
CINEMA : ಬಾಲಿವುಡ್ ದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಜೀವನದ ಹೊಸ ಅಧ್ಯಾಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಹೌದು ಕತ್ರಿನಾ ಕೈಫ್ ದಂಪತಿ ತಮ್ಮ ಮೊದಲನೇ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಟೋ ಶೇರ್ ಮಾಡಿದ್ದಾರೆ.
ಬಿಳಿ ಬಣ್ಣದ ಉಡುಗೆ ಧರಿಸಿದ ಕತ್ರಿನಾ ಅವರ ಬೇಬಿ ಬಂಪ್ ಮೇಲೆ ವಿಕ್ಕಿ ಕೌಶಲ್ ಕೈ ಇಟ್ಟುಕೊಂಡಿರುವ ಪೋಟೋ ಶೇರ್ ಮಾಡಿದ್ದು, “ನಮ್ಮ ಜೀವನದ ಅತ್ಯುತ್ತಮ ಅಧ್ಯಾಯವನ್ನು ಸಂತೋಷದಿಂದ ಆಚರಿಸಲು ಸಿದ್ಧರಾಗಿದ್ದೇವೆ” ಎಂಬ ಬರೆದುಕೊಳ್ಳುವ ಮೂಲಕ ಈ ಜೋಡಿ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.
ಇನ್ನು 2021ರ ಡಿಸೆಂಬರ್ನಲ್ಲಿ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾದಲ್ಲಿ ವಿವಾಹವಾದ ಈ ಜೋಡಿ, ಮದುವೆಯ ಬಳಿಕ ತಮ್ಮ ತಮ್ಮ ವೃತ್ತಿ ಬದುಕಿನಲ್ಲಿ ತೊಡಗಿಸಿಕೊಂಡಿದ್ದರು. ಈ ವರ್ಷ ಮಾರ್ಚ್ನಲ್ಲಿ ಕತ್ರಿನಾ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಸಂತಾನಪೂಜೆ ಸಲ್ಲಿಸಿದ್ದರು. ಇದಾದ ಬಳಿಕ ಈ ಜೋಡಿ ಗುಡ್ ನ್ಯೂಸ್ ನೀಡಿದ್ದಾರೆ.




