Dina Bhavishya : 2026 ಜನವರಿ 17ರ ಶನಿವಾರವಾದ ಇಂದು, ಚಂದ್ರನ ಸ್ಥಾನ ಬದಲಾವಣೆಯಿಂದ ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

Dina Bhavishya : ಮಕರ ರಾಶಿಯಲ್ಲಿ ಸೂರ್ಯ, ಬುಧ, ಶುಕ್ರ ಮತ್ತು ಮಂಗಳ ಗ್ರಹಗಳ ಉಪಸ್ಥಿತಿಯು ಚತುರ್ಗ್ರಹಿ ಯೋಗವನ್ನು ಸೃಷ್ಟಿಸುತ್ತದೆ. ಒಟ್ಟಾರೆ ಎಲ್ಲಾ ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ.
ಮೇಷ ರಾಶಿ
ನೀವು ಮಾಡಬೇಕೆಂದಿರುವ ಕೆಲಸಗಳನ್ನು ಧೈರ್ಯದಿಂದ ಮಾಡಿ; ಆರಂಭದಲ್ಲಿ ವಿರೋಧಿಸಿದವರೇ ಮುಂದೆ ನಿಮ್ಮನ್ನು ಪ್ರಶಂಸಿಸುವರು.
ಪರಿವರ್ತನೆಯ ಗಾಳಿಗೆ ಅನುಗುಣವಾಗಿ ನಡೆದು, ನಿಮ್ಮ ಸೃಜನಶೀಲತೆಯಿಂದ ಯಶಸ್ಸು ಸಾಧಿಸುವಿರಿ. ಬ್ಯಾಂಕ್ ನೌಕರರಿಗೆ ಅನಿರೀಕ್ಷಿತವಾಗಿ ವರ್ಗಾವಣೆ ಆದೇಶ ಬರಬಹುದು.
ವೃಷಭ ರಾಶಿ
ಇಂದು ಜೀವನ ಪ್ರಗತಿಯ ದಾರಿಯಲ್ಲಿ ಸಾಗಲಿದೆ. ವೃತ್ತಿ ರಹಸ್ಯಗಳನ್ನು ಯಾರಿಗೂ ಹೇಳದೆ ಜಾಗರೂಕರಾಗಿರಿ. ರಾಜಕಾರಣಿಗಳು ತಮ್ಮ ನಿರ್ಧಾರದಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಉತ್ತಮ, ಸ್ತ್ರೀಯರು ಮಾತಿನ ಮೇಲೆ ಹಿಡಿತವಿರಿಸದಿದ್ದರೆ ಮನೆಯಲ್ಲಿಅಶಾಂತಿ ಉಂಟಾಗಬಹುದು.
ಮನದ ಗೊಂದಲಗಳು ದೂರವಾಗುತ್ತವೆ, ಹಣಕಾಸು ಹರಿವು ಉತ್ತಮವಾಗಿರಲಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯವಿಲ್ಲದೆ ಮನೆ ವೈದ್ಯರ ಸಲಹೆ ಪಡೆಯಿರಿ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಗಮನ ಕೊಡಿ
ಮಿಥುನ ರಾಶಿ
ಇಂದು ಬಹು ದಿನಗಳಿಂದ ಬರಬೇಕಾಗಿದ್ದ ಹಣ ಒಟ್ಟಿಗೆ ದೊರಕುವುದರಿಂದ ಹಣಕಾಸಿನ ಚಿಂತೆ ಇರದು. ವೃತ್ತಿಯಲ್ಲಿ ಹೊಸ ಅವಕಾಶಗಳು ಸಿಗಲಿದ್ದು, ಹೊಸ ಮನೆ ಅಥವಾ ಆಸ್ತಿ ಖರೀದಿಗೆ ಸಕಾಲವಾಗಿದೆ.
ಅತಿಯಾದ ಉದ್ವೇಗವನ್ನು ತಪ್ಪಿಸಿ, ಮಾತಿನಲ್ಲಿ ಸೌಜನ್ಯ ಕಾಪಾಡಿಕೊಳ್ಳಿ. ಕುಟುಂಬದ ಹಿರಿಯರು ಆಧ್ಯಾತ್ಮದ ಕಡೆ ಹೆಚ್ಚು ಒಲವು ತೋರಿ, ಅವರು ಸಂಕಲ್ಪಿಸಿದ ಕ್ಷೇತ್ರಕ್ಕೆ ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ.
