Bengaluru ಟ್ರಾಫಿಕ್ ಸಮಸ್ಯೆ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ ಇದೀಗ ಸಿಲಿಕಾನ್ ಸಿಟಿ ಸಂಚಾರ ದಟ್ಟಣೆಯ ಕಾರಣಕ್ಕಾಗಿ ವಿಶ್ವಮಟ್ಟದಲ್ಲಿ ಮತ್ತೆ ಸದ್ದು ಮಾಡಿದೆ.

ವಿಶ್ವದ ಅತಿಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನ ಪಡೆದಿದೆ. ನೆದರ್ಲೆಂಡ್ಸ್ ಮೂಲದ ‘ಟಾಮ್ಟಾಮ್’ ಸಂಸ್ಥೆ ಬಿಡುಗಡೆ ಮಾಡಿರುವ 2025ರ ಸಂಚಾರ ಸೂಚ್ಯಂಕ (Traffic Index) ವರದಿಯಲ್ಲಿ ಈ ವಿಚಾರ ಬಹಿರಂಗವಾಗಿದೆ.
ಮೊದಲ ಸ್ಥಾನದಲ್ಲಿ ಮೆಕ್ಸಿಕೊ
ವರದಿ ಪ್ರಕಾರ, ಸಂಚಾರ ದಟ್ಟಣೆ ಪಟ್ಟಿಯಲ್ಲಿ ಮೆಕ್ಸಿಕೊ ನಗರ ಮೊದಲ ಸ್ಥಾನದಲ್ಲಿದ್ದರೆ, ಭಾರತದ Silicon City ಎಂದು ಹೆಸರಾದ ಬೆಂಗಳೂರು ಎರಡನೇ ಸ್ಥಾನದಲ್ಲಿ ಸ್ಥಾನ ಪಡೆದಿದೆ. 2025ರಲ್ಲಿ ಬೆಂಗಳೂರಿನ ಸರಾಸರಿ ಸಂಚಾರ ದಟ್ಟಣೆ ಶೇ 74.4ಕ್ಕೆ ಏರಿಕೆಯಾಗಿದೆ. 2024ರಲ್ಲಿ ಇದು ಶೇ 72.7 ಆಗಿದ್ದು, ಒಂದೇ ವರ್ಷದಲ್ಲಿ ಶೇ 1.7ರಷ್ಟು ಹೆಚ್ಚ ಳ ಕಂಡುಬಂದಿದೆ.
ಕಾಮಗಾರಿಗಳು ಸಂಚಾರ ದಟ್ಟಣೆಗೆ ಕಾರಣವೇನು..?
Bengaluru ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ರಸ್ತೆ ಮೂಲಸೌಕರ್ಯದ ಮೇಲಿನ ಒತ್ತಡ ಹಾಗೂ ನಿರಂತರವಾಗಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳು ಸಂಚಾರ ದಟ್ಟಣೆಗೆ ಪ್ರಮುಖ ಕಾರಣಗಳೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿ : 29 ವರ್ಷಗಳ ಬಳಿಕ Dandupalya ಗ್ಯಾಂಗ್ನ ಕುಖ್ಯಾತ ಹಂತಕ ಅರೆಸ್ಟ್

ಬೆಂಗಳೂರಿಗೆ 2ನೇ ಸ್ಥಾನ!
ವಾಹನ ಸಂಚಾರದ ಸರಾಸರಿ ವೇಗದಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದ್ದರೂ, ಸಂಚಾರದ ಒತ್ತಡದಲ್ಲಿ ತೀವ್ರ ಇಳಿಕೆಯಾಗಿಲ್ಲ. 2024ರಲ್ಲಿ ಗಂಟೆಗೆ 16.6 ಕಿಲೋಮೀಟರ್ ಇದ್ದ ಸರಾಸರಿ ವೇಗ, 2025ರಲ್ಲಿ 17.6 ಕಿಲೋಮೀಟರ್ಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 15 ನಿಮಿಷಗಳಲ್ಲಿ ಸಾಗಬಹುದಾದ ಸರಾಸರಿ ದೂರ 4.2 ಕಿಲೋಮೀಟರ್ನಿಂದ 4.4 ಕಿಲೋಮೀಟರ್ಗೆ ಹೆಚ್ಚಾಗಿದೆ.
10 ಕಿಲೋಮೀಟರ್ ಪ್ರಯಾಣಕ್ಕೆ 36 ನಿಮಿಷ!
ಬೆಂಗಳೂರು ನಗರದಲ್ಲಿ 10 ಕಿಲೋಮೀಟರ್ ದೂರವನ್ನು ಕ್ರಮಿಸಲು ಸರಾಸರಿ 36 ನಿಮಿಷ 9 ಸೆಕೆಂಡ್ ಸಮಯ ಬೇಕಾಗುತ್ತಿದೆ ಎಂದು ವರದಿ ತಿಳಿಸಿದೆ. ಇದು ದಿನನಿತ್ಯ ನಗರದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ದುಬೈ ಮೂರನೇ ಸ್ಥಾನ
ಸಂಚಾರ ದಟ್ಟಣೆ ಪಟ್ಟಿಯಲ್ಲಿ ದುಬೈ ಮೂರನೇ ಸ್ಥಾನದಲ್ಲಿದ್ದರೆ, ಪೊಲ್ಯಾಂಡ್ನ ಲೊಡ್ಜ್ ನಗರ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಭಾರತದ ಪುಣೆ ನಗರ ಐದನೇ ಸ್ಥಾನದಲ್ಲಿದ್ದು, ಮುಂಬೈ 18ನೇ ಸ್ಥಾನದಲ್ಲಿದೆ.

ಇದನ್ನು ನೋಡಿ : ಗಂಡನನ್ನು ಕೊಂದು ರಾತ್ರಿ ಇಡೀ ಸೆಕ್ಸ್ ವಿಡಿಯೋ ನೋಡಿದ ಪತ್ನಿ!! ಆರೋಪಿ ಪತ್ನಿ ಬಂಧನ




