿನ್ನ ಹಾಗೂ ನಿಧಿ ನಿಕ್ಷೇಪಗಳ ಶೋಧ ಕಾರ್ಯ ತೀವ್ರಗೊಂಡಿದ್ದು, ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ಹೆಲಿಕಾಪ್ಟರ್ ಮೂಲಕ ವೈಮಾನಿಕ ಸಮೀಕ್ಷೆ ನಡೆಸಿದೆ.

Chikkaballapura : ಚಿನ್ನ ಹಾಗೂ ಇತರ ಖನಿಜ ನಿಕ್ಷೇಪಗಳ ಶೋಧ ಕಾರ್ಯ ಚಿಕ್ಕಬಳ್ಳಾಪುರದಲ್ಲಿ ಮತ್ತಷ್ಟು ತೀವ್ರಗೊಂಡಿದೆ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (ಜಿಎಸ್ಐ) ಹೆಲಿಕಾಪ್ಟರ್ ಮೂಲಕ ವೈಮಾನಿಕ ಸಮೀಕ್ಷೆ ನಡೆಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಸಮೀಪ ಹೆಲಿಕಾಪ್ಟರ್ ಮೂಲಕ GSI ವೈಮಾನಿಕ ಸಮೀಕ್ಷೆ ನಡೆಸಿದೆ.
ಕೆಜಿಎಫ್ ಚಿನ್ನದ ಗಣಿಗಾರಿಕೆ ಬೆಟ್ಟದ ಸಾಲಿನಲ್ಲಿರುವ ಈ ಪ್ರದೇಶದಲ್ಲಿ ಅಡಗಿರುವ ಚಿನ್ನದ ಲಭ್ಯತೆಯನ್ನು ಪತ್ತೆಹಚ್ಚುವ ಉದ್ದೇಶದಿಂದ ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ.
ಬಾಗೇಪಲ್ಲಿ–ಗುಡಿಬಂಡೆ ರೈತರ ಜಮೀನಿನಲ್ಲಿ ಚಿನ್ನದ ಕಣಗಳು
ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಬಾಗೇಪಲ್ಲಿ ಹಾಗೂ ಗುಡಿಬಂಡೆ ತಾಲೂಕಿನ ಕೆಲ ರೈತರ ಜಮೀನುಗಳಲ್ಲಿ ಚಿನ್ನದ ಕಣಗಳು ಪತ್ತೆಯಾಗಿರುವುದು ದೃಢಪಟ್ಟ ಹಿನ್ನೆಲೆ ಈ ಸಮೀಕ್ಷೆಗೆ ಹೆಚ್ಚಿನ ಮಹತ್ವ ದೊರೆತಿದೆ.

ಇದನ್ನೂ ಓದಿ : Congress ಯುವ ಮುಖಂಡನ ಮೇಲೆ ತಲ್ವಾರ್ನಿಂದ ದಾಳಿ..!
ಹೆಲಿಕಾಪ್ಟರ್ ಮೂಲಕ ಚಿನ್ನದ ನಿಕ್ಷೇಪ ಶೋಧ:
ಹೆಲಿಕಾಪ್ಟರ್ ಬಳಸಿ ನಡೆಸಲಾಗುತ್ತಿರುವ ವೈಮಾನಿಕ ಸಮೀಕ್ಷೆಯಿಂದ ಭೂಗರ್ಭದಲ್ಲಿ ಅಡಗಿರುವ ಚಿನ್ನ ಹಾಗೂ ಇತರ ಖನಿಜ ನಿಕ್ಷೇಪಗಳ ಕುರಿತು ನಿಖರ ಮಾಹಿತಿಯನ್ನು ಸಂಗ್ರಹಿಸುವ ನಿರೀಕ್ಷೆಯಿದೆ. ಈ ಸಮೀಕ್ಷೆ ಮುಂದಿನ ದಿನಗಳಲ್ಲಿ ಗಣಿಗಾರಿಕೆ ಚಟುವಟಿಕೆಗಳಿಗೆ ಪ್ರಮುಖ ಮಾರ್ಗದರ್ಶನವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬೆಳವಣಿಗೆಯಿಂದಾಗಿ ಐತಿಹಾಸಿಕ ಚಿನ್ನದ ಗಣಿಗಾರಿಕೆ ಪ್ರದೇಶವಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೊಸ ಚಿನ್ನದ ನಿಕ್ಷೇಪಗಳು ಪತ್ತೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

MUST WATCH : ಅರೆಬರೆ ORCHESTRAಗಳು ಹುಟ್ಟಿಕೊಳ್ಳಲು ಇವರೇ ಕಾರಣನಾ..?




