Tumakuru ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಮನೆಗೆ ನುಗ್ಗಿ ಹಣ ಹಾಗೂ ಚಿನ್ನ ಕಳ್ಳತನಕ್ಕೆ ಯತ್ನಿಸುತ್ತಿದ್ದ ಇಬ್ಬರು ಕಳ್ಳರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Tumakuru ಜಿಲ್ಲೆಯ ತುರುವೇಕೆರೆ (Turuvekere) ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಮನೆಗೆ ನುಗ್ಗಿ ಹಣ-ಚಿನ್ನ ದೋಚುತ್ತಿದ್ದಾಗಲೇ ಗ್ರಾಮಸ್ಥರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ತಡರಾತ್ರಿ ಕಳ್ಳತನಕ್ಕೆ ಇಳಿದ ಆರೋಪ
ಸೋಮವಾರ ತಡರಾತ್ರಿ ಆಂಧ್ರಪ್ರದೇಶದ ಚಿತ್ತೂರು ಮೂಲದ ಇಬ್ಬರು ಕಳ್ಳರು ಗ್ರಾಮದ ಮನೆಯೊಂದಕ್ಕೆ ನುಗ್ಗಿ ಕಳ್ಳತನ ನಡೆಸಲು ಯತ್ನಿಸಿದ್ದಾರೆ. ಈ ವೇಳೆ ಅನುಮಾನಾಸ್ಪದ ಚಲನವಲನ ಗಮನಿಸಿದ ಸ್ಥಳೀಯರು ತಕ್ಷಣ ಎಚ್ಚೆತ್ತುಕೊಂಡಿದ್ದಾರೆ.
ಮಾಹಿತಿ ತಿಳಿದ ಗ್ರಾಮಸ್ಥರು ಕ್ಷಿಪ್ರವಾಗಿ ಇಡೀ ಮನೆಯನ್ನು ಸುತ್ತುವರಿದು, ಯಾವುದೇ ತಪ್ಪಿಸಿಕೊಳ್ಳುವ ಅವಕಾಶ ನೀಡದೇ ಇಬ್ಬರು ಕಳ್ಳರನ್ನು ಹಿಡಿದಿದ್ದಾರೆ. ನಂತರ ಅವರನ್ನು ತುರುವೇಕೆರೆ ಉಪಕೇಂದ್ರ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ.
ಇದನ್ನು ಓದಿ : Bengaluru ನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ suicide..!
ಹಣ, ಚಿನ್ನ ಮತ್ತು ಚಾಕು ವಶ
ಬಂಧಿತ ಕಳ್ಳರಿಂದ ಹಣ, ಚಿನ್ನಾಭರಣ, ಚಾಕು ಸೇರಿದಂತೆ ಇತರೆ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಗ್ರಾಮಸ್ಥರ ಸಾಹಸಕ್ಕೆ ಶ್ಲಾಘನೆ
ಗ್ರಾಮಸ್ಥರ ಸಮಯಪ್ರಜ್ಞೆ, ಧೈರ್ಯ ಮತ್ತು ಒಗ್ಗಟ್ಟಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಘಟನೆ ಇತರ ಗ್ರಾಮಗಳಿಗೆ ಮಾದರಿಯಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನು ನೋಡಿ : ಕರ್ನಾಟಕ- ಕೇರಳ ಗಡಿಯಲ್ಲಿ ರಾಜೀವ್ ಗೌಡ ಬಂಧನ : ಪೌರಾಯುಕ್ತೆ ಅಮೃತಾಗೌಡಗೆ ಬೆದರಿಕೆ ಹಾಕಿದ್ದ ರಾಜೀವ್ ಗೌಡ ಆರೆಸ್ಟ್




