Bengaluru : ಲೇಡಿ ಫಿಟ್ನೆಸ್ ಇನ್ಫ್ಲೂಯೆನ್ಸರ್ಗೆ ಅಶ್ಲೀಲ ಮೆಸೇಜ್ – ಯುವತಿಗಾಗಿ ಹರಿಯಾಣದಿಂದ ಕರ್ನಾಟಕಕ್ಕೆ ಬಂದಿದ್ದ ಆರೋಪಿ ಅರೆಸ್ಟ್.

ಪಾಗಲ್ ಪ್ರೇಮಿಯೋರ್ವ ಲೇಡಿ ಫಿಟ್ನೆಸ್ ಇನ್ಫ್ಲೂಯೆನ್ಸರ್ಗೆ ಅಶ್ಲೀಲ ಮೆಸೇಜ್ ಮಾಡಿ ನಿರಂತರವಾಗಿ ಮಾನಸಿಕವಾಗಿ ಹಿಂಸಿಸಿದ್ದಾನೆ. ಅಷ್ಟಕ್ಕೂ ಬಿಡದೇ ಯುವತಿಯನ್ನು ಹುಡುಕಿ ಹರಿಯಾಣದಿಂದ ಕರ್ನಾಟಕಕ್ಕೆ ಬಂದು ಪೊಲೀಸರ ಬಲೆಗೆ ಬಿದ್ದಿರುವ ಘಟನೆ Bengaluru ನಗರದಲ್ಲಿ ನಡೆದಿದೆ.
ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ
ಹರಿಯಾಣ ಮೂಲದ ಸುಧೀರ್ ಕುಮಾರ್ ಬಂಧಿತ ಆರೋಪಿ. ಸಂತ್ರಸ್ತ ಯುವತಿ ಬೆಂಗಳೂರಲ್ಲಿ ಲೇಡಿ ಫಿಟ್ನೆಸ್, ನ್ಯೂಟ್ರೀಷಿಯನ್ ಇನ್ಫ್ಲೂಯೆನ್ಸರ್ ಆಗಿ ಕೆಲಸ ಮಾಡುತ್ತಿದ್ದು, ಇನ್ಸ್ಟಾ ಮೂಲಕ ಲೈಂಗಿಕವಾಗಿ ಪ್ರಚೋದಿಸುವಂತೆ ಮೆಸೇಜ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಇದನ್ನು ಓದಿ : ತುಮಕೂರಿನಲ್ಲಿ ನಡೆದಾಡುವ ದೇವರ ಪುಣ್ಯಸ್ಮರಣೆ

ಕರ್ನಾಟಕಕ್ಕೆ ಬಂದಿದ್ದ ಆರೋಪಿ ಅರೆಸ್ಟ್
ಇನ್ಸ್ಟಾಗ್ರಾಂನಲ್ಲಿ ಯುವತಿಯನ್ನು ನೋಡಿ ಆಕೆಯನ್ನು ಕಿರುಕುಳ ನೀಡಲು ಆರಂಭಿಸಿದ್ದ ಆರೋಪಿಯು, ಬಳಿಕ ವಾಟ್ಸಪ್ ನಂಬರ್ ಪಡೆದುಕೊಂಡು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ. ದಿನಗಳೆದಂತೆ ಬೆಂಬಿಡದೇ ಯುವತಿಯನ್ನು ಕಾಡಲು ಶುರುಮಾಡಿದ್ದ. ಕೊನೆಗೆ ಯುವತಿಯನ್ನು ಹುಡುಕಿಕೊಂಡು ಹರಿಯಾಣದಿಂದ ಕರ್ನಾಟಕಕ್ಕೆ ಬಂದಿದ್ದ. ಬೆಂಗಳೂರಿಗೆ ಬಂದು ಜಿಮ್ ಸಹೋದ್ಯೋಗಿಗಳ ಬಳಿ ವಿಚಾರಿಸಿದ್ದ. ವಿಚಾರ ತಿಳಿಯುತ್ತಿದ್ದಂತೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲು
ಇನ್ನು ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಮಹಿಳಾ ಠಾಣೆಯ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿ ಯನ್ನು ಬಂಧಿಸಿದ್ದಾರೆ.

ಇದನ್ನು ನೋಡಿ : SIDDAGANGA MUTT | ಹೇಗಿದೆ ಗೊತ್ತಾ ನಡೆದಾಡುವ ದೇವರ ಪುಣ್ಯಸ್ಮರಣೆ ವೈಭವ




