Bangalore : ಗಣರಾಜ್ಯೋತ್ಸವ ರಜೆ ಮತ್ತು ವೀಕೆಂಡ್ ಒಟ್ಟಿಗೆ ಬರುವ ಹಿನ್ನೆಲೆಯಲ್ಲಿ ಊರಿಗೆ ಹೊರಟ ಪ್ರಯಾಣಿಕರಿಗೆ ಖಾಸಗಿ ಬಸ್ ಟಿಕೆಟ್ ದರಗಳಲ್ಲಿ ಭಾರೀ ಏರಿಕೆ ಕಂಡು ಬಂದಿದೆ.

Bangalore : ಗಣರಾಜ್ಯೋತ್ಸವ ರಜೆ ಹಾಗೂ ವೀಕೆಂಡ್ ಒಟ್ಟಿಗೆ ಬಂದಿರುವ ಹಿನ್ನೆಲೆಯಲ್ಲಿ ಊರಿಗೆ ತೆರಳಲು ಯೋಜಿಸಿದ್ದ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ಭಾರೀ ಶಾಕ್ ನೀಡಿದ್ದಾರೆ. ಇಂದಿನಿಂದಲೇ ಖಾಸಗಿ ಬಸ್ ಟಿಕೆಟ್ ದರದಲ್ಲಿ ಭಾರೀ ಏರಿಕೆ ಮಾಡಲಾಗಿದ್ದು, ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಾಲು ಸಾಲು ರಜೆ
ಜನವರಿ 24 (ಶನಿವಾರ), 25 (ಭಾನುವಾರ) ಮತ್ತು 26 (ಗಣರಾಜ್ಯೋತ್ಸವ) ಸೇರಿ ಮೂರು ದಿನಗಳ ಸಾಲು ಸಾಲು ರಜೆ ಇರುವುದರಿಂದ ರಾಜ್ಯದ ವಿವಿಧ ಭಾಗಗಳಿಗೆ ಪ್ರಯಾಣಿಕರ ಹರಿವು ಹೆಚ್ಚಾಗಿದೆ. ಇದರ ಪ್ರಯೋಜನ ಪಡೆದುಕೊಂಡ ಖಾಸಗಿ ಬಸ್ ಸಂಸ್ಥೆಗಳು ಟಿಕೆಟ್ ದರವನ್ನು ಅಸಾಮಾನ್ಯವಾಗಿ ಹೆಚ್ಚಿಸಿರುವುದು ಗಮನಕ್ಕೆ ಬಂದಿದೆ.
ಸ್ಲೀಪರ್ ಬಸ್ ದರಗಳು 2000 ರೂ. ಗಡಿ ದಾಟಿವೆ
ಸಾಮಾನ್ಯ ದಿನಗಳಲ್ಲಿ ₹500 ರಿಂದ ₹1000 ರವರೆಗೆ ಇದ್ದ ಸ್ಲೀಪರ್ ಬಸ್ ಟಿಕೆಟ್ ದರಗಳು ಇದೀಗ ₹2000 ಗಡಿ ದಾಟಿದ್ದು, ಕೆಲವು ಮಾರ್ಗಗಳಲ್ಲಿ ₹3000 ವರೆಗೆ ಏರಿಕೆಯಾಗಿದೆ. ಇದರಿಂದ ಮಧ್ಯಮ ವರ್ಗದ ಪ್ರಯಾಣಿಕರಿಗೆ ಭಾರೀ ಹೊರೆ ಉಂಟಾಗಿದೆ.
ಇದನ್ನು ಓದಿ : Janardhan Reddy ಮನೆಗೆ ಬೆಂಕಿ – 8 ಮಂದಿ ಪೊಲೀಸರ ವಶಕ್ಕೆ
Bengaluru To ಇತರೆ ನಗರಗಳ ಬಸ್ ಟಿಕೆಟ್ ದರಗಳ ಹೋಲಿಕೆ
ಮಂಗಳೂರು
- ಸಾಮಾನ್ಯ ದಿನದ ದರ: ₹500 – ₹800
- ಇಂದಿನ ದಿನದ ದರ: ₹1400 – ₹2000
ಉಡುಪಿ
- ಸಾಮಾನ್ಯ ದಿನದ ದರ: ₹600 – ₹750
- ಇಂದಿನ ದಿನದ ದರ: ₹1650 – ₹1699
ಚಿಕ್ಕಮಗಳೂರು
- ಸಾಮಾನ್ಯ ದಿನದ ದರ: ₹550 – ₹600
- ಇಂದಿನ ದಿನದ ದರ: ₹1500 – ₹1600
ಹಾಸನ
- ಸಾಮಾನ್ಯ ದಿನದ ದರ: ₹650 – ₹850
- ಇಂದಿನ ದಿನದ ದರ: ₹1000 – ₹1200
ಬೆಳಗಾವಿ
- ಸಾಮಾನ್ಯ ದಿನದ ದರ: ₹1200 – ₹1300
- ಇಂದಿನ ದಿನದ ದರ: ₹2500 – ₹3000
ಪ್ರಯಾಣಿಕರಿಗೆ KSRTC ಪರ್ಯಾಯ ವ್ಯವಸ್ಥೆ
ಈ ನಡುವೆ ಪ್ರಯಾಣಿಕರಿಗೆ ಅನುಕೂಲವಾಗುವ ಉದ್ದೇಶದಿಂದ ರಾಜ್ಯದ ಹಲವು ಜಿಲ್ಲೆಗಳತ್ತ ಕೆಎಸ್ಆರ್ಟಿಸಿ ಹೆಚ್ಚುವರಿ ಬಸ್ಗಳನ್ನು ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಖಾಸಗಿ ಬಸ್ಗಳ ಬದಲು ಸರ್ಕಾರಿ ಬಸ್ ಸೇವೆಗಳನ್ನು ಬಳಸಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚಿಸಿದೆ.
ಇದನ್ನು ನೋಡಿ : ಪ್ರಯಾಣಿಕರೇ ಎಚ್ಚರ : ರೈಲಿನಲ್ಲಿ `ಮದ್ಯ’ ಸಾಗಿಸಿದ್ರೆ 500 ರೂ. ದಂಡ, 6 ತಿಂಗಳು ಜೈಲು ಶಿಕ್ಷೆ ಫಿಕ್ಸ್!