ಕಟಕ ರಾಶಿ
ಇಂದು ದಂಪತಿಗಳ ನಡುವಿನ ವಿರಸ ಸರಸವಾಗಲಿದೆ ಮತ್ತು ಭಿನ್ನಾಭಿಪ್ರಾಯಕ್ಕೆ ಕಾರಣರಾದವರು ತಾವಾಗಿಯೇ ಕ್ಷಮೆ ಕೇಳುವರು. ಯೋಜನೆಗಳ ಕುರಿತು ಅನುಭವಿಗಳ ಸಲಹೆ ಪಡೆಯುವುದು ಒಳಿತು; ಕೆಲಸದಲ್ಲಿ ವಿಳಂಬ ಸಂಭವಿಸಬಹುದು.
ಮನೆಯ ಮಂಗಳಕಾರ್ಯಕ್ಕೆ ಗುರುಹಿರಿಯರ ಆಶೀರ್ವಾದ ದೊರೆಯುತ್ತದೆ. ಉದರ ಸಂಬಂಧಿತ ತೊಂದರೆಗಳಿಗೆ ಸೂಕ್ತ ಚಿಕಿತ್ಸೆಯಿಂದ ಪರಿಹಾರ ಸಿಗಲಿದೆ. ವಿಜ್ಞಾನಿಗಳಿಗೆ ಸಂಶೋಧನೆಯಲ್ಲಿ ಪ್ರಗತಿ, ವಿದ್ಯಾರ್ಥಿಗಳಿಗೆ ಶುಭ ದಿನಗಳು; ಸ್ನೇಹಿತರೊಂದಿಗೆ ಹಳೆಯ ವೈಮನಸ್ಸನ್ನು ಕೆದಕಬೇಡಿ.
ಸಿಂಹ ರಾಶಿ
ಇಂದು ನಿಮ್ಮ ಸಂಕಷ್ಟಗಳು ಮಂಜಿನಂತೆ ಕರಗಿ ಹೋಗಿ, ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಹೊಸ ಜವಾಬ್ದಾರಿಗಳು ಬರಲಿದ್ದು, ಗ್ರಾಹಕರೊಂದಿಗೆ ವ್ಯವಹರಿಸುವಾಗ ತಾಳ್ಮೆ ಅಗತ್ಯ.
ಮುಂಗೋಪ ಮತ್ತು ಅಚಾತುರ್ಯ ನಿರ್ಧಾರಗಳಿಂದ ನಷ್ಟವಾಗುವ ಸಾಧ್ಯತೆ ಇರುವುದರಿಂದ ಹಣಕಾಸು ವ್ಯವಹಾರದಲ್ಲಿ ಎಚ್ಚರ ವಹಿಸಿ.
ಬಂಧುಗಳಿಂದ ವಿರೋಧ ಎದುರಾಗಬಹುದು; ತಾಳ್ಮೆಯಿಂದ ವರ್ತಿಸಿದರೆ ಸರ್ಕಾರ ಸಂಬಂಧಿತ ಕೆಲಸಗಳು ರಾಜಕೀಯ ಮುಖಂಡರ ನೆರವಿನಿಂದ ನೆರವೇರುತ್ತವೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಇಂದು ಆರ್ಥಿಕ ಮುಗ್ಗಟ್ಟು ಎದುರಾಗಬಹುದು; ಅದರ ಕಾರಣವನ್ನು ಹುಡುಕಿದರೆ ಪರಿಹಾರವೂ ಸಿಗುತ್ತದೆ. ಹಣವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿ ಮತ್ತು ಬಂದಿರುವ ಅವಕಾಶಗಳಲ್ಲಿ ಸೂಕ್ತವಾದುದನ್ನು ಆಯ್ಕೆಮಾಡಿ.
ಅತಿಯಾದ ಮಾತುಗಳಿಂದ ವೈರತ್ವ ಉಂಟಾಗಬಹುದು; ಇತರರ ಮಾತು ನಂಬಿ ಕೊಟ್ಟ ಹಣ ಸಮಯಕ್ಕೆ ವಾಪಸ್ ಬರದ ಸಾಧ್ಯತೆ ಇದೆ.
