Gold Rate : ಕಳೆದ ಕೆಲ ತಿಂಗಳಿನಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದ ಬೆಳ್ಳಿ ದರ ಇಂದು ಕೂಡ ತನ್ನ ಕುಸಿತವನ್ನು ಮುಂದುವರಿಸಿದೆ. ಇಂದು ಪ್ರತಿ ಕೆ.ಜಿ.ಬೆಳ್ಳಿ ದರ 2.33 ಲಕ್ಷ ರೂಪಾಯಿಗೆ ಕುಸಿದಿದೆ. ಇಂದು ಶೇ.12 ರಷ್ಟು ಕುಸಿದಿದೆ. ಮತ್ತಷ್ಟು ಕುಸಿಯುವ ನಿರೀಕ್ಷೆ ಇದೆ.

Gold Rate : ಕಳೆದ ವಾರದಿಂದ ಪ್ರಾರಂಭವಾದ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಕುಸಿತ ಸೋಮವಾರವೂ ಮುಂದುವರೆದಿದ್ದು, ಕೇಂದ್ರ ಬಜೆಟ್ 2026 ಮಂಡನೆಯಾದ ಮರುದಿನವೇ ಆಭರಣ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ.
ದೇಶೀಯ ಫ್ಯೂಚರ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇವತ್ತು ಗಣನೀಯವಾಗಿ ಕುಸಿದಿವೆ. ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಹಳದಿ ಲೋಹದ ಬೆಲೆ ಭಾರೀ ಇಳಿಕೆ ಕಂಡಿದ್ದು, ಗ್ರಾಹಕರಿಗೆ ದೊಡ್ಡ ಮಟ್ಟದ ನಿರಾಳ ತಂದಿದೆ.
ದೆಹಲಿ
- 24 ಕ್ಯಾರೆಟ್: ₹1,51,680
- 22 ಕ್ಯಾರೆಟ್: ₹1,39,050
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,153 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,890 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 300 ರೂ
ಇದನ್ನೂ ಓದಿ : ವರನನ್ನ ಮುಗಿಸಲು Loverಗೆ ಸುಪಾರಿ ಕೊಟ್ಟಿದ್ದೇ ವಧು..!

ಬೆಳ್ಳಿ ಬೆಲೆಯೂ ಸಹ ಸೋಮವಾರ ತೀವ್ರ ಇಳಿಕೆಯನ್ನು ಕಂಡಿದ್ದು, ಒಂದು ಗ್ರಾಂಗೆ ಸುಮಾರು ₹300 ರಂತೆ ಮಾರಾಟ ಆಗುತ್ತಿದೆ. 100 ಗ್ರಾಂ ಬೆಳ್ಳಿಯ ಬೆಲೆ ಸುಮಾರು ₹30,000ಕ್ಕೆ ಇಳಿದಿದೆ.
ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ ಸುಮಾರು ₹15,000+ ಆಗಿರುವುದು ವರದಿಗಳಿಂದ ತಿಳಿದುಬಂದಿದ್ದು, 22 ಕ್ಯಾರಟ್ ಹಾಗೂ 18 ಕ್ಯಾರಟ್ ಚಿನ್ನದ ಬೆಲೆಯೂ ಕ್ರಮವಾಗಿ ಕಡಿಮೆಯಾಗಿವೆ. silver/mc metals ಮಾರುಕಟ್ಟೆ ಕೂಡ ಅನುಕ್ರಮವಾಗಿ ತಗ್ಗುತ್ತಿದ್ದು, ಹೂಡಿಕೆದಾರರು ಮತ್ತು ಗ್ರಾಹಕರು ಮುಂದಿನ ದಿನಗಳಲ್ಲಿ ದರಗಳಲ್ಲಿನ ಬದಲಾವಣೆಗಳನ್ನು ಗಮನಿಸುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನದ ದರಕ್ಕೆ ಬಜೆಟ್ ನಂತರ ತುಸು ಬ್ರೇಕ್ ಬಿದ್ದಂತಾಗಿದೆ. ಮದುವೆ ಸಮಾರಂಭಗಳಿಗೆ ಚಿನ್ನ ಖರೀದಿಸಲು ಯೋಜಿಸುತ್ತಿರುವವರಿಗೆ ಇದು ಉತ್ತಮ ಸಮಯ ಎನ್ನಬಹುದು.

MUST WATCH : GOLD SILVER PRICE | ಅಬ್ಬಬ್ಬಾ… ಚಿನ್ನ, ಬೆಳ್ಳಿ ರೇಟ್ ಇಳಿತು ರೇಟ್ ಕೇಳಿದ್ರೆ ಫುಲ್ ಖುಷಿ ಆಗ್ತಿರಾ




