Raichur ನಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆಯೊಂದು ನಡೆದಿದೆ.

Raichur ಜಿಲ್ಲೆಯ ಸಿರವಾರ ತಾಲೂಕಿನ ಚಿಕ್ಕಹಣಗಿ ಗ್ರಾಮದಲ್ಲಿ ತಲೆತಗ್ಗಿಸುವಂತಹ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆ ತನ್ನ ಸೊಸೆಯನ್ನು ಮಾವನೊಬ್ಬ ಅತ್ಯಂತ ಭೀಕರವಾಗಿ ಹತ್ಯೆ ಮಾಡಿದ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.
ಸೊಸೆಯನ್ನು ಮುಗಿಸಲು ಪ್ಲಾನ್
ಹತ್ಯೆಗೀಡಾದ ಯುವತಿಯನ್ನು ರೇಖಾ (25) ಎಂದು ಗುರುತಿಸಲಾಗಿದೆ. ರೇಖಾ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಇತ್ತೀಚೆಗೆ ತವರು ಮನೆಗೆ ಬಂದಿದ್ದಳು. ರೇಖಾ ಅವರ ಮಾವ ಸಿದ್ದಪ್ಪ (50) ಎಂಬಾತನೇ ಈ ಭೀಕರ ಕೃತ್ಯ ಎಸಗಿದ ಆರೋಪಿ. ಸಿದ್ದಪ್ಪ ಸೊಸೆಯ ಜೊತೆಗಿನ ಕೌಟುಂಬಿಕ ಕಲಹವನ್ನು ಮನಸ್ಸಿನಲ್ಲಿಟ್ಟುಕೊಂಡು, ಆಕೆಯನ್ನು ಮುಗಿಸಲು ಸಂಚು ರೂಪಿಸಿ ಸಿರವಾರ ತಾಲೂಕಿನ ಅಣಗಿ ಗ್ರಾಮದ ಆಕೆಯ ತವರು ಮನೆಗೆ ತೆರಳಿದ್ದಾನೆ.
ಕತ್ತು ಸೀಳಿದ ಪಾಪಿ ಮಾವ!
ಮನೆಯಲ್ಲಿ ರೇಖಾ ಒಬ್ಬಳೇ ಇದ್ದದನ್ನು ಗಮನಿಸಿದ ಸಿದ್ದಪ್ಪ, ರೇಖಾ ಟಿವಿ ನೋಡುತ್ತಾ ಮಲಗಿದ್ದ ವೇಳೆ ಹರಿತವಾದ ಚಾಕುವಿನಿಂದ ಆಕೆಯ ಕುತ್ತಿಗೆಯನ್ನು ಸೀಳಿದ್ದಾನೆ. ಅನಿರೀಕ್ಷಿತ ದಾಳಿಯಿಂದ ಕಂಗೆಟ್ಟ ರೇಖಾ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ರಕ್ತದ ಮಡುವಿನಲ್ಲೇ ಮನೆಯಿಂದ ಹೊರಗೆ ಓಡಿ ಬಂದ ರೇಖ ರಸ್ತೆಯಲ್ಲಿ ನರಳಾಡುತ್ತಾ ಕೊನೆಯುಸಿರೆಳೆದಿದ್ದಾರೆ.
ಇದನ್ನು ಓದಿ : ಆಂಧ್ರಪ್ರದೇಶದಲ್ಲಿ Accident – ಚಾಲಕ ಸ್ಥಳದಲ್ಲೇ ಸಜೀವದಹನ

ಆರೋಪಿ ಅರೆಸ್ಟ್!
ಸೊಸೆಯನ್ನು ಕೊಂದ ಬಳಿಕ ಆರೋಪಿ ಸಿದ್ದಪ್ಪ ಸ್ಥಳದಿಂದ ಪರಾರಿಯಾಗಿದ್ದ. ಇನ್ನು ಘಟನೆ ಕುರಿತು ಮಾಹಿತಿ ಪಡೆದ ಕವಿತಾಳ ಪೊಲೀಸ್ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ನಂತರ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಸಿದ್ದಪ್ಪನನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.
ಪ್ರಕರಣ ದಾಖಲು
ನಾಲ್ಕು ತಿಂಗಳ ಗರ್ಭಿಣಿ ಎಂಬ ಮಾನವೀಯತೆಯೂ ಇಲ್ಲದ ಸಿದ್ದಪ್ಪ ಇಂತಹ ಘೋರ ಕೃತ್ಯ ಎಸಗಿರುವುದು ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ಕಾರಣವಾಗಿದೆ. ಈ ಕುರಿತು ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ವಿಚಾರಣೆ ಮುಂದುವರಿಸಲಾಗಿದೆ.

ಇದನ್ನು ನೋಡಿ : ದಿನ ವರದಕ್ಷಿಣೆ ತರುವಂತೆ ಪೀಡಿಸ್ತಿದ್ದ ಗಂಡ ಮನೆಗೆ ನುಗ್ಗಿ ಕೈ ಮುರಿದ ಕಿರಾತಕ