ತುಲಾ ರಾಶಿ
ಇಂದು ಅತಿಯಾದ ಆತ್ಮವಿಶ್ವಾಸ ಕಾರ್ಯ ಹಾನಿಗೆ ಕಾರಣವಾಗಬಹುದು, ಆದರೆ ಧೃತಿಗೆಡುವ ಅಗತ್ಯವಿಲ್ಲ. ಉಪನ್ಯಾಸ ಮತ್ತು ಭಾಷಣಗಳ ಮೂಲಕ ಜನರನ್ನು ಆಕರ್ಷಿಸುವಿರಿ; ಆಸ್ತಿ ಸಂಬಂಧಿತ ದಾಖಲೆಗಳು ಕೈ ಸೇರಲಿವೆ. ಹಣಕಾಸು ಉತ್ತಮವಾಗಿದ್ದು ವಿವಿಧ ಮೂಲಗಳಿಂದ ಆದಾಯ ಬರಲಿದೆ, ಉಳಿತಾಯಕ್ಕೆ ಗಮನ ಕೊಡಿ.
ಕುಟುಂಬದಲ್ಲಿ ಸಣ್ಣ ಮಾತಿನಿಂದ ಕಲಹ ಉಂಟಾಗಬಹುದು; ಹಿರಿಯರ ಮಧ್ಯಸ್ಥಿಕೆ ಉಪಯುಕ್ತ. ಪ್ರೇಮಿಗಳು ವಿಹಾರಕ್ಕೆ ಸಿದ್ಧರಾಗುವರು ಮತ್ತು ಬಾಕಿ ಹಣ ಸಕಾಲದಲ್ಲಿ ವಸೂಲಾಗುತ್ತದೆ.
ವೃಶ್ಚಿಕ ರಾಶಿ
ಇಂದು ಕೆಲಸಗಳಲ್ಲಿ ಯಶಸ್ಸು ಸಿಗುವುದು. ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಆರಂಭಿಕ ಹಂತದಲ್ಲೇ ಚಿವುಟಿ ಹಾಕಲು ಪ್ರಯತ್ನಿಸಿ. ವ್ಯಾಪಾರ ವಹಿವಾಟುಗಳು ಚೆನ್ನಾಗಿ ನಡೆದರೂ ನಿರೀಕ್ಷಿತ ಲಾಭ ದೊರೆಯದೆ ಹೋಗಬಹುದು. ಖಾಸಗಿ ಕಂಪನಿ ನೌಕರರು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗುವುದು. ಪ್ರಯಾಣದಲ್ಲಿ ತುಸು ಎಚ್ಚರಿಕೆಯಿಂದ ಇರಿ.
ಸೋದರಿಯ ಆಗಮನದಿಂದ ಮನೆಯಲ್ಲಿ ಸಂತಸ ಮೂಡಲಿದೆ. ವಿದೇಶಿ ಸ್ನೇಹಿತರಿಂದ ಹೇರಳ ಉಡುಗೊರೆ ಪಡೆಯುವಿರಿ. ಸಹೋದ್ಯೋಗಿಗಳು ನಿಮ್ಮನ್ನು ಹೊಗಳಿ ಅಟ್ಟಕ್ಕೇರಿಸುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರ ಅಗತ್ಯ.
ಧನು ರಾಶಿ
ಇಂದು ಅತಿಯಾದ ಪರಿಶ್ರಮ ಅಥವಾ ವೃಥಾ ತಿರುಗಾಟದಿಂದ ಬೆನ್ನುನೋವು ಕಾಣಿಸಿಕೊಳ್ಳಬಹುದು. ಹಣಕಾಸು ನೀವು ಬಯಸಿದಂತೆ ದೊರೆಯಲಿದೆ, ಆದರೆ ಬಂಧುಗಳ ಆರೋಗ್ಯದ ಹೊಣೆ ನಿಮ್ಮ ಮೇಲೆ ಬೀಳುವ ಸಾಧ್ಯತೆ ಇದೆ.
ಸಂಬಂಧವಿಲ್ಲದ ವಿಚಾರಗಳಿಂದ ದಂಪತಿಗಳಲ್ಲಿ ಕಲಹ ಉಂಟಾಗಬಹುದು; ಹೊಸ ಕೆಲಸಗಳು ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಡುವವು. ಹಿರಿಯರನ್ನು ತೀರ್ಥಯಾತ್ರೆಗೆ ಕರೆದೊಯ್ಯುವುದು ಅಥವಾ ಅದರ ವ್ಯವಸ್ಥೆ ಮಾಡುವುದರಿಂದ ನಿಮಗೆ ವಿಶೇಷ ಪುಣ್ಯ ದೊರೆಯಲಿದೆ.
