ಬೆಂಗಳೂರು ಗ್ರಾಮಾಂತರ ಜಿಲ್ಲೆಯ Doddaballapura ದಲ್ಲಿ 3 ಮತ್ತು 7 ವರ್ಷದ ಇಬ್ಬರು ಮಕ್ಕಳ ಮೇಲೆ ಅಮಾನವೀಯ ಹಲ್ಲೆ ನಡೆದ ಘಟನೆ ಭಯಾನಕವಾಗಿದೆ..

Doddaballapura : ಮಕ್ಕಳ ದೇಹದ ಮೇಲೆ ತೀವ್ರ ಬಾಸುಂಡೆಗಳು, ಒಂದು ಮಗುವಿನ ಕೈ ಮುರಿದಿರುವುದು ಕಂಡು ಬಂದಿದೆ.
ಮಕ್ಕಳ ಸಹಾಯಕ್ಕಾಗಿ ಸ್ಥಳೀಯರು ಚೈಲ್ಡ್ ಹೆಲ್ಪ್ಲೈನ್ ಗೆ ದೂರು ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರ, ಘಟನೆ ಬೆಳಕಿಗೆ ಬಂದಿದೆ. ಗಾಯಗೊಂಡ ಮಕ್ಕಳನ್ನು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ತಕ್ಷಣ ಚಿಕಿತ್ಸೆ ನೀಡಲಾಗಿದೆ.
ತಾಯಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿರುವಾಗ ಸಂಭವಿಸಿದ ದುರ್ಘಟನೆ
ಮಕ್ಕಳ ತಾಯಿ ಕೆಲಸಕ್ಕೆ ತೆರಳಿದ್ದಾಗ ಅಪರಿಚಿತ ದುರುಳರು ಮಕ್ಕಳ ಮೇಲೆ ಹಲ್ಲೆ ನಡೆಸಿದವರು ಎಂದು ತಿಳಿದು ಬಂದಿದೆ. ಘಟನೆಯ ನಂತರ ಮಕ್ಕಳು ಭಯದಿಂದ ಹಲ್ಲೆಯ ಬಗ್ಗೆ ಮಾತನಾಡಲು ಸಾಧ್ಯವಾಗಲಿಲ್ಲ.
ಇದನ್ನು ಓದಿ : ಲಾರಿ-ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಸವಾರ ಸ್ಥಳದಲ್ಲಿ ಮೃತ್ಯು
ಹಲ್ಲೆಯಿಂದ ಮಕ್ಕಳ ಮೈ, ಕೈ, ಕಾಲುಗಳ ಮೇಲೆ ತೀವ್ರ ಗಾಯ ಉಂಟಾಗಿದ್ದು, ಮಾನವೀಯತೆ ಪ್ರಶ್ನೆ ಮಾಡಿಸುವ ರೀತಿಯ ಘಟನೆ ಎನ್ನಲಾಗಿದೆ.
ಮಕ್ಕಳ ರಕ್ಷಣಾ ಘಟಕದ ತನಿಖೆ
ಈ ಪ್ರಕರಣವನ್ನು ಮಕ್ಕಳ ರಕ್ಷಣಾ ಘಟಕ ದಾಖಲಿಸಿಕೊಂಡಿದ್ದು, ದುರುಳರ ಪತ್ತೆಗಾಗಿ ಸತತ ತನಿಖೆ ನಡೆಯುತ್ತಿದೆ. ಸಾರ್ವಜನಿಕರು ಕೂಡ ಅರೋಗ್ಯಕರ ತನಿಖೆ ಮತ್ತು ಆರೋಪಿಗಳ ಬಂಧನ ಆಗುವಂತೆ ಆಗ್ರಹಿಸಿದ್ದಾರೆ.
ಇದನ್ನು ನೋಡಿ : ಪ್ರಜ್ವಲ್ ರೇವಣ್ಣ ವಿರುದ್ಧ ಅಪರಾಧ ಸಾಬೀತು; ತನಿಖಾ ತಂಡಕ್ಕೆ 25 ಲಕ್ಷ ರೂ. ಬಹುಮಾನ ಘೋಷಣೆ