ಮಕರ ರಾಶಿ
ಇಂದು ಶ್ರದ್ಧೆ ಮತ್ತು ಶ್ರಮದಿಂದ ಯಶಸ್ಸು ಕಾಣುವಿರಿ. ಬಂಧು–ಸ್ನೇಹಿತರಿಂದ ಬಾಕಿ ಹಣ ವಸೂಲಾಗುತ್ತದೆ, ವ್ಯಾಪಾರದಲ್ಲಿ ಲಾಭ ಹಾಗೂ ವಿದೇಶದಿಂದ ಬರುವ ವಾರ್ತೆ ವೃದ್ಧಿಗೆ ಸಹಕಾರಿಯಾಗುತ್ತದೆ. ಆರೋಗ್ಯ ಸುಧಾರಿಸಿ, ಹಿಂದಿನ ಸಾಲ ತೀರಿಸಲು ಸಕಾಲ;
ವಿದ್ಯಾರ್ಥಿಗಳು ಅಧ್ಯಯನಕ್ಕೆ ಹೆಚ್ಚು ಗಮನ ಕೊಡಿ. ಸ್ನೇಹಿತರ ಮಾತಿನಿಂದಾದ ನೋವನ್ನು ಮರೆಯಲು ಪ್ರಯತ್ನಿಸಿ, ದಂಪತಿಗಳ ನಡುವಿನ ಸಾಮರಸ್ಯ ಹೆಚ್ಚುತ್ತದೆ.
ಕುಂಭ ರಾಶಿ
ಇಂದು ಸ್ನೇಹಿತರೆಂದು ನಂಬಿದವರಿಂದ ಉಂಟಾದ ಸಮಸ್ಯೆಗಳು ಚಿಂತೆ ತರಬಹುದು, ಆದರೆ ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ನಿರ್ವಹಣೆಯಿಂದ ಲಾಭ ಸಿಗಲಿದೆ. ಆರೋಗ್ಯದ ಕಡೆ ಅಲಕ್ಷ್ಯ ಬೇಡ; ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಕೆಲಸಗಳು ನಿಮ್ಮತ್ತ ಬರುತ್ತವೆ.
ನ್ಯಾಯವಾದಿಗಳು ವೃತ್ತಿಯಲ್ಲಿ ಯಶಸ್ಸು ಕಾಣುವರು. ಕುಟುಂಬದಲ್ಲಿ ಅನವಶ್ಯಕ ಗೊಂದಲ ತಪ್ಪಿಸಿ, ಭಗವಂತನ ಆರಾಧನೆಯಿಂದ ಆತ್ಮಬಲ ಹೆಚ್ಚಿಸಿಕೊಳ್ಳಿ. ಮತ್ತೊಬ್ಬರ ವಿಚಾರಕ್ಕೆ ತಲೆಕೆಡಿಸಿಕೊಳ್ಳದೆ ಮುನ್ನಡೆಯಿರಿ ಮತ್ತು ವೃತ್ತಿ ರಹಸ್ಯವನ್ನು ಯಾರಿಗೂ ಹೇಳಬೇಡಿ; ಜೀವನ ಪ್ರಗತಿಯ ಪಥದಲ್ಲೇ ಸಾಗುತ್ತದೆ.
ಮೀನ ರಾಶಿ
ಇಂದು ನಿಮ್ಮ ಕೆಲಸಗಳು ಅಡೆತಡೆಗಳಿಲ್ಲದೆ ಸಾಗಲಿದ್ದು, ಶ್ರಮ ಮತ್ತು ನಿಷ್ಠೆಯಿಂದ ಉತ್ತಮ ಆದಾಯ ಪಡೆಯುವಿರಿ. ಖರ್ಚು ವೆಚ್ಚಗಳ ಮೇಲೆ ನಿಗಾ ಇರಲಿ.
ಸ್ಥಿರ–ಚರ ಆಸ್ತಿ ವಿಚಾರಗಳಲ್ಲಿ ಬಂಧುಗಳ ನಡುವೆ ಮನಸ್ತಾಪ ಉಂಟಾಗಬಹುದು; ಗುರುಹಿರಿಯರ ಮಧ್ಯಸ್ಥಿಕೆಯಿಂದ ಪರಿಹಾರ ದೊರೆಯಲಿದೆ.




